Advertisement

ವಾಟ್ಸ್ಯಾಪ್ ಡಿಪಿ ಕದ್ದು ನೋಡುವವರರು ಯಾರೆಂದು ತಿಳಿಯಬೇಕೆ..? ‘ಈ’ಆ್ಯಪ್ ಡೌನ್ಲೋಡ್ ಮಾಡಿ

02:43 PM Mar 22, 2021 | Team Udayavani |

ನವ ದೆಹಲಿ : ಸಾಮಾಜಿಕ ಜಾಲತಾಣಗಳ ದೈತ್ಯ ವಾಟ್ಸ್ಯಾಪ್ ನಲ್ಲಿ ದಿನ ನಿತ್ಯ  ಗೌಪ್ಯತೆಯ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸದು ಹುಟ್ಟಿಕೊಳ್ಳುತ್ತಿದೆ. ಈಗ ಆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.

Advertisement

ವಾಟ್ಸ್ಯಾಪ್ ನ ಡಿಪಿ ಗೆ ಪ್ರೈವೆಸಿಯಲ್ಲಿ ಓನ್ಲಿ ಫಾರ್ ಮೈ ಕಾಂಟ್ಯಾಕ್ಟ್ ಅಂತ ಕೊಟ್ಟರೂ ಡಿಪಿ ನೋಡಲು ಸಾಧ್ಯವಾಗುತ್ತದೆ. ಇದನ್ನು ತಿಳಿಯುವುದಕ್ಕೂ ಕೂಡ ನಮಗೆ ಸಾಧ್ಯವಾಗುತ್ತದೆ. ಆದರೇ, ಇದಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದು ಬೇಕಾಗುತ್ತದೆ.

ಈಗಂತೂವಾಟ್ಸ್ಯಾಪ್ ಬಳಸದಿರುವವರಿಲ್ಲ. ವಾಟ್ಸ್ಯಾಪ್ ನಲ್ಲಿ ಈಗಾಗಲೇ ಹಲವಾರು ಫೀಚರ್ ಗಳು ಬಂದಿವೆ.

ವಾಟ್ಸ್ಯಾಪ್ ನಲ್ಲಿ ನಿಮ್ಮ ಡಿಪಿಯನ್ನು ಯಾರು ನೋಡುತ್ತಾರೆ ಅನ್ನೋದು ಗೊತ್ತಾಗುತ್ತದೆ. ಆದರೆ ಕದ್ದು ಮುಚ್ಚಿ ಯಾರು ನಮ್ಮ ಡಿಪಿ ಫೋಟೋ ನೋಡುತ್ತಾರೆ ಅನ್ನೋದು  ಗೊತ್ತಾಗುವುದಿಲ್ಲ. ಆದರೆ ಈಗ ಅದನ್ನು ಕೂಡ ತಿಳಿದುಕೊಳ್ಳಬಹುದು. ಅದಕ್ಕಾಗಿ ಸುಲಭವಾದ ಟ್ರಿಕ್ ಕೂಡ ನಮಗೆ ಲಭ್ಯವಾಗಿದೆ.

ಬಹಳ ವಿಶೇಷವೇನೆಂದರೆ, ಈ ವಿಧಾನದಿಂದ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಡಿಪಿ ನೋಡುವವರ ಹೆಸರು ಮತ್ತು ನಂಬರ್ ತಿಳಿದುಕೊಳ್ಳಬಹುದಾಗಿದೆ.

Advertisement

ಓದಿ : ಜವನಗೊಂಡನಹಳ್ಳಿ ಜವರಾಯನ ಅಟ್ಟಹಾಸ: ಸರಣಿ ಅಪಘಾತದಲ್ಲಿ ಮೂವರು ಸಾವು!

ನಿಮಗೆ ನಿಮ್ಮ ಕಾಂಟಾಕ್ಟ್  ಲಿಸ್ಟ್ ನಲ್ಲಿರುವವರು ಬಿಟ್ಟು, ಬೇರೆ ಯಾರಾದರು ನಿಮ್ಮ ಡಿಪಿ ನೋಡುತ್ತಿರಬಹುದಾ ಅನ್ನೋ ಅನುಮಾನ ಹುಟ್ಟಿರಬಹುದು. ಎಷ್ಟೋ ಮಂದಿ ಡಿಪಿ ಹಾಕೋದರಿಂದ ಸೇಫ್ಟಿ ಕಡಿಮೆ ಎನ್ನುವ ದೃಷ್ಟಿಯಿಂದ ಡಿಪಿ ಹಾಕದೆ ಇರುವವರು ತುಂಬಾ ಮಂದಿ ಇದ್ದಾರೆ. ಆದರೇ, ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ ಡಿಪಿ ನೋಡುತ್ತಿದ್ದಾರೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು ಯಾರು ನೋಡುತ್ತಿದ್ದಾರೆ? ಎನ್ನುವುದನ್ನು ತಿಳಿಯಲು, ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ನೀವು ಪ್ಲೇ ಸ್ಟೋರ್‌ ನಿಂದ WhatsApp- Who Viewed Me ಅಥವಾ Whats Tracker ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕಗುತ್ತದೆ.

ಇದರೊಂದಿಗೆ,  1mobile market ಡೌನ್‌ ಲೋಡ್ ಕೂಡ ಮಾಡಬೇಕಾಗುತ್ತದೆ.  1mobile market  ಆ್ಯಪ್ ಇಲ್ಲದೆ  WhatsApp- Who Viewed Me ಡೌನ್‌ಲೋಡ್ ಆಗುವುದಿಲ್ಲ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

ನಿಮಗೆ ಗೊತ್ತಿಲ್ಲದಂತೆ ಯಾರೆಲ್ಲಾ ನಿಮ್ಮ ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು (ನೋಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನಿಮಗೆ ನೀಡುತ್ತದೆ. ಅಪ್ಲಿಕೇಶನ್ ಮೂಲಕ ಕಳೆದ 24 ಗಂಟೆಗಳಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಅಥವಾ ಡಿಪಿಯನ್ನು ಯಾರು ನೋಡುತ್ತಿದ್ದಾರೆ ಎನ್ನುವ ಲಿಸ್ಟ್ ನಿಮಗೆ ದೊರಕುತ್ತದೆ. ಈ ಲಿಸ್ಟ್ ಮೂಲಕ ನಿಮಗೆ ಗೊತ್ತಿಲ್ಲದಂತೆ ಅಂದರೆ ಕದ್ದು ಯಾರು ನಿಮ್ಮ  ಪ್ರೊಫೈಲ್ ಫೋಟೋ ನೋಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು WhatsApp- Who Viewed Me ಸಹಕರಿಸುತ್ತದೆ.

ಆದರೇ, ಈ ಅಪ್ಲಿಕೇಶನ್ ನಿಮ್ಮ ಫೋನ್‌ ಗೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇದುವರಗೆ ಲಭ್ಯವಿಲ್ಲ.

ಓದಿ :  ಮದ್ಯ ಸಾಗಿಸಲು ಮಾಡಿದ ಈ ಪ್ಲಾನ್ ನೋಡಿ : ಹುಬ್ಬೇರುವುದು ಗ್ಯಾರಂಟಿ..!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next