ನ್ಯೂಯಾರ್ಕ್: ಸಾಮಾಜಿಕ ಜಾಲತಾಣ ದೈತ್ಯ ವಾಟ್ಸಪ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತದೆ. ಈ ಮೆಸೆಜಿಂಗ್ ಆ್ಯಪ್ ಇತ್ತೀಚೆಗೆ ಬಳಕೆದಾರ ತಮಗೆ ತಾವೇ ಮೆಸೇಜ್ ಗಳನ್ನು ಕಳುಹಿಸುವ ವೈಶಿಷ್ಟ್ಯತೆಯ ಬಗ್ಗೆ ಕೆಲಸ ಮಾಡುತ್ತಿದೆ. ಕೇಳಲು ಇದು ವಿಚಿತ್ರವಾಗಿದೆಯಾದರೂ ಮುಂದಿನ ದಿನಗಳಲ್ಲಿ ವಾಟ್ಸಪ್ ಈ ಫೀಚರ್ ನೀಡುತ್ತಿದೆ.
ನೀವೆಲ್ಲಾದರೂ ಹೋದಾಗ ಏನಾದರೂ ಬರೆದಿಟ್ಟುಕೊಳ್ಳಲು ಜನರು ಇದೀಗ ಪುಸ್ತಕಗಳ -ಡೈರಿಯ ಬದಲು ಮೊಬೈಲನ್ನೇ ಹೆಚ್ಚಾಗಿ ಡಿಪೆಂಡ್ ಆಗಿರುತ್ತಾರೆ. ಆದರೆ ಮೊಬೈಲ್ ನಲ್ಲಿರುವ ಇತರ ಆ್ಯಪ್ ಗಳ ಬದಲಾಗಿ ಹೆಚ್ಚಾಗಿ ಬಳಸುವ ವಾಟ್ಸಪ್ ನಲ್ಲೇ ನೋಟ್ ಮಾಡಲು ಬಯಸುತ್ತಾರೆ. ಅವರಿಗೆ ಈ ಹೊಸ ಫೀಚರ್ ಉಪಯುಕ್ತವಾಗಲಿದೆ.
ಸದ್ಯ ಈ ಫೀಚರ್ ಅಭಿವೃದ್ಧಿ ಹಂತದಲ್ಲಿದ್ದು, ಮೊದಲು ವಾಟ್ಸಪ್ ಡೆಸ್ಕ್‌ಟಾಪ್ ಬೀಟಾದಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಈ ಹೊಸ ಫೀಚರನ್ನು ಸಾರ್ವಜನಿಕ ಬಳಿಕಗೆ ತರುವ ಮೊದಲು ವಾಟ್ಸಾಪ್ ಪ್ರಸ್ತುತ ಬೀಟಾದಲ್ಲಿ ಪರೀಕ್ಷೆ ಮಾಡಲಿದೆ.
ಇದನ್ನೂ ಓದಿ:ಮಂಗಳೂರು ಭೇಟಿ ವೇಳೆ ಪ್ರಧಾನಿ ಮೋದಿಗೆ ಉಡುಗೊರೆಯಾಗಿ ಪರಶುರಾಮ ಪುತ್ಥಳಿ
ಮುಂದಿನ ದಿನಗಳಲ್ಲಿ ಬಳಕೆದಾರರು ವಾಟ್ಸಪ್ ಲಾಗಿನ್ ಆದಾಗ ವಾಟ್ಸಪ್ ಕಾಂಟಾಕ್ಟ್ ಲಿಸ್ಟ್ ನಲ್ಲಿ ತಮ್ಮ ಹೆಸರನ್ನು ಮೊದಲು ಕಾಣಬಹುದು. ಆದ್ದರಿಂದ ನೀವು ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಿಂದ ವಾಟ್ಸಪ್ ಅನ್ನು ಬಳಸುತ್ತಿದ್ದರೆ, ಮುಂದಿನ ಅಪ್ಡೇಟ್ ನಲ್ಲಿ ನಿಮ್ಮ ಹೆಸರನ್ನು ಚಾಟ್ ಪಟ್ಟಿಯಲ್ಲಿ ನೋಡಲು ನಿಮಗೆ ಸಾಧ್ಯವಾಗುತ್ತದೆ.