Advertisement

ಚಪ್ಪಲಿ ಕಳ್ಳನಿಗೆ ಥ್ಯಾಂಕ್ಸ್‌

07:52 PM Sep 14, 2019 | mahesh |

ಪುಟ್ಟಿ ಅಂದು ತಾನು ಕಷ್ಟಪಟ್ಟು ಉಳಿಸಿದ್ದ ಪಾಕೆಟ್‌ ಮನಿಯಲ್ಲಿ ಚೆಂದದೊಂದು ಓಲೆಯನ್ನು ಕೊಳ್ಳುವ ಯೋಚನೆ ಮಾಡಿದಳು. ತನ್ನೂರಿನಲ್ಲಿದ್ದ ಏಕೈಕ ಫ್ಯಾನ್ಸಿಸ್ಟೋರ್‌ಗೆ ಹೋಗಿದ್ದಳು. ಆ ಫ್ಯಾನ್ಸಿಸ್ಟೋರ್‌ನ ಹೊರಗೆ ಹಾಕಿದ್ದ , “ಪಾದರಕ್ಷೆಗಳನ್ನು ಹೊರಗಿಡಿ’ ಎಂಬ ಬೋರ್ಡ್‌ ನೋಡಿ ಚಪ್ಪಲಿಯನ್ನು ಹೊರಗೆ ಬಿಟ್ಟು ಒಳಗೆ ಕಾಲಿ ಟ್ಟಳು.
ತನಗೆ ಬೇಕಾದ ಓಲೆಯನ್ನು ಕೊಂಡು ಹೊರಗೆ ಬಂದು ನೋಡಿದರೆ ಅಲ್ಲಿ ಚಪ್ಪಲಿ ಇಲ್ಲ. ಅವಳ ಚಪ್ಪಲಿಯನ್ನು ಯಾರೋ ಕದ್ದೊಯ್ದಿದ್ದರು. ಪುಟ್ಟ ಚಪ್ಪಲಿಯನ್ನು ದೊಡ್ಡ ಕಳ್ಳನಿಗೆ ಧರಿಸಿಕೊಂಡು ಹೋಗಲು ಸಾಧ್ಯವಾಗುತ್ತದೆಯೆ? ಬಹುಶಃ ಅವಳ ಮಗಳಿಗೆಂದು ಅದನ್ನು ಒಯ್ದಿರಬೇಕು.

Advertisement

ಆ ಉರಿಬಿಸಿಲಿನಲ್ಲಿ ಬರಿಗಾಲಿನಲ್ಲಿಯೇ ಚಪ್ಪಲಿ ಕಳ್ಳನಿಗೆ ಬೈಯುತ್ತ ಮನೆಗೆ ಬಂದ ಪುಟ್ಟಿ ಅಮ್ಮನಲ್ಲಿ ತನ್ನ ದುಃಖ ವನ್ನು ತೋಡಿ ಕೊಂಡಳು.
ಅಮ್ಮ ಚಪ್ಪಲಿ ಕಳ್ಳನಿಗೆ ತಾವೊಂದಿಷ್ಟು ಬೈಯುತ್ತ ಹೊಸ ಚಪ್ಪಲಿ ತೆಗೆದುಕೊಳ್ಳಲು ಹಣ ಕೊಟ್ಟರು.
ಪುಟ್ಟಿ ಅಮ್ಮನಿಗೆ ಕೇಳಿಸದಂತೆ ಚಪ್ಪಲಿ ಕಳ್ಳನಿಗೆ ಥ್ಯಾಂಕ್ಸ್‌ ಹೇಳಿದಳು.

ಸುಶ್ಮಿತಾ ನೇರಳಕಟ್ಟೆ

ಬೆಂಗಳೂರಿಗ !
ಊರಿನಿಂದ ಬೆಂಗಳೂರಿಗೆ ಅಣ್ಣನ ಮನೆಗೆ ಬಂದಿದ್ದ ತಂಗಿ ಸಂಧ್ಯಾಳಿಗೆ ಬಟ್ಟೆ ಕೊಡಿಸಲು ಸತೀಶ ಆಕೆಯನ್ನು ಬಹುಮಹಡಿಯ ಬಟ್ಟೆ ಮಳಿಗೆಗೆ ಕರೆದುಕೊಂಡು ಹೋದ. ಬಟ್ಟೆಗಳ ಆಯ್ಕೆ ಮುಗಿದ ಮೇಲೆ ಇಬ್ಬರೂ ಬಿಲ್‌ ಪಾವತಿಗೆಂದು, ಲಿಫ್ಟ್ ರಶ್‌ ಇದ್ದುದರಿಂದ ಕೆಳಗಿನ ಫ್ಲೋರಿಗೆ ಮೆಟ್ಟಿಲುಗಳ ಮುಖಾಂತರ ಹೊರಟರು.

