Advertisement

ವಾಟ್ಸ್‌ಆ್ಯಪ್‌ ಸಂದೇಶ: ದೂರು ನೀಡಿ

12:30 AM Feb 24, 2019 | |

ಹೊಸದಿಲ್ಲಿ: ವಾಟ್ಸ್‌ಆ್ಯಪ್‌ನಲ್ಲಿ ಇನ್ನು ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ಬಂದರೆ ಟೆಲಿಕಾಂ ಇಲಾಖೆಗೆ ದೂರು ನೀಡಬಹುದು. 

Advertisement

ಸಂದೇಶದ ಸ್ಕ್ರೀನ್‌ಶಾಟ್‌ ತೆಗೆದು – ಇಮೇಲ್‌ ಐಡಿಗೆ ಕಳುಹಿಸಬಹುದು. ಈ ಬಗ್ಗೆ ದೂರಸಂಪರ್ಕ ಇಲಾಖೆಯೇ ಪ್ರಕಟಣೆ ಹೊರಡಿಸಿದ್ದು, ಈ ವಿಚಾರವನ್ನು ಟೆಲಿಕಾಂ ಆಪರೇಟರ್‌ಗಳು, ಪೊಲೀಸ್‌ ಮುಖ್ಯಸ್ಥರ ಗಮನಕ್ಕೆ ತರುತ್ತೇವೆ ಎಂದು ಟೆಲಿಕಾಂ ಇಲಾಖೆಯ ಸಂವಹನ ವಿಭಾಗದ ಕಂಟ್ರೋ ಲರ್‌ ಆಶಿಶ್‌ ಜೋಶಿ ಟ್ವೀಟ್‌ ಮಾಡಿದ್ದಾರೆ. 

ಇತ್ತೀಚೆಗೆ ಹಲವು ವ್ಯಕ್ತಿಗಳು ಹಾಗೂ ಪತ್ರಕರ್ತರು ಅಶ್ಲೀಲ, ಅವಹೇಳನಕಾರಿ ಮತ್ತು ಬೆದರಿಕೆ ಸಂದೇಶಗಳು ಬಂದಿರುವ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಸಿಮ್‌ ಖರೀದಿ ಮಾಡುವಾಗಲೇ ಗ್ರಾಹಕರು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುವುದಿಲ್ಲ ಎಂದು ಅರ್ಜಿ ನಮೂನೆ ಯಲ್ಲಿ ಘೋಷಿಸಿರುತ್ತಾರೆ. 

ಹೀಗಾಗಿ ಇಂಥವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಫೆ. 19ರಂದು ಸರಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸು ವಂತೆ ಎಲ್ಲ ಟೆಲಿಕಾಂ ಸೇವೆ ಪೂರೈಕೆದಾರರಿಗೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next