ನವದೆಹಲಿ: ತನ್ನ ಗ್ರಾಹಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ಗಳನ್ನು ಮಾಡುತ್ತಾ ಬಂದಿರುವ ವಾಟ್ಸ್‌ಆಪ್ ಇದೀಗ ತನ್ನ ಗ್ರಾಹಕರಿಗೆ ಮತ್ತಷ್ಟು ಫೀಚರ್ಸ್ ನೀಡಲು ತಯಾರಾಗಿದೆ.
ವಾಟ್ಸ್‌ಆಪ್ ನೀಡುತ್ತಿರುವ ಈ ಫೀಚರ್‌ಗಳು ಆಂಡ್ರಾಯ್ಡ್ , iOS ಹಾಗೂ ಡೆಸ್ಕ್‌ಟಾಪ್ ಬಳಕೆದಾರರಿಗೆ ಲಭ್ಯವಾಗಲಿದೆ. ವಾಟ್ಸ್‌ಆಪ್ ವೆಬೆಟೈನ್‌ಫೋ ನೀಡಿರುವ ಮಾಹಿತಿ ಪ್ರಕಾರ, ವಾಟ್ಸ್‌ಆಪ್ ಇದೀಗ 21 ಹೊಸ ಎಮೋಜಿಗಳನ್ನು ಗ್ರಾಹಕರಿಗೆ ನೀಡಲಿದೆ. ಸದ್ಯಕ್ಕೆ ಬೆಟಾ ವರ್ಶನ್‌ನಲ್ಲಿ ಈ ಇಮೋಜಿಗಳು ಲಭ್ಯವಿದೆ ಎಂದಿದೆ.
21 ಹೊಸ ಎಮೋಜಿ ಜೊತೆಗೆ ಗ್ರೂಪ್ ಅಡ್ಮಿನ್‌ಗಳಿಗೂ ಹೊಸ ಅಧಿಕಾರವನ್ನು ನೀಡಿದೆ. ಗ್ರೂಪ್‌ನಲ್ಲಿ ಎಷ್ಟು ಸದಸ್ಯರು ಇರಬೇಕು ಅನ್ನುವುದನ್ನು ನಿಯಂತ್ರಿಸುವ ಅಧಿಕಾರವನ್ನು ಗ್ರೂಪ್ ಅಡ್ಮಿನ್‌ಗಳಿಗೆ ನೀಡಲಾಗಿದೆ. ಇದರಿಂದಾಗಿ ಗ್ರೂಪ್ ಅಡ್ಮಿನ್ ನಿಗದಿಪಡಿಸಿರುವ ಸದಸ್ಯರಿಗಿಂತ ಹೆಚ್ಚು ಸದಸ್ಯರು ಗ್ರೂಪ್ ಸೇರಲು ಸಾಧ್ಯವಿಲ್ಲ. ಅಲ್ಲದೇ ಗ್ರೂಪ್ ಅಡ್ಮಿನ್, ಗ್ರೂಪ್‌ನಲ್ಲಿ ಎಷ್ಟು ಜನ ಸದಸ್ಯರಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಿ ಇನ್‌ವೈಟ್ ಲಿಂಕ್ ಕಳುಹಿಸಬಹುದು. ಇದರಿಂದ ಒಂದು ಗ್ರೂಪ್, ಅಡ್ಮಿನ್ ನಿರ್ಧರಿಸಿದ ಸಂಖ್ಯೆಯ ಸದಸ್ಯರನ್ನು ತಲುಪಿದ ಮೇಲೆ ಗ್ರೂಪ್ ಸೇರಲು ಸಾಧ್ಯವಾಗುವುದಿಲ್ಲ.
ಗ್ರೂಪ್ ಚಾಟ್ ಇನ್ನಷ್ಟು ಸಕ್ರಿಯವಾಗಿಸಲು ಮತ್ತು ಅನಗತ್ಯ ಚಾಟ್ ಕಿರಿಕಿರಿ ತಪ್ಪಿಸಲು ಇದು ಸಹಕಾರಿಯಾಗಬಹುದು ಎಂದು ಹೇಳಿದೆ.
ಈ ಹೊಸ ಫೀಚರ್ಸ್ ಶೀಘ್ರದಲ್ಲೇ ಗ್ರಾಹಕರಿಗೆ ಲಭ್ಯವಾಗಲಿದೆ. ಬಳಕೆದಾರರು ತಮ್ಮ ವಾಟ್ಸ್‌ಆಪ್ ಅಪ್‌ಡೇಟ್ ಮಾಡಿಕೊಂಡಲ್ಲಿ ಈ ಫೀಚರ್ಸ್ ಲಭ್ಯವಾಗಲಿದೆ. 21 ಹೊಸ ಎಮೋಜಿಗಳು ಬಳಕೆದಾರರಿಗೆ ಖುಷಿ ನೀಡಲಿದೆ ಎಂದು ಹೇಳಿದೆ.
ಇತ್ತೀಚೆಗೆ ಬಳಕೆದಾರರಿಗೆ ಹೈ ಕ್ವಾಲಿಟಿ ಫೋಟೋ ಕಳುಹಿಸುವ ಫೀಚರ್‌ನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ವಾಟ್ಸ್‌ಆಪ್ ನೀಡಿತ್ತು. ಈ ಮೊದಲು ವಾಟ್ಸ್‌ಆಪ್‌ನಲ್ಲಿ ಫೋಟೋ ಕಳುಹಿಸುವುದಾದರೆ ಅದರ ಕ್ವಾಲಿಟಿ ಕಡಿಮೆಯಾಗುತ್ತದೆ ಎಂಬ ದೂರು ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಈ ಅಸಮಾಧಾನಕ್ಕೆ ಪರಿಹಾರ ನೀಡಲಿರುವ ವಾಟ್ಸ್‌ಆಪ್ ಇರುವ ಕ್ವಾಲಿಟಿಯಲ್ಲೇ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡಿದೆ. ಇದರಿಂದಾಗಿ ಉತ್ತಮ ಕ್ವಾಲಿಟಿ ಫೋಟೋಗಳನ್ನು ಕಳುಹಿಸಲು ಜನ ಬಳಸುತ್ತಿದ್ದ ಟೆಲಿಗ್ರಾಮ್‌ಗೆ ಭಾರೀ ಪೆಟ್ಟು ಬೀಳಲಿದೆ.
ಇದನ್ನೂ ಓದಿ:
ಮಂಡ್ಯ:ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ ; 5 ಮಂದಿ ಪಾರು