ನವದೆಹಲಿ: ಸುಮಾರು 2 ವರ್ಷಗಳ ಪರೀಕ್ಷೆಯ ನಂತರ ಕೊನೆಗೂ ಫೇಸ್ ಬುಕ್ ಒಡೆತನದ ವಾಟ್ಸಾಪ್ ಸಂಸ್ಥೆ, ಯುಪಿಐ ಪೇಮೆಂಟ್ ಸೇವೆಯಾದ ‘ವಾಟ್ಸಾಪ್ ಪೇ’ ಯನ್ನು ಭಾರತೀಯ ಬಳಕೆದಾರರಿಗೆ
ಪರಿಚಯಿಸಿದೆ.
2018 ರಲ್ಲಿ 1 ಮಿಲಿಯನ್ ವಾಟ್ಸಾಪ್ ಬಳಕೆದಾರರನ್ನು ಬಳಸಿಕೊಂಡು ‘ವಾಟ್ಸಾಪ್ ಪೇ’ಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಸುಮಾರು 2 ವರ್ಷಗಳ ನಂತರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ‘ವಾಟ್ಸಾಪ್ ಪೇ’ ಗೆ ಪರವಾನಗಿ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಫೇಸ್ ಬುಕ್ ಸಿಇಓ ಮತ್ತು ಸಹ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್, ‘ವಾಟ್ಸಾಪ್ ಪೇ’ಯ ಕುರಿತಾಗಿ ಕಳೆದೆರೆಡು ವರುಷಗಳಿಂದ ಎನ್ ಪಿಸಿಐ ಜೊತೆ ಕಾರ್ಯನಿರ್ವಹಿಸುತ್ತಿದ್ದೇವು. ವಾಟ್ಸಾಪ್ ಪೇ ಗಾಗಿ ಸುಮಾರು 160ಕ್ಕೂ ಹೆಚ್ಚು ಭಾರತೀಯ ಬ್ಯಾಂಕುಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಈ ಸೇವೆ ಪಡೆಯಬೇಕಾದರೇ ವಾಟ್ಸಾಪ್ ನ ನೂತನ ವರ್ಷನ್ ಡೌನ್ ಲೋಡ್ ಮಾಡುವುದು ಅವಶ್ಯ. ಈ ಸೇವೆ ಸಂಪೂರ್ಣ ಸುರಕ್ಷಿತ ಮತ್ತು ವಿಶ್ವಸಾರ್ಹವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜ್ಯಾಮ್ ನಗರದ ಬಡ ವಾಚ್ ಮ್ಯಾನ್ ಮಗ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆದ ಕಥೆ
ಭಾರತದಲ್ಲಿ ಸುಮಾರು 400 ಮಿಲಿಯನ್ ಜನರು ವಾಟ್ಸಾಪ್ ಬಳಸುತ್ತಿದ್ದಾರೆ. ಸದ್ಯ 20 ಮಿಲಿಯನ್ ಜನರಿಗೆ ಈ ಫೀಚರ್ ಬಳಕೆಗೆ ಲಭ್ಯವಿದ್ದು, ಹಂತಹಂತವಾಗಿ ಎಲ್ಲಾ ಬಳಕೆದಾರರಿಗೆ ಸುಲಭವಾಗಿ ಸಿಗುವಂತೆ ಅಭಿವೃದ್ಧಿ ಪಡಿಸಲಾಗುತ್ತದೆ. ಈಗಾಗಲೇ ಪೇಟಿಯಂ, ಫೋನ್ ಪೇ ಆ್ಯಪ್ಗಳು ಬ್ಯಾಂಕ್ ಖಾತೆಯ ಲಿಂಕ್ ಜೊತೆಗೆ ಹಣದ ವಹಿವಾಟು ನಡೆಸುತ್ತಿದೆ. ಅದರಂತೆ ವಾಟ್ಸ್ಆ್ಯಪ್ ಪೇ ಕೂಡ ಹಣದ ವಹಿವಾಟನ್ನು ಮಾಡಲು ನೆರವಾಗಲಿದೆ.
ಇದನ್ನೂ ಓದಿ: ಮಕ್ಕಳಿಗೆ ಅಂಗನವಾಡಿ ಹಂತದಿಂದಲೇ ವ್ಯವಸ್ಥಿತ ಶಿಕ್ಷಣ ನೀಡಬೇಕಾಗಿದೆ ; ಡಿಸಿಎಂ
ಪ್ರಮುಖವಾಗಿ ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಏರ್‌ಟೆಲ್ ಪೇಮೆಂಟ್ ಬ್ಯಾಂಕ್, ಆಂಧ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್, ಆರ್‌ಬಿಎಲ್, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್, ಯೆಸ್ ಬ್ಯಾಂಕ್ ಸೇರಿ ಇನ್ನು ಕೆಲವು ಬ್ಯಾಂಕ್ಗಳ ಖಾತೆಯನ್ನು ಲಿಂಕ್ ಮಾಡಬಹುದಾಗಿದೆ.
ಇದನ್ನೂ ಓದಿ: ಪ.ಬಂಗಾಳ, ದೆಹಲಿ, ಮಹಾರಾಷ್ಟ್ರದಲ್ಲಿ ಪಟಾಕಿ ನಿಷೇಧ! ದೀಪ ಬೆಳಗಿಸಿ ದೀಪಾವಳಿ ಆಚರಣೆಗೆ ಸೂಚನೆ
ವಾಟ್ಸಾಪ್ ಪೇ ಬಳಸುವುದು ಹೇಗೆ ?
- ವಾಟ್ಸಾಪ್ ಪೇ ಆಯ್ಕೆಗೆ ತೆರಳಿ ನಿರ್ದಿಷ್ಟ ಬ್ಯಾಂಕ್ ಖಾತೆಯನ್ನು ಯುಪಿಐ ಜೊತೆಗೆ ಲಿಂಕ್ ಮಾಡಿಕೊಳ್ಳಬೇಕು. ನಂತರದಲ್ಲಿ ಫೋನ್ ಪೇ ಮಾದರಿಯಲ್ಲಿಯೇ ಇದನ್ನೂ ಕೂಡ ಬಳಸಬಹುದು.
- ವಾಟ್ಸಾಪ್ ಪ್ರಮುಖವಾಗಿ 5 ಬ್ಯಾಂಕುಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜಿಯೋ ಪೇಮೆಂಟ್ಸ್ ಬ್ಯಾಂಕ್
- ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಈ ಫೀಚರ್ ಲಭ್ಯವಿದೆ.
- ಐಫೋನ್ ಬಳಕೆದಾರರಿಗಾಗಿ ಚಾಟ್ ಬಾಕ್ಸ್ ಬಳಿ ‘+’ ಐಕಾನ್ ನೀಡಲಾಗಿದೆ. ಟ್ಯಾಪ್ ಮಾಡುವ ಮೂಲಕ ಬಳಸಬಹುದಾಗಿದೆ.