Advertisement

ನಿಮಗಿದು ತಿಳಿದಿರಲಿ; ವಾಟ್ಸಪ್ ಶೆಡ್ಯೂಲ್ ಮಾಡೋದು ಹೇಗೆ, ಬ್ಲೂಟಿಕ್ ರಹಸ್ಯ ಏನು?

10:01 AM Dec 25, 2019 | Mithun PG |

ವಿಶ್ವದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜಿಂಗ್ ಅಪ್ಲಿಕೇಶನ್ ಎಂದರೇ ಅದು ವಾಟ್ಸ್ಯಾಪ್. ಪ್ರತಿಯೊಬ್ಬರ ಮನಗೆದ್ದಿರುವ ಈ ವಾಟ್ಸ್ಯಾಪ್ ಹಲವು ಉತ್ಕೃಷ್ಠವಾದ ಫೀಚರ್ ಗಳನ್ನು ಹೊರತರುತ್ತಲೇ ಇರುತ್ತದೆ. ಇದಕ್ಕೆ ಬೆಂಬಲವಾಗಿ ಇತರೆ ಆ್ಯಪ್ ಗಳು ಕೂಡ ಕಾರ್ಯನಿರ್ವಹಿಸುತ್ತಿರುತ್ತದೆ. ಪ್ರಮುಖವಾಗಿ ಶೆಡ್ಯೂಲ್ ಮಾಡಲು, ಡಿಲೀಟ್ ಆದ ಮೆಸೇಜ್ ಗಳನ್ನು ಓದಲು, ಸ್ಟೇಟಸ್ ಡೌನ್ ಲೋಡ್ ಮಾಡಲು, ಇನ್ನೀತರ  ಹಿಡನ್ ಫೀಚರ್ ಗಳನ್ನು ಒಳಗೊಂಡು ಯುವಜನರ ಮನಸೂರೆಗೊಳ್ಳಲು ಯತ್ನಿಸುತ್ತವೆ. ಅಂತಹ ಕೆಲ ಆ್ಯಪ್ ಗಳ ಪರಿಚಯ ಮತ್ತು ಹಿಡನ್ ಫೀಚರ್ ಗಳ ಕುರಿತಾದ ಮಾಹಿತಿ ಇಲ್ಲಿದೆ.

Advertisement

SKEDit: ಇಂದು ಹಲವು ಜನರಿಗೆ ತಮ್ಮ ಪ್ರೀತಿಪಾತ್ರರ ಬರ್ತ್ ಡೇ, ಮದುವೆ ಸಮಾರಂಭ, ಇನ್ನಿತರ ಶುಭಕಾರ್ಯಗಳ ದಿನಾಂಕವನ್ನು ನೆನಪಿಟ್ಟುಕೊಳ್ಳುವುದೇ ಬಹಳ ಕಷ್ಟಕರವಾದ ವಿಷಯ. ಹಾಗಾಗಿ ಈ ಆ್ಯಪ್ ಯಾವುದೇ ವಾಟ್ಸ್ಯಾಪ್ ಮೆಸೇಜ್ ಗಳನ್ನು ಶೆಡ್ಯೂಲ್ ಮಾಡಲು ನೆರವಾಗುತ್ತದೆ.

ಉದಾ: ತಡರಾತ್ರಿ 12 ಗಂಟೆಗೆ ನಿಮ್ಮ ಮನದರಸಿಗೆ ಬರ್ತ್ ಡೇ ಶುಭಾಶಯ ಕೋರಬೇಕು. ಆದರೇ ವಿಪರೀತ ಕೆಲಸದ ಒತ್ತಡದಿಂದಾಗಿ 12 ಗಂಟೆಗೆ ಎಚ್ಚರವಾಗುವುದಿಲ್ಲವೆಂದಿಟ್ಟುಕೊಳ್ಳಿ. ಆಗ Skedit app ಡೌನ್ ಲೋಡ್ ಮಾಡಿ ಅಲ್ಲಿ ಕಳುಹಿಸಬೇಕಾದ ಮೆಸೇಜ್ ಅನ್ನು ಟೈಪ್ ಮಾಡಿ ಶೆಡ್ಯೂಲ್ ಮಾಡಿದರಾಯಿತು. ಅದು 12 ಗಂಟೆಗೆ ಅಟೋಮ್ಯಾಟಿಕ್ ಆಗಿ ರವಾನೆಯಾಗುತ್ತದೆ.

