Advertisement

ಭಾರತದಲ್ಲೇ ವಿವರ ಸಂಗ್ರಹ

08:00 AM Oct 10, 2018 | Karthik A |

ಹೊಸದಿಲ್ಲಿ: ಪಾವತಿಗೆ ಸಂಬಂಧಿಸಿದ ಡೇಟಾವನ್ನು ಭಾರತದಲ್ಲೇ ಸಂಗ್ರಹಿಸಲು ವಾಟ್ಸ್‌ಆ್ಯಪ್‌ ನಿರ್ಧರಿಸಿದೆ. ಆರ್‌ಬಿಐ ನಿಯಮಾವಳಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಹಿವಾಟುಗಳ ಎಲ್ಲ ಡೇಟಾವನ್ನೂ ಭಾರತದಲ್ಲೇ ಸಂಗ್ರಹಿಸುವಂತೆ ಆರ್‌ಬಿಐ ನೀಡಿದ ನಿಯಮಾವಳಿಗೆ ಉದ್ಯಮ ವಲಯದಲ್ಲಿ ಭಿನ್ನ ಅಭಿಪ್ರಾಯ ಕೇಳಿಬಂದಿತ್ತು. ಆದರೆ ವಾಟ್ಸ್‌ಆ್ಯಪ್‌ ಈ ನಿರ್ಧಾರ ಕೈಗೊಂಡಿರುವುದು ಅತ್ಯಂತ ಮಹತ್ವದ್ದಾಗಿದೆ. 20 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್‌ ಆ್ಯಪ್‌ ಈ ನಿರ್ಧಾರ  ಕೈಗೊಂಡಿರುವುದರಿಂದ ಇತರ ಕಂಪೆನಿಗಳೂ ಇದನ್ನು ಅನುಸರಿಸುವ ಸಾಧ್ಯತೆಯಿದೆ. ಅ.15ರೊಳಗೆ ಎಲ್ಲ ಕಂಪೆನಿಗಳೂ ಈ ನಿಯಮಕ್ಕೆ ಬದ್ಧವಾಗಿರಬೇಕು ಎಂದು ಆರ್‌ಬಿಐ ಆದೇಶಿಸಿದೆ. ಸದ್ಯ ವಾಟ್ಸ್‌ಆ್ಯಪ್‌ನ ಪೇಮೆಂಟ್ಸ್‌ ಸೌಲಭ್ಯವು ಪ್ರಾಯೋಗಿಕ ಹಂತದಲ್ಲಿದ್ದು, 10 ಲಕ್ಷ ಜನರು ಇದನ್ನು ಬಳಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next