ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತು ದಾಸ್ತಾನಿನಿಂದ, ಮುಕ್ತ ಮಾರುಕಟ್ಟೆಗೆ ಗೋಧಿ ಮಾರಾಟ ಮಾಡಿದೆ. ಪರಿಣಾಮ ಕಳೆದ 7 ದಿನಗಳಲ್ಲಿ ಗೋಧಿ ಬೆಲೆ ಶೇ.10ರಷ್ಟು ಕಡಿಮೆಯಾಗಿ, ಗ್ರಾಹಕರಿಗೆ ಅನುಕೂಲವಾಗಿದೆ ಎಂದು ಸರ್ಕಾರ ತಿಳಿಸಿದೆ.
ಬೆಲೆ ಹೆಚ್ಚಳವನ್ನು ಪರೀಕ್ಷಿಸಲೆಂದು ಸರ್ಕಾರ, ತುರ್ತು ದಾಸ್ತಾನಿನ 30 ಟನ್ ಗೋಧಿ ಸಂಗ್ರಹವನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಲು ನಿರ್ಧರಿಸಿತ್ತು.
ಅದರಂತೆ ಮೊದಲ ಎರಡು ದಿನಗಳಲ್ಲಿ 9.2 ಲಕ್ಷ ಟನ್ ಗೋಧಿಯನ್ನು ಕ್ವಿಂಟಲ್‌ಗೆ 2,474 ರೂ.ಗಳಂತೆ ಮಾರಾಟ ಮಾಡಲಾಗಿದೆ.
25 ಲಕ್ಷ ಟನ್ ಗೋಧಿಯನ್ನು ದೊಡ್ಡ ಪ್ರಮಾಣದ ಬಳಕೆದಾರರು ಹಾಗೂ ಗಿರಣಿಯವರಿಗೆ, 3 ಲಕ್ಷ ಟನ್ ಗೋಧಿಯನ್ನು ನಫೇಡ್‌ನಂಥ ಸಂಸ್ಥೆ ಹಾಗೂ 2ಲಕ್ಷ ಟನ್ ಅನ್ನು ರಾಜ್ಯಸರ್ಕಾರಿಗಳಿಗೆ ಮಾರಾಟ ಮಾಡಿದೆ.