Advertisement
ಇದೀಗ ಚಂಡೀಗಢದ ಆಸ್ಪತ್ರೆಯೊಂದರ ವೀಡಿಯೋ ವೈರಲ್ ಆಗಿದ್ದು ಜನರು ಮಾತ್ರ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಮಾತ್ರವಲ್ಲದೇ ಅಲ್ಲಿಗೆ ತೆರಳಲು ಭಯ ಪಡುತ್ತಿದ್ದಾರಂತೆ. ಆಸ್ಪತ್ರೆಯಲ್ಲಿ ಮೃತಪಟ್ಟ ದೇಹದ ಆತ್ಮಗಳು ಮತ್ತೆ ಆಸ್ಪತ್ರೆಯಲ್ಲಿ ಉಪಟಳವನ್ನು ನೀಡುತ್ತವೆ ಎಂಬ ವಾದಕ್ಕೆ ಮರುಜೀವ ಬಂದಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸಲು ಬಳಸುವ ವ್ಹೀಲ್ ಚಯರ್ ಗಳು ಇರುತ್ತವೆ. ಇಳಿಜಾರು ಪ್ರದೇಶವಾಗಿದ್ದರೆ ಮೆಲ್ಲ ದೂಡಿ ಬಿಟ್ಟರೆ ವ್ಹೀಲ್ ಚಯರ್ ಗಳು ಅದರಷ್ಟಕ್ಕೆ ಒಂದಷ್ಟು ದೂರ ಚಲಿಸುತ್ತದೆ. ಇದು ಹಾಗಲ್ಲ. ಚಂಡೀಗಢದ ಪೋಸ್ಟ್ ಗ್ರ್ಯಾಜುವೇಟ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ನಡೆಸಿದ ಅಧ್ಯಯನ ಕೇಂದ್ರದಲ್ಲಿ ರಾತ್ರಿ ಹೊತ್ತು ಮೆಟ್ಟಿಲ ಬಳಿಕ ಕೆಳಗೆ ಇಟ್ಟಿದ್ದ ವ್ಹೀಲ್ ಚಯರ್ ತನ್ನಷ್ಟಕ್ಕೆ ಇಡೀ ಆಸ್ಪತ್ರೆಯಲ್ಲಿ ಓಡಾಡಲು ಶುರುಮಾಡಿದೆ. ಇದುನ ಸಿಸಿ ಟಿವಿ ಕೆಮರಾದಲ್ಲಿ ರೆಕಾಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಒಂದೇ ವೇಗದಲ್ಲಿ ಚಲಿಸಿದ್ದು, ಮಾತ್ರವಲ್ಲದೇ ಮೆಟ್ಟಿಲುಗಳನ್ನು ಏರಿ ಕ್ರಮಿಸಿದ್ದು, ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಈ ವ್ಹೀಲ್ ಚಯರ್ ತನ್ನಷ್ಟಕ್ಕೆ ಹೋಗುತ್ತಿರುವುದನ್ನು ಆಸ್ಪತ್ರೆಯ ಕೆಲವು ಸಿಬಂದಿಗಳು ನೋಡಿದ್ದು, ಆ ದೃಶ್ಯವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.