Advertisement

ಮುಂದಿನ ವರ್ಷದಿಂದ ಲಕ್ಷಾಂತರ ಸ್ಮಾರ್ಟ್ ಫೋನ್ ಗಳ ವಾಟ್ಸ್ಯಾಪ್ ಕೆಲಸ ಮಾಡುವುದಿಲ್ಲ –ಕಾರಣ?

10:15 AM Dec 12, 2019 | Mithun PG |

ನ್ಯೂಯಾರ್ಕ್ : ಜಗತ್ತಿನಾದ್ಯಂತ ಮುಂದಿನ ವರ್ಷದಿಂದ ಲಕ್ಷಾಂತರ ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ಯಾಪ್ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂದು ಫೇಸ್ ಬುಕ್ ಸಂಸ್ಥೆ ಅಧಿಕೃತವಾಗಿ  ತಿಳಿಸಿದೆ.

Advertisement

ಈಗಾಗಲೇ ವಾಟ್ಸಪ್ ಅಪರೇಟಿಂಗ್ ಸಿಸ್ಟಮ್, ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಮಾತ್ರವಲ್ಲದೆ ಹಳೆಯ ಪೋನ್ ಗಳಲ್ಲಿ ಹೊಸ ಅಕೌಂಟ್ ಕ್ರಿಯೇಟ್ ಮಾಡುವ  ಮತ್ತು ಈಗಾಗಲೇ ಇರುವ ಅಕೌಂಟ್ ಗಳ ಲಾಗಿನ್ ಮಾಡುವ ಅವಕಾಶವನ್ನು ಕೂಡ ಸ್ಥಗಿತಗೊಳಿಸಿದೆ. ಅದಾಗ್ಯೂ ಡಿಸೆಂಬರ್ 31 ರಿಂದ ಎಲ್ಲಾ ವಿಂಡೋಸ್ ಪೋನ್ ಗಳಿಂದ ತನ್ನ ಸೇವೆಯನ್ನು ಹಿಂತೆಗೆದುಕೊಳ್ಳಲಿದೆ. ಮಾತ್ರವಲ್ಲದೆ ಮೈಕ್ರೋಸಾಫ್ಟ್ ಕೂಡ ವಿಂಡೋಸ್ 10 ಮೊಬೈಲ್ ಓಎಸ್ ಗೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳಲಿದೆ ಎಂದು ಫೇಸ್ ಬುಕ್ ತಿಳಿಸಿದೆ.

2020ರ ಫೆಬ್ರವರಿ 1  ರಿಂದ ಯಾವುದೇ ಐ ಫೋನ್ ಐಓಎಸ್ 8 ಅಥವಾ ಅದಕ್ಕಿಂತ ಹಳೆಯ ವರ್ಷನ್ ಗಳಲ್ಲಿ ವಾಟ್ಸ್ಯಾಪ್ ಸೇವೆ ಲಭ್ಯವಿರುವದಿಲ್ಲ. ಮಾತ್ರವಲ್ಲದೆ ಅ್ಯಂಡ್ರಾಯ್ಡ್ ನ 2,3,7 ಅಥವಾ ಅದಕ್ಕಿಂತ ಹಳೆ ವರ್ಷನ್ ಗಳಲ್ಲೂ ಇದರ ಸೇವೆ ಸ್ಥಗಿತಗೊಳ್ಳಲಿದೆ.

ಫೇಸ್ ಬುಕ್ ಸಂಸ್ಥೆ 2014 ರಲ್ಲಿ 19 ಬಿಲಿಯನ್ ಡಾಲರ್ ಗೆ ವಾಟ್ಸಾಪ್ ಅನ್ನು ಖರೀದಿಸಿತ್ತು. ಮಾತ್ರವಲ್ಲದೆ ಜನಪ್ರಿಯ ಮೆಸೆಂಜಿಂಗ್ ಸೇವೆಯನ್ನು ಮೆಸೆಂಜರ್ ಮತ್ತು ಇನ್ ಸ್ಟಾಗ್ರಾಂ ನೊಂದಿಗೆ ಒಗ್ಗೂಡಿಸುವ ಉದ್ದೇಶವನ್ನು ಹೊಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next