Advertisement

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

02:50 PM Jan 24, 2022 | Team Udayavani |

ನವದೆಹಲಿ: ವಾಟ್ಸ್‌ಆ್ಯಪ್‌ನ ಚಾಟಿಂಗ್‌ ಹಿಸ್ಟರಿಯನ್ನು ಆ್ಯಂಡ್ರಾಯ್ಡ ಫೋನ್‌ಗಳಿಂದ ಆ್ಯಪಲ್‌ ಫೋನ್‌ಗಳಿಗೆ ವರ್ಗಾಯಿಸುವಂಥ ಸೌಲಭ್ಯವೊಂದು ಸದ್ಯದಲ್ಲೇ ಸಿಗಲಿದೆ. ಇದರಿಂದ, ಆ್ಯಂಡ್ರಾಯ್ಡ ಫೋನ್‌ ಗಳಿಂದ ಆ್ಯಪಲ್‌ ಫೋನ್‌ಗಳಿಗೆ ಶಿಫ್ಟ್ ಆಗುವ ಗ್ರಾಹಕರಿಗೆ ಅನುಕೂಲವಾಗಲಿದೆ.

Advertisement

ಈ ಸೌಲಭ್ಯವನ್ನು ಅಭಿವೃದ್ಧಿಪಡಿಸುವಲ್ಲಿ ವಾಟ್ಸ್‌ ಆ್ಯಪ್‌ ತಂತ್ರಜ್ಞರು ನಿರತರಾಗಿದ್ದಾರೆ. ಹೀಗೆ, ಆ್ಯಂಡ್ರಾಯ್ಡನಿಂದ ಆ್ಯಪಲ್‌ ಫೋನ್‌ಗಳಿಗೆ ವಾಟ್ಸ್‌ಆ್ಯಪ್‌ ಚಾಟ್‌ ವರ್ಗಾಯಿಸಬೇಕಾದರೆ ಎರಡೂ ಮೊಬೈಲ್‌ಗ‌ಳನ್ನು ಹೊಂದಿರಬೇಕು ಹಾಗೂ ಎರಡರಲ್ಲೂ ವಾಟ್ಸ್‌ ಆ್ಯಪ್‌ ಇರಲೇಬೇಕು. ಜೊತೆಗೆ, ಚಾಟ್‌ ಹಿಸ್ಟರಿ ವರ್ಗಾವಣೆಯನ್ನು ಕೇಬಲ್‌ ಮೂಲಕ ಅಥವಾ ಖಾಸಗಿ ವೈ-ಫೈ ಮೂಲಕ ವರ್ಗಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ.

ಯುಎಇ: 30 ದಿನ ಡ್ರೋನ್‌ ಬ್ಯಾನ್‌
ಮುಂದಿನ ಒಂದು ತಿಂಗಳ ಕಾಲ ಯುಎಇ ವ್ಯಾಪ್ತಿಯಲ್ಲಿ ಡ್ರೋನ್‌ ಬಳಕೆ ಮಾಡುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಕೆಲ ದಿನಗಳ ಹಿಂದಷ್ಟೇ ಯೆಮೆನ್‌ ಹೌತಿ ಬಂಡುಕೋರರು ಅಬುಧಾಬಿಯ ತೈಲ ಸಂಗ್ರಹಾಗಾ ರಗಳ ಮೇಲೆ ಡ್ರೋನ್‌ ದಾಳಿ ನಡೆಸಿದ್ದರಿಂದ, ಇಬ್ಬರು ಭಾರತೀಯರು ಸೇರಿದಂತೆ ಮೂವರು ಅಸುನೀಗಿದ ಘಟನೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಇರುವ ಅಧಿಕೃತ ಆದೇಶದಲ್ಲಿ ದಾಳಿಯ ಅಂಶವನ್ನು ಉಲ್ಲೇಖಿಸಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next