Advertisement

Fraud: ಗಂಗೊಳ್ಳಿ: ವಾಟ್ಸಾಪ್‌ ಲಿಂಕ್‌ ಕಳುಹಿಸಿ ವಂಚನೆ

08:43 PM Feb 22, 2024 | Team Udayavani |

ಗಂಗೊಳ್ಳಿ: ಅಪರಿಚಿತ ವ್ಯಕ್ತಿಗಳು ಅಫ್ರೀನ್‌ (30) ಅವರ ಮೊಬೈಲಿಗೆ ಎಚ್‌.ಆರ್‌. ದಿವ್ಯಾ ಬೆಂಗಳೂರು ಎಂಬ ಹೆಸರಿನಲ್ಲಿ  ವಾಟ್ಸಾಪ್‌ನಲ್ಲಿ ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ ಕಳುಹಿಸಿ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

Advertisement

ವಾಟ್ಸಾಪ್‌ನಲ್ಲಿ ಹಲವು ಟಾಸ್ಕ್ಗಳನ್ನು ನೀಡಿ, ಅದಕ್ಕಾಗಿ ಹಣ ಪಾವತಿಸುವಂತೆ ತಿಳಿಸಿ ಹಂತಹಂತವಾಗಿ 11 ದಿನಗಳಲ್ಲಿ 5,26,731 ರೂ.ಗಳನ್ನು ಜಮೆ ಮಾಡಿಕೊಂಡಿದ್ದಾರೆ. ಈ ಪೈಕಿ 57,201 ರೂ. ಅನ್ನು ಅಫ್ರೀನ್‌ ಖಾತೆಗೆ ವಾಪಾಸು ಜಮೆ ಮಾಡಿದ್ದು, ಉಳಿದ 4,69,530 ರೂ.ಗಳನ್ನು ನೀಡದೆ ಲಕ್ಸುರಿ ಪ್ರೊಡೆಕ್ಟ್ ಬರುತ್ತದೆ ಎಂದು ಹೇಳಿ ನಂಬಿಸಿ ಮೋಸ ಮಾಡಿದ್ದಾಗಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next