ಪಕ್ಕದಲ್ಲಿ ವಯಸ್ಸಾದ ಹಿರಿ ಹೆಂಗಸೊಬ್ಬರು ನಿಧಾನಕ್ಕೆ ಬದಿಯ ಸರಳು ಹಿಡಿದು ಇಳಿಯುತ್ತಿದ್ದರು. ಜನಸಂದಣಿಯ ನಡುವೆ ಸತೀಶ್‌ ಹೆಚ್ಚು ಗಮನ ನೀಡದೆ ಪಟಪಟನೆ ಮೆಟ್ಟಿಲು ಇಳಿದು ಕೆಳಬಂದ. ಇತ್ತ ಸಂಧ್ಯಾ ತನ್ನ ಕೈಚಾಚಿ, “ಸಹಾಯ ಮಾಡಲಾ?’ ಎಂದು, ಹಿರಿಯ ಜೀವವನ್ನು ಕೈಹಿಡಿದು ಮೆಟ್ಟಿಲಿಳಿಸಿಕೊಂಡು ಬಂದಳು.  ಹಿರಿಯ ಮಹಿಳೆ ತುಂಬು ಮೆಚ್ಚುಗೆಯ ನೋಟದಿಂದ ಸಂಧ್ಯಾಳನ್ನು ಬೀಳ್ಕೊಟ್ಟಳು.

Advertisement

ಸತೀಶನಿಗೆ ಬೆಂಗಳೂರಿಗೆ ಬಂದು ತಾನ್ಯಾವಾಗ ಅಕ್ಕಪಕ್ಕದವರನ್ನು ಗಮನಿಸದಷ್ಟು ಇನ್‌ಸೆನ್ಸಿಟಿವ್‌ ನಗರಜೀವಿಯಾಗಿ ಬದಲಾದೆ ಎಂದು ಕಸಿವಿಸಿಯಾದ. ಇನ್ನೂ ಊರಿನ ಮನಸ್ಥಿತಿಯನ್ನು ಉಳಿಸಿಕೊಂಡಿರುವ ತಂಗಿಯನ್ನು ಅಭಿಮಾನದಿಂದ ನೋಡ ತೊಡಗಿದ.

ವಿನಯಾ ನಾಯಕ್‌

ಕಾಲ ಬದಲಾಗಿದೆ !
ಬೇಕಿರಲಿಲ್ಲ. ಅವಳು ಇಲ್ಲಿ ಸಿಗುವುದು ಬೇಕಿರಲಿಲ್ಲ, ತರಗತಿಯಲ್ಲಿ ಜೊತೆಯಾದವಳು ಬಹುವರ್ಷಗಳ ನಂತರ ಇಂದು ತಟ್ಟನೆ ಬಂದು ನಿಲ್ಲುವುದೇ ಇದಿರು!

ಆದದ್ದು ಇಷ್ಟೇ. ಬಹು ದಿನದ ಆಸೆಯಂತೆ ಮಂಗಳೂರು ಫೋರಂಮಾಲ್‌ಗೆ ಹೋಗಿದ್ದೆ. ಅಲ್ಲೊಂದು ಬ್ಯಾಗ್‌ ಶಾಪ್‌ ಇದೆ, ಒಳ್ಳೆಯ ಕಲೆಕ್ಷನ್‌ ಇದೆಯೆಂದು ಯಾರೋ ಹೇಳಿದ್ದರಂತೆ. ಹಾಗಾಗಿ, ನನಗೂ ನೋಡಬೇಕು ಅಂದಳು ಅಂತ ಕರೆದುಕೊಂಡು ಹೋಗಿದ್ದೆ. ಅಲ್ಲಿ ಒಬ್ಬ ಮಹಿಳೆ ಯಾವುದೋ ವಿಷಯಕ್ಕೆ ಶಾಪ್‌ ಹುಡುಗಿಯ ಜೊತೆ ಚರ್ಚೆ ಮಾಡುತ್ತಿದ್ದಳು. ತನ್ನದೇ ಸರಿ ಅಂತ ಜಿದ್ದಿಗೆ ಬಿದ್ದವಳಂತೆ ಮಾತಾಡುತ್ತಿದ್ದಳು. ಸೇಲ್ಸ… ಗರ್ಲ್ ತಾಳ್ಮೆಯಿಂದ ಈ ಸನ್ನಿವೇಶವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಳು.

ಯಾಕೋ ಆಕೆ ತಿರುಗಿ ನೋಡಿದಾಗ ಹಿಂದೆ ನಾನೇ ಇರಬೇಕೆ!
ಆಕೆ ಕಾಲೇಜಿನಲ್ಲಿ ನನ್ನ ಸ್ಟೂಡೆಂಟ್ ಜ್ಯೂನಿಯರ್‌ಗಳಿಗೆ ತೊಂದರೆ ಕೊಟ್ಟು ಸಿಕ್ಕಿ ಬಿದ್ದಾಗ ಇಡೀ ದಿನ ಪ್ರಿನ್ಸಿಪಾಲ್‌ ರೂಮ್‌ ಹೊರಗಡೆ ನಿಲ್ಲಿಸಿದ್ದು ನೆನಪಾಯಿತು.

ಕಾಲ ಬದಲಾಗಿದೆ.
ಜಗಳಗಂಟಿ ಬದಲಾಗಿಲ್ಲ !

ಅಶ್ವಿ‌ನಿ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next