Advertisement

ನಿಮಗೆ ಗೊತ್ತೇ ? ಜೂನ್‌ 30ರಿಂದ ವಾಟ್ಸಾಪ್‌ ಈ ಫೋನ್‌ಗಳಲ್ಲಿ ಅಲಭ್ಯ

07:41 PM Jun 13, 2017 | udayavani editorial |

ಹೊಸದಿಲ್ಲಿ : ವಾಟ್ಸಾಪ್‌ ಬಳಕೆದಾರರೇ ಗಮನಿಸಿ –  ಇದೇ ಜೂನ್‌ 30ರಿಂದ ವಾಟ್ಸಾಪ್‌ ಸೇವೆ ಕೆಲವೊಂದು ಫೋನ್‌ಗಳಲ್ಲಿ ಲಭ್ಯವಿರುವುದಿಲ್ಲ; ಒಂದೊಮ್ಮೆ ನೀವು ಅಂತಹ ಫೋನ್‌ಗಳನ್ನು ಬಳಸುವವರಾಗಿದ್ದರೆ, ಬೇರೊಂದು ಫೋನ್‌ ಖರೀದಿಸುವುದೇ ಒಳಿತು.

Advertisement

ಇದೇ ಜೂನ್‌ 30ರಿಂದ ಈ ಕೆಳಗಿನ ಫೋನ್‌ಗಳಿಗೆ ತನ್ನ ಸೇವೆ ಲಭ್ಯವಿರುವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ :

1. ಬ್ಲಾಕ್‌ ಬೆರಿ ಓಎಸ್‌
2. ಬ್ಲಾಕ್‌ ಬೆರಿ 10
3. ನೋಕಿಯಾ ಎಸ್‌ 40
4. ನೋಕಿಯಾ ಸಿಂಬಿಯಾನ್‌ ಎಸ್‌ 60

ವಾಟ್ಸಾಪ್‌ ಪ್ರಕಾರ “ಈ ಮೇಲಿನ ಫೋನುಗಳು ಭವಿಷ್ಯದಲ್ಲಿ  ನಾವು ವಿಸ್ತರಿಸಬಯಸುವ ನಮ್ಮ ಸೇವೆಯ ಗುಣ ಲಕ್ಷಣಗಳನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ; ಆದುದರಿಂದ ಬಾಧಿತ ಗ್ರಾಹಕರು ಹೊಸ ಓಎಸ್‌ ಆವೃತ್ತಿಗೆ upgrade ಮಾಡಿಕೊಳ್ಳಬೇಕೆಂದು ನಾವು ಶಿಫಾರಸು ಮಾಡುತ್ತೇವೆ ಅಥವಾ ಓಎಸ್‌ 2.3.3+, ಐಓಎಸ್‌ 7+ ನಲ್ಲಿ ಕಾರ್ಯನಿರ್ವಹಿಸುವ ಐಫೋನ್‌  ಅಥವಾ ವಿಂಡೋಸ್‌ ಫೋನ್‌ 8+ಗೆ ವರ್ಗಾಯಿಸಿಕೊಳ್ಳಬೇಕೆಂದು ಸೂಚಿಸುತ್ತೇವೆ’. 

“ಈ ಮೇಲಿನ ಉಪಕರಣಗಳನ್ನು ನೀವು ಹೊಂದಿದಾಗ ಅದರಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು ಮತ್ತು ನಿಮ್ಮ ಹೊಸ ಉಪಕರಣದಲ್ಲಿ ನಿಮ್ಮ ಫೋನ್‌ ನಂಬರನ್ನು ಪರಿಶೀಲಿಸಿಕೊಳ್ಳಬೇಕು. ನೆನಪಿಡಿ – ವಾಟ್ಸಾಪ್‌ ಅನ್ನು ಒಂದು ಉಪಕರಣದಲ್ಲಿ, ಒಂದು ಬಾರಿಗೆ, ಒಂದು ಫೋನ್‌ ನಂಬರ್‌ನಲ್ಲಿ  ಮಾತ್ರವೇ ಕ್ರಿಯಾಶೀಲಗೊಳಿಸಬಹುದು.’

Advertisement

“ಆದರೆ ನಿಮ್ಮ ಚ್ಯಾಟ್‌ ಹಿಸ್ಟರಿಯನ್ನು ಉಭಯ ವೇದಿಕೆಗಳಿಗೆ ವರ್ಗಾಯಿಸಿಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ. ಆದರೆ ನಿಮ್ಮ ಚಾಟ್‌ ಹಿಸ್ಟರಿಯನ್ನು, ಜೋಡಿಸಲ್ಪಟ್ಟ ಇ-ಮೇಲ್‌ಗೆ ವರ್ಗಾಯಿಸುವ ಆಯ್ಕೆಯನ್ನು ವಾಟ್ಸಾಪ್‌ ಒದಗಿಸುತ್ತದೆ.’

2017ರ ಆರಂಭದಿಂದಲೇ ವಾಟ್ಸಾಪ್‌ ಸೇವೆ ದೊರಕದ ಫೋನ್‌ಗಳ ಈ ರೀತಿಯಾಗಿವೆ : 1. 2.3.3.ಕ್ಕಿಂತ ಹಳೆಯದಾದ ಆಂಡ್ರಾಯ್ಡ ಆವೃತ್ತಿ; ವಿಂಡೋಸ್‌ ಫೋನ್‌ 7, ಐಫೋನ್‌ 3ಜಿಎಸ್‌/ಐಓಎಸ್‌6.

Advertisement

Udayavani is now on Telegram. Click here to join our channel and stay updated with the latest news.

Next