Advertisement

‘ವ್ಯಾಕ್ಸಿನ್ಸ್‌ ಫಾರ್‌ ಆಲ್’ಲಸಿಕೆ ಅಭಿಯಾನಕ್ಕೆ ಕೈ ಜೋಡಿಸಿದ ವಾಟ್ಸ್‌ಆ್ಯಪ್‌

09:31 PM Apr 23, 2021 | Team Udayavani |

ನವದೆಹಲಿ: ಸದ್ಯದಲ್ಲೇ ವಾಟ್ಸ್‌ಆ್ಯಪ್‌ನಲ್ಲಿ ವ್ಯಾಕ್ಸಿನ್ಸ್‌ ಫಾರ್‌ ಆಲ್‌ ಎಂಬ ಸ್ಟಿಕರಿಂಗ್‌ ಪ್ಯಾಕೇಜ್‌ ಬಿಡುಗಡೆ ಮಾಡಲು ವಾಟ್ಸ್‌ಆ್ಯಪ್‌ ಸಂಸ್ಥೆ ನಿರ್ಧರಿಸಿದೆ. ಇದನ್ನು ಕ್ಲಿಕ್‌ ಮಾಡಿದರೆ, ಜಗತ್ತಿನ ಯಾವುದೇ ದೇಶದ ಜನರು ತಮ್ಮ ಪ್ರಾಂತ್ಯದಲ್ಲಿನ ಕೊರೊನಾ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

Advertisement

ಈ ಸ್ಟಿಕರ್‌ ಪ್ಯಾಕ್‌ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ), ಸುಮಾರು 150 ದೇಶಗಳು, ವಿವಿಧ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸರ್ಕಾರಗಳ ಸಹಯೋಗದೊಂದಿಗೆ ರೂಪಿಸಲಾಗಿದೆ ಹಾಗೂ ಇದರ ಮೂಲಕ, ಕೊರೊನಾ ಬಗ್ಗೆ ಯೂನಿಸೆಫ್ ನಿಂದ ಪ್ರಮಾಣಿಕರೀಸಲ್ಪಟ್ಟ ಮಾಹಿತಿ ಸಿಗುತ್ತದೆ ಎಂದು ಕಂಪನಿ ಹೇಳಿದೆ.

ಇದರಲ್ಲಿ ಕೊರೊನಾ ಹೆಲ್ಪ್ ಲೈನ್ ಸಂಖ್ಯೆಗಳನ್ನೂ ನೀಡಲಾಗಿದ್ದು, ಲಸಿಕೆ ಕೇಂದ್ರಗಳ ಮಾಹಿತಿ ಹಾಗೂ ಲಸಿಕೆಗಳಿಗಾಗಿ ಹೆಸರು ನೋಂದಾವಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ :ಎವರೆಸ್ಟ್‌ ತಲುಪಿದ ಸೋಂಕು; ಪರ್ವತಾರೋಹಿಗೂ ಕೋವಿಡ್ ಪಾಸಿಟಿವ್‌

ವಾಯ್ಸ್ ಮೆಸೇಜ್‌ ಸ್ಪೀಡ್‌ ಕಂಟ್ರೋಲಿಂಗ್‌:
ವಾಟ್ಸ್‌ಆ್ಯಪ್‌ನಲ್ಲಿ ನಾವು ಕಳುಹಿಸುವ ವಾಯ್ಸ್ ಮೆಸೇಜ್‌ನ ಪ್ಲೇಬ್ಯಾಕ್‌ ವೇಗವನ್ನು 1 ಎಕ್ಸ್‌, 1.5 ಎಕ್ಸ್‌ ಹಾಗೂ 2 ಎಕ್ಸ್‌ ಎಂಬ ಮೂರು ರೀತಿಯಲ್ಲಿ ನಿಯಂತ್ರಿಸುವ ಹೊಸ ಫೀಚರ್‌ ಸದ್ಯದಲ್ಲೇ ಬಳಕೆಗೆ ಬರಲಿದೆ. ಅದಿನ್ನೂ ವಾಟ್ಸ್‌ಆ್ಯಪ್‌ ಆ್ಯಂಡ್ರಾಯ್ಡ ಬಿಟಾ ಮಾದರಿಯ ಆ್ಯಪ್‌ನಲ್ಲಿ ಇದನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ ಎಂದು ವಾಟ್ಸ್‌ಆ್ಯಪ್‌ ಅಪ್‌ಡೇಟ್‌ಗಳನ್ನು ತಿಳಿಸುವ “ಡಬ್ಲ್ಯೂಎಬಿಟಾ ಇನ್ಫೋ’ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next