Advertisement

ವಾಟ್ಸ್‌ಆ್ಯಪ್‌ ಸುರಕ್ಷಿತ ಆ್ಯಪ್‌ ಅಲ್ಲ!

08:29 AM Mar 17, 2017 | |

ಲಂಡನ್‌: ವಾಟ್ಸ್‌ಆ್ಯಪ್‌ ಪ್ರಿಯರಿಗೆ ಆಘಾತ ಸುದ್ದಿ. ನೀವು ಕಳುಹಿಸಿದ ವಿಡಿಯೋ, ಕಡತ, ಮಾಹಿತಿಗಳನ್ನು ಆಧರಿಸಿ ಹ್ಯಾಕರ್ಸ್‌ ಯಾವುದೇ ಕ್ಷಣದಲ್ಲೂ ನಿಮ್ಮ ಅಥವಾ ಸ್ನೇಹಿತರನ್ನು ಸುಲಿಗೆ ಮಾಡಬಹುದು!

Advertisement

ಚೆಕ್‌ ಪಾಯಿಂಟ್‌ ಸಂಸ್ಥೆಯ ಸಂಶೋಧಕರು ಈ ಮಾಹಿತಿ ಹೊರಹಾಕಿದ್ದು, ಫೇಸ್‌ಬುಕ್‌ ಅಧೀನದಲ್ಲಿರುವ ವಾಟ್ಸ್‌ಆ್ಯಪ್‌ನಲ್ಲಿ ಸಾಕಷ್ಟು ನ್ಯೂನತೆಗಳನ್ನು ಪತ್ತೆ ಹಚ್ಚಿದೆ.  ಗ್ರಾಹಕನ ಫೋಟೋ, ವಿಡಿಯೋ, ಪೋಸ್ಟ್‌ಗಳನ್ನು ಕದ್ದು, ಆತನ ಸ್ನೇಹಿತನ ಬಳಿ ಹಣ ಸುಲಿಗೆ ಮಾಡಿಕೊಳ್ಳುವುದು, ಇಲ್ಲವೇ ಇಬ್ಬರ ವೈಯಕ್ತಿಕ ಮಾಹಿತಿ, ಖಾತೆಯಿಂದ ಸುಲಭವಾಗಿ ಹಣ ಎಗರಿಸುವ ಕೃತ್ಯ ನಡೆಸಬಹುದು ಎಂದು ಎಚ್ಚರಿಸಿದೆ. ಅದರಲ್ಲೂ ವಾಟ್ಸ್‌ಆ್ಯಪ್‌ ವೆಬ್‌ ಬಳಸುವವರಿಗೆ ಈ ಆಘಾತ ಹೆಚ್ಚು ಎಂದಿದೆ. ಬ್ಯಾಂಕ್‌ ಖಾತೆಯ ವಿವರಗಳನ್ನು ಹಂಚಿಕೊಳ್ಳುವುದರಿಂದ ಹಾನಿಯೇ ಹೆಚ್ಚು ಎಂದಿದೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ , “ಚೆಕ್‌ಪಾಯಿಂಟ್‌ನ ವರದಿ ಆಧರಿಸಿ ಒಂದು ದಿನದೊಳಗೆ ಸುಧಾರಿತ ಮಾದರಿ ಬಿಡುಗಡೆ ಮಾಡುತ್ತೇವೆ’ ಎಂದಿದೆ. ಅಲ್ಲದೆ, ಟೆಲಿಗ್ರಾಮ್‌ ಕೂಡ ದೋಷಪೂರಿತ ಆ್ಯಪ್‌ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next