Advertisement

ವಾಟ್ಸ್ಯಾಪ್ ನಲ್ಲಿ ಬಂದಿದೆ 3 ಹೊಸ ಫೀಚರ್: ಇನ್ಮುಂದೆ ಚಾಟಿಂಗ್-ಟಾಕಿಂಗ್ ಮತ್ತಷ್ಟು ಆಕರ್ಷಕ!

09:43 AM Dec 19, 2019 | Mithun PG |

ನವದೆಹಲಿ: ತಂತ್ರಜ್ಞಾನ ದೈತ್ಯ ವಾಟ್ಸ್ಯಾಪ್ ತನ್ನ ಹೊಸ ಹೊಸ ಫೀಚರ್ ಗಳಿಂದಲೇ ಬಳಕೆದಾರರ ಮನಗೆಲ್ಲುತ್ತಿದೆ. ಇದೀಗ ಯುವ ಜನರನ್ನು ಆಕರ್ಷಿಸಲು ಮತ್ತಷ್ಟು ಹೊಸ ಫೀಚರ್ ಗಳನ್ನು ತನ್ನ ಅಪ್ ಡೇಟ್ ವರ್ಷನ್ ನಲ್ಲಿ ನೀಡಿದ್ದು ಬಳಕೆದಾರರಿಗೆ ಚಾಟಿಂಗ್-ಟಾಕಿಂಗ್ ಅನುಭವ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ಫೇಸ್​ಬುಕ್ ಇಂಕ್ ಕಂಪೆನಿ ಹೇಳಿದೆ.

Advertisement

ಹೌದು ! ವಾಟ್ಸ್ಯಾಪ್ ಇದೀಗ ನೂತನ  ಮೂರು ಫೀಚರ್ ಗಳನ್ನು ಪರಿಚಿಯಿಸಿದೆ. ಅದು ಬಳಕೆದಾರರಿಗೆ ಮತ್ತಷ್ಟು ಸಂತಸ ತರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

1) ಕಾಲ್ ವ್ಯೆಟಿಂಗ್(waiting) ಆಯ್ಕೆ: ನೀವು ವಾಟ್ಸ್ಯಾಪ್ ​ ಕರೆಯಲ್ಲಿ ನಿರತರಾಗಿದ್ದಾಗಲೇ ಮತ್ತೊಂದು ಕರೆ ಬಂದರೆ  ವ್ಯೆಟಿಂಗ್ ನಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ಒಬ್ಬರೊಂದಿಗೆ ಮಾತನಾಡುವ ವೇಳೆ ಅವರನ್ನು ಹೋಲ್ಡ್ ಮಾಡಿ ಮತ್ತೊಂದು ಕರೆಯನ್ನು ಸ್ವೀಕರಿಸುವ ಸೌಲಭ್ಯ ವಾಟ್ಸ್ಯಾಪ್ ಕಾಲ್​ನಲ್ಲಿ ಲಭ್ಯವಾಗಲಿದೆ.

2)  ವಾಟ್ಸ್ಯಾಪ್ ರಿಮೈಂಡರ್ ಫೀಚರ್ (WhatsApp Reminder Feature) : ಈ ಫೀಚರ್​ ಸಹಾಯದಿಂದ ಅಗತ್ಯ ಕಾರ್ಯಕ್ರಮಗಳು,  ಪ್ರಮುಖ ದಿನಾಂಕಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡಬಹುದು. ಇದಕ್ಕಾಗಿ ಬಳಕೆದಾರರು ತಮ್ಮ ವಾಟ್ಸ್ಯಾಪ್ ಅಕೌಂಟ್​ನ್ನು Any.do ಜೊತೆ ಲಿಂಕ್ ಮಾಡಬೇಕಾಗಿದೆ. ಆ ಬಳಿಕ ರಿಮೈಂಡರ್ ಸೇವೆಯನ್ನು ಬಳಕೆದಾರರು ಪಡೆದುಕೊಳ್ಳಬಹುದು.

Advertisement

#) ವಾಟ್ಸ್ಯಾಪ್  ಗ್ರೂಪ್ ಗೌಪ್ಯತೆ ಸೆಟ್ಟಿಂಗ್​​​: ಈ ಹಿಂದೆ ತಿಳಿಸಲಾಗಿರುವ  ವಾಟ್ಸ್ಯಾಪ್ ಗೌಪ್ಯತೆ ಸೆಟ್ಟಿಂಗ್  ಎಲ್ಲಾ ಮೊಬೈಲ್​ಗಳಲ್ಲೂ ಜಾರಿಗೆ ಬಂದಿದೆ. ಇದರಿಂದ ಇನ್ನು ಮುಂದೆ ವಾಟ್ಸ್ಯಾಪ್ ​ನಲ್ಲಿ ಬೇರೆ ಗುಂಪಿಗೆ ಸೇರುವ ಮುನ್ನ ಬಳಕೆದಾರರ ಅನುಮತಿ ಕೇಳುವುದನ್ನು ಕಡ್ಡಾಯಗೊಳಿಸಿದೆ. ವಾಟ್ಸ್ಯಾಪ್ ಪರಿಚಯಿಸಿರುವ ನೂತನ ಫೀಚರ್ ಗ್ರೂಪ್ ಗೌಪ್ಯತೆ ಅಳವಡಿಸುವವರು ಆ್ಯಪ್​​ನಲ್ಲಿ Settings ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ Account ಆ ಬಳಿಕ  Privacy ಇದಾದ ಮೇಲೆ Groups ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Who can add me to groups (ಯಾರು ನಿಮ್ಮನ್ನು ಗುಂಪಿಗೆ ಸೇರಿಸಬಹುದು) ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಇಲ್ಲಿ ನಿಮಗೆ Everyone , my contacts my contacts except ಮೂರು ಆಯ್ಕೆಗಳು ಕಾಣಿಸುತ್ತದೆ. ಬಳಕೆದಾರರು ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next