Advertisement

ವಾಟ್ಸ್‌ ಆ್ಯಪ್‌ ನಲ್ಲೂ ಬಂತು ಸ್ಟೇಟಸ್‌ ರಿಯಾಕ್ಷನ್‌ ಫೀಚರ್: ಬಳಸುವುದು ಹೇಗೆ?

04:43 PM Oct 16, 2022 | Team Udayavani |

ನವದೆಹಲಿ: ದಿನ ಕಳೆದಂತೆ ಜನಪ್ರಿಯ ಮೆಸೇಜ್‌ ಶೇರಿಂಗ್‌ ಆ್ಯಪ್‌ ವಾಟ್ಸ್‌ ಆ್ಯಪ್‌ ಹೊಸ ಹೊಸ ಫೀಚರ್ಸ್‌ ಗಳನ್ನು ಹೊರ ತರುತ್ತಿದೆ. ಇತ್ತೀಚೆಗೆ ವಾಟ್ಸ್‌ ಆ್ಯಪ್‌ ಗ್ರೂಪ್‌ ಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿತು. ಆ ಬಳಿಕ ಶೀಘ್ರದಲ್ಲಿ ಎಡಿಟ್‌ ಆಯ್ಕೆಯ ಫೀಚರನ್ನು ತರುವುದಾಗಿ ಹೇಳಿದೆ. ಈಗ ಮತ್ತೊಂದು ನೂತನ ಫೀಚರ್‌ ಹೊರ ತಂದಿದೆ.

Advertisement

WabetaInfo ಸಂಸ್ಥೆ ವರದಿ ಮಾಡಿರುವ ಪ್ರಕಾರ  ವಾಟ್ಸ್‌ ಆ್ಯಪ್‌ ನಲ್ಲಿ ಇನ್ಮುಂದೆ ಸ್ಟೇಟಸ್‌ ಗಳಿಗೆ ರಿಯಾಕ್ಟ್‌ ಮಾಡುವ ಆಪ್ಷನ್‌ ಗಳು ಬರಲಿದೆ. ಇದಲ್ಲದೇ ಇನ್ಮುಂದೆ ಆಡ್ಮಿನ್‌ ಗಳಿಗೆ ಮಾತ್ರ ನೀವು ಗ್ರೂಪ್‌ ನಿಂದ ಹೊರ ಹೋದರೆ ( ಲೆಫ್ಟ್‌ ಆದರೆ) ನೋಟಿಫಿಕೇಶನ್ ಹೋಗಲಿದೆ. ಆಡ್ಮಿನ್‌ ನೀವು ಮಾಡಿದ ಮೆಸೇಜ್‌ ಗಳನ್ನು ಡಿಲೀಟ್‌ ಮಾಡಬಹುದು. ಮತ್ತು ಅದನ್ನು ಯಾರು ಡಿಲೀಟ್‌ ಮಾಡಿದ್ದಾರೆ ಎನ್ನುವುದನ್ನು ಗ್ರೂಪಿನ ಇತರ ಸದಸ್ಯರು ನೋಡಬಹುದು.

ನೀವು ಇನ್ಸ್ಟಾಗ್ರಾಮ್‌ ಬಳಸುತ್ತಿದ್ದರೆ, ಅದರಲ್ಲಿ ನೀವು ಹಾಕಿದ ಸ್ಟೋರಿಗೆ ಇತರರು ರಿಯಾಕ್ಟ್‌ ಮಾಡಬಹುದು. ಈಗ ಈ ಆಯ್ಕೆ ವಾಟ್ಸ್‌ ಆ್ಯಪ್‌ ನಲ್ಲೂ ಬಂದಿದೆ. ಮೊದಲು ವಾಟ್ಸ್‌ ಆ್ಯಪ್‌ ನಲ್ಲಿ ನಾವು ನೋಡಿದ ಸ್ಟೇಟಸ್‌ ಗೆ ರಿಪ್ಲೈ ಮಾಡಬಹುದಿತ್ತು. ಈಗ ರಿಪ್ಲೈಯೊಂದಿಗೆ ವಿವಿಧ ಬಗೆಯ ಇಮೋಜಿಗಳಿಂದ ರಿಯಾಕ್ಟ್‌ ಮಾಡಬಹುದು. ಸ್ವೈಪ್‌ ಆಪ್‌ ಮಾಡಿದರೆ ನಾನಾ ಇಮೋಜಿಗಳಿರುತ್ತವೆ ಅದರಲ್ಲಿ ನಮಗೆ ಯಾವುದು ಸೂಕ್ತ ಅದನ್ನು ಆಯ್ದುಕೊಂಡು ನಾವು ಸ್ಟೇಟಸ್‌ ಗೆ ರಿಯಾಕ್ಟ್‌ ಮಾಡಬಹುದು.

ಸದ್ಯ ಈ ಹೊಸ ಫೀಚರ್ಸ್‌ ಗಳು ಎಲ್ಲಾ ಆ್ಯಂಡ್ರಾಯ್ಡ್‌ ಮೊಬೈಲ್‌ ಗಳಿಗೆ ಬಂದಿಲ್ಲ. ಐಒಎಸ್‌ ಬಳಕೆದಾರರಿಗೆ ಇದು ಲಭ್ಯವಿದೆ ಶೀಘ್ರದಲ್ಲಿ ಎಲ್ಲರ ವಾಟ್ಸ್‌ ಆ್ಯಪ್‌ ಗೂ ಬರಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next