Advertisement

ಹೊಸ ಫೀಚರ್; ವಾಟ್ಸಪ್ ಮೇಸೆಜ್ ಡಿಲೀಟ್ ಮಾಡೋ ಕಿರಿಕಿರಿಗೆ ಬ್ರೇಕ್

09:54 AM Nov 29, 2019 | Sriram |

ಜನಪ್ರಿಯ ಮೇಸೆಜಿಂಗ್ ಸೇವೆ ವಾಟ್ಸಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ವೊಂದನ್ನು ಬಿಡುಗಡೆ ಮಾಡಲಿದ್ದು, ಸಂದೇಶಗಳನ್ನು ಡಿಲೀಟ್ ಮಾಡಬೇಕೆಂಬ ಕಿರಿಕಿರಿಗೆ ಈ ವಿನೂತನ ಫೀಚರ್ ಬ್ರೇಕ್ ಹಾಕಲಿದೆ. ಹಾಗಾದರೆ ಏನಿದು ಹೊಸ ಫೀಚರ್ ? ವಿಶೇಷತೆಗಳೇನು ಇಲ್ಲಿದೆ ಮಾಹಿತಿ…

Advertisement

ಆ್ಯಂಡ್ರಾಯ್ಡ್ ಬೇಟಾ ವರ್ಷನ್
ಆ್ಯಂಡ್ರಾಯ್ಡ್ ಬೇಟಾ ವರ್ಷನ್ ನಲ್ಲಿ ಈ ಫೀಚರ್ ಅನ್ನು ಪರಿಚಯಿಸಲಾಗಿದ್ದು, ಆ್ಯಂಡ್ರಾಯ್ಡ್ 2.19.348ರ ಬೇಟಾ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಸದ್ಯ ವಾಬೇಟಾಇನ್ಫೋ ಈ ಫೀಚರ್ ನ ಪರಿಷ್ಕೃತ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿದ್ದು, ಡಿಲೀಟ್ ಮೆಸ್ಸೇಜ್ ಅಥವಾ ಡೀಸ್ಅಫಿಯರ್ ಮೇಸೆಜ್ ಎಂಬ ಹೆಸರಿನಲ್ಲಿ ಪರಿಚಯಿಸಲಿದೆ.

ಸಮಯ ನಿಗದಿಪಡಿಸಿದರೆ ಸಾಕು….
ಸಂದೇಶ ಕಳುಹಿಸುವ ಬಳಕೆದಾರರು ಎಷ್ಟು ಸಮಯ ಮೆಸೇಜ್ ಇರಬೇಕೆಂದು ನಿರ್ಧರಿಸುವ ಆಯ್ಕೆಯೂ ಇದರಲ್ಲಿ ಇರಲಿದ್ದು, ಬಳಕೆದಾರರು 1 ಗಂಟೆ, 1 ದಿನ, 1 ವಾರ, 1 ತಿಂಗಳು ಅಥವಾ 1 ವರ್ಷ ಎಂಬಂತೆ ನಿಗದಿತ ಸಮಯವನ್ನು ಆಯ್ಕೆ ಮಾಡುವ ಮೂಲಕ ಸಂದೇಶಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ.

ಮೇಸೆಜ್ ಗಳು ಸ್ವಯಂ ಚಾಲಿತವಾಗಿ ಡಿಲೀಟ್ ಆಗುವ ಹೊಸ ಆಯ್ಕೆ ಇದಾಗಿದ್ದು, ಟಾಗಲ್ ಆನ್ / ಆಫ್ ಬಟನ್ನೊಂದಿಗೆ ಈ ಫೀಚರ್ ಬರಲಿದೆ. ಜತೆಗೆ ಡಿಲೀಟ್ ಮೆಸೇಜ್ ಸೆಟ್ಟಿಂಗ್ ಲ್ಲಿ ಈ ಆಯ್ಕೆ ಇರಲಿದ್ದು, ಒಮ್ಮೆ ಸೆಟ್ಟಿಂಗ್ ಮಾಡಿಕೊಂಡರೆ ಸಾಕು ಸ್ವಯಂ ಚಾಲಿತವಾಗಿ ಸಂದೇಶ ಡಿಲೀಟ್ ಆಗಲಿದೆ.

ಗ್ರೂಪ್ ಚಾಟ್ ನಲ್ಲಿ
ಆರಂಭದಲ್ಲಿ ಗ್ರೂಪ್ ಚಾಟ್ ಗಳಿಗೆ ಮಾತ್ರ ಲಭ್ಯವಿರಲಿರುವ ಈ ಆಯ್ಕೆಯನ್ನು ಗ್ರೂಪ್ ನ ಆಡ್ಮಿನ್ ಮಾತ್ರ ಸಕ್ರಿಯಗೊಳಿಸಬಹುದು. ಸಕ್ರಿಯಗೊಳಿಸಿದ ನಂತರ, ಸಂಪರ್ಕ ಮಾಹಿತಿ (ಕಂಟ್ಯಾಕ್ಟ್ ಇನ್ಫೋ) ಅಥವಾ ಗ್ರೂಪ್ ಸೇಟಿಂಗ್ ಅಲ್ಲಿ ಫೀಚರ್ ನ್ನು ಟಾಗಲ್ ಆನ್ ಮಾಡಬಹುದು.

Advertisement

ಗೂಗಲ್ ಪ್ಲೇ ಅಲ್ಲಿ ಲಭ್ಯ
ಗೂಗಲ್ ಪ್ಲೇಯ ಬೀಟಾ ಫ್ರೋ ಗ್ರಾಂಗೆ ಬಳಕೆದಾರರು ಮಾತ್ರ ಹೊಸ ಆವೃತ್ತಿಯನ್ನು ಡೌನ್ ಲೋಡ್ ಮಾಡಬಹುದಾಗಿದ್ದು, ಎಪಿಕೆ ಮಿರರ್ ಪ್ಲಾಟ್ಫಾರ್ಮ್ ಅಲ್ಲಿ ಲಭ್ಯವಿರುವ ಎಪಿಕೆ ಆ್ಯಪ್‌ ಯಿಂದ ಕೂಡ ಡೌನ್ ಲೋಡ್ ಮಾಡಿಕೊಳ್ಳ ಬಹುದಾಗಿದೆ.
ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ ಬುಕ್‌ ಮೇಸೆಂಜರ್‌ ನಲ್ಲಿ  ಈ ಫೀಚರ್ ಇದ್ದು, ಇನ್ನುಮುಂದೆ ವಾಟ್ಸ ಆ್ಯಪ್ ನಲ್ಲೂ ಈ ಫೀಚರ್ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next