Advertisement

ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಾಟ್ಸ್‌ ಆ್ಯಪ್‌ ಕಲಿಕೆ

09:48 AM Jul 28, 2020 | Suhan S |

ಜೋಯಿಡಾ: ಕೋವಿಡ್ ಹೆಮ್ಮಾರಿ ಮಕ್ಕಳ ಕಲಿಕೆಗೆ ಮುಳುವಾಗಿ ನಿಂತಿದ್ದು, ಶಿಕ್ಷಣ ಕ್ಷೇತ್ರವನ್ನು ಕಂಗೆಡಿಸಿದೆ. ಈ ಭಯದಲ್ಲಿ ಮಕ್ಕಳ ಕಲಿಕೆ ಹೇಗೆ ಎಂದು ಪೋಷಕರು ಚಿಂತೆಯಲ್ಲಿರುವಾಗಲೇ ನಂದಿಗದ್ದೆ ಕ್ಲಸ್ಟರ್‌ ಮಟ್ಟದಲ್ಲಿ ಶಿಕ್ಷಕರು ವಾಟ್ಸ್‌ಆ್ಯಪ್‌ ಮೂಲಕ ಮಕ್ಕಳ ಕಲಿಕೆ ಪ್ರಾರಂಭಿಸಿದ್ದಾರೆ. ಇದು ಪಾಲಕರಲ್ಲಿ ಸಂತಷ ತಂದಿದೆ.

Advertisement

ಜೋಯಿಡಾ ತಾಲೂಕಿನ ನಂದಿಗದ್ದೆ ಕ್ಲಷ್ಟರ್‌ ಶಿಕ್ಷಕರು ಅಲ್ಲಿನ ಸಿಆರ್‌ಪಿ ಭಾಸ್ಕರ್‌ ಗಾಂವಕರ್‌ ಮಾರ್ಗದರ್ಶನದಲ್ಲಿ ಅಲ್ಲಿನ 13 ಪ್ರಾಥಮಿಕ ಶಾಲೆ, 1 ಉರ್ದು ಶಾಲೆ ಹಾಗೂ 2 ಪ್ರೌಢಶಾಲೆ ಸೇರಿ ಒಟ್ಟು 16 ಶಾಲೆಗಳಿಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಮಾರ್ಗದರ್ಶನದಂತೆ 1ರಿಂದ 10ನೇ ತರಗತಿಯವರೆಗೆ ಆಯಾ ತರಗತಿಗೆ ಅನುಗುಣವಾಗಿ ಪ್ರತಿನಿತ್ಯ ಎಲ್ಲ ವಿಷಯಗಳ ಪಾಠ ಕಲಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ತಯಾರಿಸಿ ಮುಖ್ಯ ಶಿಕ್ಷಕರ ಮುಖೇನ ಮಕ್ಕಳ ಎಲ್ಲ ಪಾಲಕರ ವಾಟ್ಸ್‌ಆ್ಯಪ್‌ಗೆ ರವಾನಿಸುತ್ತಾರೆ. ಜೋಯಿಡಾ ತಾಲೂಕಿನಲ್ಲಿಯೇ ಇದು ಪ್ರಥಮ ಪ್ರಯೋಗವಾಗಿದ್ದು, ಯಶಸ್ವಿ ಕಂಡಂತಿದೆ.

ವಿದ್ಯಾರ್ಥಿಗಳಲ್ಲಿ ಹೊಸ ಹುರುಪು: ಹೊಸತನದ ಈ ವಾಟ್ಸ್‌ಆ್ಯಪ್‌ ಕಲಿಕೆ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತುಂಬಿದೆ. ಕಲಿಕೆಯಲ್ಲಿ ಪ್ರತಿನಿತ್ಯ ಭಾಗವಹಿಸುವ ವಿದ್ಯಾರ್ಥಿಗಳು ಶಿಕ್ಷಕರಿಂದ ವಾಟ್ಸ್‌ಆ್ಯಪ್‌ಗೆ ಬಂದಿರುವ ದೈನಂದಿನ ಪಾಠಗಳನ್ನು ಓದಿ, ತಿಳಿದುಕೊಳ್ಳುವ ಮೂಲಕ ಪ್ರಶ್ನೆಗಳಿಗೆ ಉತ್ತರ ಬರೆದು ಶಿಕ್ಷಕರ ವಾಟ್ಸ್‌ಆ್ಯಪ್‌ಗೆ ಮರಳಿ ಕಳಿಸುತ್ತಾರೆ. ಶಿಕ್ಷಕರು ಮಕ್ಕಳ ಉತ್ತರ ನೋಡಿ ತಪ್ಪಿದ್ದಲ್ಲಿ ಸರಿಪಡಿಸಿ ಮರಳಿ ಪಾಲಕರ ವಾಟ್ಸ್ ಆ್ಯಪ್‌ಗೆ ಕಳಿಸುವ ಮೂಲಕ ಕಲಿಕೆಯಲ್ಲಿ ಮಕ್ಕಳು ಪೂರ್ಣವಾಗಿ ತೊಡಗುವಂತೆ ಮಾಡುತ್ತಿದ್ದಾರೆ.