Auto clicker: ಈ ಆ್ಯಪ್ ತುಂಬಾ ಉಪಯುಕ್ತವಾದುದು. ಪದೇ ಪದೇ ವಾಟ್ಸ್ಯಾಪ್ ನಲ್ಲಿ ಟೈಪಿಸುವುದನ್ನು ತಪ್ಪಿಸುತ್ತದೆ. ಈ ಅ್ಯಪ್ ಇನ್ ಸ್ಟಾಲ್ ಮಾಡಿದ ತಕ್ಷಣ, ಚಾಟಿಂಗ್  ಡಿಸ್ ಪ್ಲೇಯ ಸಮೀಪ ಇದರ ಬಟನ್ ಗಳು ಅಟೋಮ್ಯಾಟಿಕ್ ಆಗಿ ಕಾಣಿಸುತ್ತದೆ. ನೀವು ಟೈಪ್ ಮಾಡಬೇಕೆಂದಿರುವ ಅಕ್ಷರದ ಮೇಲೆ ಈ ಬಟನ್ ಗಳು ಎಳೆದು  ಎನೆಬಲ್  ಮಾಡಿದರಾಯಿತು. ತಕ್ಷಣ ಯಾವುದೇ ಶ್ರಮವಿಲ್ಲದೆ ನಿಯಮಿತವಾಗಿ ಮೆಸೇಜ್ ಕಳುಹಿಸಲು ಇದು ಆರಂಭಿಸುತ್ತದೆ.

Advertisement

WAMR: ನಿಮ್ಮ ವಾಟ್ಸ್ಯಾಪ್ ಗೊಂದು ಮೆಸೇಜ್ ಬಂದಿರುತ್ತೆ. ಆದರೇ ನೀವು ನೋಡುವ ಮೊದಲೇ ಅದನ್ನು ಡಿಲೀಟ್ ಕೂಡ ಮಾಡಲಾಗಿರುತ್ತದೆ. ಈ ಡಿಲೀಟ್ ಆದ ಮೆಸೇಜ್ ಗಳು  WAMR ಎಂಬ ಅ್ಯಪ್ ನಲ್ಲಿ  ಸ್ಟೋರ್ ಆಗಿರುತ್ತದೆ. ಮುಖ್ಯವಾದ ವಿಷಯವೆಂದರೇ ಈ ಅ್ಯಪ್ ಅನ್ನು  ಮೆಸೇಜ್ ಬರುವ ಮೊದಲೇ ಇನ್ ಸ್ಟಾಲ್ ಮಾಡಿಕೊಂಡಿರಬೇಕು. ಮತ್ತು ಮೆಸೇಜ್ ಬರುವಾಗ ಇಂಟರ್ ನೆಟ್ ಆನ್ ಆಗಿರಬೇಕು. ಆಗಿದ್ದಾಗ ಮಾತ್ರ ಡಿಲೀಟೆಡ್ ಮೆಸೇಜ್ ಗಳು ಅಪ್ಲಿಕೇಶನ್ ನಲ್ಲಿ ಸ್ಟೋರ್ ಆಗಿರುತ್ತದೆ.

ಈ ಆ್ಯಪ್ ನ ಮತ್ತೊಂದು ವಿಶೇಷತೆ ಎಂದರೇ, ಇದರಲ್ಲಿ ಯಾವುದೇ ರೀತಿಯ ವಾಟ್ಸ್ಯಾಪ್ ಸ್ಟೇಟಸ್ ಕೂಡ ಡೌನ್ ಲೋಡ್ ಮಾಡಬಹುದು. ಒಂದು ರೀತಿಯಲ್ಲಿ ಬಹು ಉಪಯೋಗಿ ರೀತಿ ಕಾರ್ಯ ನಿರ್ವಹಿಸುತ್ತದೆ.

ಇನ್ನಿತರ ವಾಟ್ಸ್ಯಾಪ್ ಸೀಕ್ರೇಟ್ ಗಳು:

  • ಹಲವರು ತಮ್ಮ ಪ್ರೈವಸಿಗಾಗಿ ವಾಟ್ಸ್ಯಾಪ್ ನಲ್ಲಿ ಬ್ಲೂ ಟಿಕ್ ಆಫ್ ಮಾಡಿರುತ್ತಾರೆ. ಆದರೇ ಈ ಬ್ಲೂ ಟಿಕ್ ವಾಯ್ಸ್ ಮೆಸೇಜ್ ಗಳಿಗೆ ಅನ್ವಯವಾಗಲ್ಲ ಎಂಬುದು ನೆನಪಿರಲಿ.
  • ಇತ್ತೀಚಿಗೆ ವಾಟ್ಸಾಪ್ ನಲ್ಲಿ ನಿಯಮಿತವಾಗಿ ವಾಯ್ಸ್ ಮೆಸೇಜ್ ಬಂದರೇ ಅದು ಒಂದರ ಹಿಂದೆ ಮತ್ತೊಂದು ಪ್ಲೇ ಅಗುವ ಫೀಚರ್ ಬಂದಿತ್ತು. ಅದರ ಜೊತೆಗೆ ಬಂದಿರುವ ಮತ್ತೊಂದು ಫೀಚರ್ ಎಂದರೇ, ನಿಮ್ಮ ಬಳಿ ಇಯರ್ ಫೋನ್ ಇರುವುದಿಲ್ಲ. ಆಗಲೇ ನಿಮ್ಮ ಸ್ನೇಹಿತರು ವಾಯ್ಸ್ ಮೆಸೇಜ್ ಒಂದನ್ನು ಕಳುಹಿಸಿರುತ್ತಾರೆ. ಸುತ್ತಮುತ್ತಲೂ ಜನರಿದ್ದಾರೆ. ಹೇಗಪ್ಪಾ ಕೇಳುವುದು ಎಂದು ಚಿಂತಿಸಬೇಕಿಲ್ಲ.  ಏಕೆಂದರೇ ವಾಯ್ಸ್ ಮೆಸೇಜ್ ಆನ್ ಮಾಡಿ ನಿಮ್ಮ ಕಿವಿಯ ಬಳಿ ಇರಿಸಿಕೊಂಡರೇ ಸಾಕು. ಅದು ನಿಮಗೆ ಮಾತ್ರ ಕೇಳುತ್ತದೆ, ಥೇಟ್ ಫೋನ್ ಕರೆ ಸ್ವೀಕರಿಸಿದ ಮಾದರಿಯಲ್ಲಿ. ಒಮ್ಮೆ ಪರಿಶೀಲಿಸಿ ನೋಡಿ.
  • ವಾಟ್ಸ್ಯಾಪ್ ನ ಪ್ರತಿಯೊದು ಅಪ್ಡೇಟ್ ಗಳು ನಿಮಗೆ ಮೊದಲು ಬರಬೇಕೆಂದರೆ ಬೀಟಾ ಅವೃತ್ತಿಗೆ ಜಾಯಿನ್ ಆಗಿ. ಇದರಿಂದ ಇತರರಿಗಿಂತ ಮೊದಲೇ ಹೊಸ ಫೀಚರ್ ಗಳನ್ನು ಬಳಸಲು ಆರಂಭಿಸಬಹುದು.
  • ವಾಟ್ಸ್ಯಾಪ್ ಓಪನ್ ಮಾಡದೆಯೇ ನಿಮಗೆ ಬಂದಂತಹ ಮೆಸೇಜ್ ಅನ್ನು ಓದುವ ಅವಕಾಶವಿದೆ. ನಿಮ್ಮ ಮೊಬೈಲ್ ನಲ್ಲಿರುವ ಹೋಂ ಸ್ಕ್ರೀನ್ ಮೇಲೆ ಲಾಂಗ್ ಪ್ರೆಸ್ ಮಾಡಿ. Widgets ಎಂಬ ಆಯ್ಕೆ ಕಾಣಿಸುತ್ತದೆ. ಸತತವಾಗಿ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿದಾಕ್ಷಣ ವಾಟ್ಸ್ಯಾಪ್ ಚಾಟ್ಸ್ ಲೀಸ್ಟ್ ಕಾಣಿಸುವುದು.  ಅದರ ಮೇಲೆ ಲಾಂಗ್ ಪ್ರೆಸ್ ಮಾಡಿ ಹೋಂ ಸ್ಕ್ರೀನ್ ನಲ್ಲಿ ಹಾಕಿದರೆ ನಿಮಗೆ ಬಂದ 100 ವಾಟ್ಸ್ಯಾಪ್ ಅನ್ ರೀಡ್ ಮೆಸೇಜ್ ಗಳು ಡಿಸ್ ಪ್ಲೇ ಆಗುತ್ತದೆ.

ಆದರೇ ಇತರರ ಪ್ರೈವಸಿಗೆ ಧಕ್ಕೆ ಬಾರದಂತೆ ಈ ಆ್ಯಪ್ ಗಳನ್ನು ಬಳಸುವುದು ಅತೀ ಅವಶ್ಯಕ. ಮಾತ್ರವಲ್ಲದೆ ಇತರೆ ಆ್ಯಪ್ ಗಳನ್ನು (ಥರ್ಡ್ ಪಾರ್ಟಿ ಆ್ಯಪ್) ಬಳಸುವಾಗ ನಿಮ್ಮ ಖಾಸಗಿ ಡೇಟಾಗಳೂ ಸೋರಿಕೆಯಾಗುವ ಸಂಭವವೂ ಇರುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಿ.

ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next