ನ್ಯೂಯಾರ್ಕ್: ಡೆಸ್ಕ್ ಟಾಪ್ ನಲ್ಲಿ ವಾಟ್ಸಾಪ್ ಬಳಸಬೇಕಾದರೇ ಈ ಮೊದಲು ನಮ್ಮ ಫೋನ್ ತೆಗೆದುಕೊಂಡು ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಲಾಗಿನ್ ಆಗಬೇಕಿತ್ತು. ಇದೊಂದು ದೀರ್ಘಾವಧಿಯ ವಿಧಾನವಾಗಿದ್ದು, ಕೆಲವೊಮ್ಮೆ ನೆಟ್ ವರ್ಕ್ ಸಮಸ್ಯೆಯಿದ್ದರೇ ಲಾಗಿನ್ ಆಗುವುದು ಕೂಡ ವಿಳಂಬವಾಗುತ್ತಿತ್ತು. ಈಗ ಅದಕ್ಕೊಂದು ಪರಿಹಾರ ಸಿಕ್ಕಿದ್ದು ಅದೇನೆಂದು ಮುಂದೆ ಓದಿ.
ಈಗಿರುವ ಡೆಸ್ಕ್ ಟಾಪ್ ವಾಟ್ಸಾಪ್ ಲಾಗಿನ್ ವಿಧಾನ ಶೀಘ್ರದಲ್ಲಿ ಬದಲಾಗಲಿದೆ. ಇನ್ನು ಮುಂದೆ ವಾಟ್ಸಾಪ್ ವೆಬ್ ಗೆ ಕೇವಲ ಫಿಂಗರ್ ಪ್ರಿಂಟ್ ಮೂಲಕ ಲಾಗಿನ್ ಆಗಬಹುದು.
WABetaInfo ವರದಿ ಪ್ರಕಾರ ವಾಟ್ಸಾಪ್ ವೆಬ್ ಫಿಂಗರ್ ಲಾಗಿನ್ ಫೀಚರ್ ಪರೀಕ್ಷಾರ್ಥ ಹಂತದಲ್ಲಿದೆ. ಮಾತ್ರವಲ್ಲದೆ ಇತ್ತೀಚಿನ ವಾಟ್ಸಾಪ್ ಬೇಟಾ ಅವೃತ್ತಿಯಲ್ಲೂ ಲಭ್ಯವಿದೆ. ಹೊಸ ಲಾಗಿನ್ ಫೀಚರ್ ಬಹಳ ಅನುಕೂಲಕರವಾಗಿದೆ ಎಂದೇ ಬಣ್ಣಿಸಲಾಗಿದೆ. ಅದಾಗ್ಯೂ ಕ್ಯೂಆರ್ ಕೋಡ್ ನಂತೆ ಇದರ ಕಾರ್ಯನಿರ್ವಹಣೆಯೂ ಒಂದೇ ತೆರನಾಗಿರಲಿದೆ. ಈ ಫೀಚರ್ ಬಳಕೆಗೆ ಬಂದ ತಕ್ಷಣ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತಿಲ್ಲ. ಬದಲಾಗಿ ನಿಮ್ಮ ಫೋನ್ ನಲ್ಲಿಯೇ ವಾಟ್ಸಾಪ್ ವೆಬ್ ಗೆ ಫಿಂಗರ್ ಪ್ರಿಂಟ್ ನೀಡಿದರಾಯಿತು. ಇಲ್ಲಿಯೂ ಕೂಡ ಸ್ಮಾರ್ಟ್ ಫೋನ್ ಬಳಕೆ ಮಾಡುವುದು ಅನಿವಾರ್ಯ. ಅದಾಗ್ಯೂ ಫಿಂಗರ್ ಪ್ರಿಂಟ್ ಸ್ಕ್ಯಾನ್, ಕೋಡ್ ಸ್ಕ್ಯಾನ್ ಗಿಂತ ಬಹಳ ಸುಲಭಕರವಾಗಲಿದೆ.
ಇದನ್ನೂ ಓದಿ: ಮಧ್ಯಾಹ್ನ ಕಾಣೆಯಾಗಿ ಸಂಜೆಯ ವೇಳೆ Google’s Play Storeನಲ್ಲಿ ಪ್ರತ್ಯಕ್ಷವಾದ Paytm !
Related Articles
ಇದನ್ನೂ ಓದಿ: ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್
ಮಾತ್ರವಲ್ಲದೆ ಸುರಕ್ಷತಾ ದೃಷ್ಟಿಯಿಂದ ಕೂಡ ಫಿಂಗರ್ ಪ್ರಿಂಟ್ ಅತ್ಯುತ್ತಮವಾಗಲಿದೆ. ಕ್ಯೂಆರ್ ಕೋಡ್ ಬಳಸಿ ಬೇರೊಬ್ಬರು ಸುಲಭವಾಗಿ ನಿಮ್ಮ ಫೋನ್ ಹ್ಯಾಕ್ ಮಾಡಬಹುದಿತ್ತು. ಇನ್ನು ಮುಂದೆ ಅದು ಅಸಾಧ್ಯವಾಗಲಿದೆ. ಕಳೆದ ವರ್ಷದಿಂದ ಈ ಫೀಚರ್ ಬಳಕೆಗೆ ತರಲು ವಾಟ್ಸಾಪ್ ಯೋಜನೆ ರೂಪಿಸುತ್ತಿತ್ತು.