ಅಂತರ್ಜಾಲಕ್ಕಾಗಿ ಡೊಂಗಲ್‌ ಖರೀದಿ: ನಂದಿಗದ್ದೆ ಕ್ಲಷ್ಟರ್‌ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ ಎಲ್‌ ನೆಟ್‌(ಅಂತರಜಾಲ ಸಂಪರ್ಕ)ತುಂಬಾ ನಿಧಾನವಾಗಿದ್ದರಿಂದ ಅನೇಕ ಪಾಲಕರು ನೆಟ್‌ನ ವೇಗಕ್ಕಾಗಿ ಬಿಎಸ್‌ಎನ್‌ಎಲ್‌ನ ಡೊಂಗಲ್‌ ಖರೀದಿಸುವ ಮೂಲಕ ವಾಟ್ಸ್‌ಆ್ಯಪ್‌ ಕಲಿಕೆಗೆ ಅನುಕೂಲಮಾಡಿಕೊಳ್ಳುತ್ತಿದ್ದಾರೆ. ಪುಸ್ತಕ ವಿತರಣೆ: ಕ್ಲಷ್ಟರ್‌ನ ಪ್ರತಿಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವಲ್ಲಿ ಬಿಇಒ, ಪಠ್ಯಪುಸ್ತಕಗಳ ನೋಡಲ್‌ ಅಧಿಕಾರಿಗಳು, ಸಿಆರ್‌ಪಿ ಹಾಗೂ ಶಿಕ್ಷಕರು ಉತ್ತಮ ಕೆಲಸಮಾಡಿದ್ದು, ವಾಟ್ಸ್ ಆ್ಯಪ್‌ ಕಲಿಕೆಗೆ ಉತ್ತೇಜನ ನೀಡುತ್ತಿದೆ. ಆದರೆ ತಾಲೂಕು ಹಳ್ಳಿಗಳಿಂದ ಕೂಡಿದ್ದು, ಶೇ. 30ರಷ್ಟು ಗ್ರಾಮೀಣ ಪ್ರದೇಶಗಳು ವಾಟ್ಸ್‌ಆ್ಯಪ್‌ ಗಳಿಂದ ಮುಕ್ತವಾಗಿಸೆ. ಕೆಲವೆಡೆ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಇಲ್ಲ. ಆದರೆ ನೆಟ್‌ವರ್ಕ್‌ ಸೇವೆ ದೊರೆಯುವ ಹತ್ತಿರದ ಪ್ರದೇಶಕ್ಕೆ ಬಂದು ವಾಟ್ಸ್ ಆ್ಯಪ್‌ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ಕಲಿಕೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದರ ಹೊರತಾಗಿ ಶೇ. 70ರಷ್ಟು ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ.

ತಾಲೂಕಿನ ನಂದಿಗದ್ದಾ ಕ್ಲಸ್ಟರ್‌ನಲ್ಲಿನ ವಾಟ್ಸ್‌ಆ್ಯಪ್‌ ಕಲಿಕಾ ಪ್ರಯತ್ನ ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ಒಂದು ಮಾದರಿಯಾಗಿದೆ. ಇದರ ಯಶಸ್ಸು ಅಲ್ಲಿನ ಸಿಆರ್‌ಪಿಗಳಿಗೆ ಸಲ್ಲುತ್ತದೆ. ಇದೇ ರೀತಿ ತಾಲೂಕಿನ ಇತರೆಡೆಯಲ್ಲಿಯೂ ಕಲಿಕೆಗೆ ಆರಂಭಿಸುವ ಪ್ರಯತ್ನ ಮಾಡಲಾಗುವುದು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲು ನಮ್ಮ ಪ್ರಯತ್ನ ನಿರಂತರವಾಗಿರಲಿದೆ. -ಪಿ.ಎಸ್‌. ಹಿರೇಮಠ, ಬಿಇಒ

Advertisement

ಹೊಸದಾರಿಯ ಅನ್ವೇಷಣೆ ಅನಿವಾರ್ಯ. ಈ ಕ್ರಮದಿಂದ ಶೇ. 75ರಷ್ಟು ವಿದ್ಯಾರ್ಥಿಗಳನ್ನು ಈಗಾಗಲೆ ನಾವು ತಲುಪಿದ್ದೇವೆ. ಇದರಲ್ಲಿ ಪಾಲಕರ ಸಹಕಾರ ನೆನೆಯುತ್ತೇವೆ. ಈ ಪ್ರಯತ್ನದಲ್ಲಿ ಸಿಆರ್‌ಪಿ ಭಾಸ್ಕರ್‌ ಮಾರ್ಗದರ್ಶನಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. -ಜನಾರ್ದನ ಹೆಗಡೆ, ನಂದಿಗದ್ದೆ ಮುಖ್ಯಶಿಕ್ಷಕರು

ಮಕ್ಕಳು ಉತ್ಸಾಹದಿಂದ ವಾಟ್ಸ್‌ಆ್ಯಪ್‌ ವೀಕ್ಷಿಸಿ ಕಲಿಕೆಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ಹಾಗೂ  ಶಿಕ್ಷಕರ ನಡುವಿನ ಸಹಸಂಬಂಧಕ್ಕೆ ಈ ಕಾಲದಲ್ಲಿ ಇದು ಅತ್ಯುತ್ತಮ ಹಾಗೂ ಅನಿವಾರ್ಯ ಕೂಡಾ. -ವಿದ್ಯಾ ಮಾಟಗೇಕರ್‌, ವಿದ್ಯಾರ್ಥಿ ಪಾಲಕರು ಹೆಣಕೊಳ

Advertisement

Udayavani is now on Telegram. Click here to join our channel and stay updated with the latest news.

Next