Advertisement

ವಾಟ್ಸ್‌ಆ್ಯಪ್‌ ಬಳಕೆದಾರರ ವಾಣಿಜ್ಯ ಬಳಕೆ ದತ್ತಾಂಶ ಬಳಕೆ

09:21 PM Jan 07, 2021 | Team Udayavani |

ಹೊಸದಿಲ್ಲಿ: ತನ್ನ ಎನ್‌ಕ್ರಿಪ್ಟೆಡ್‌ ಚ್ಯಾಟ್‌ ಪ್ಲಾಟ್‌ಪಾರ್ಮ್ ವಾಟ್ಸ್‌ಆ್ಯಪ್‌ನಲ್ಲಿ ಬಳಕೆದಾರರ ಕಮರ್ಶಿಯಲ್‌ ಯೂಸರ್‌ ಡಾಟಾಕ್ಕೆ ಆ್ಯಕ್ಸೆಸ್‌ ಗಳಿಸಲು ಫೇಸ್‌ಬುಕ್‌ ನಿರ್ಧರಿಸಿದೆ. ಇದು ಇನ್‌ಸ್ಟಾಗ್ರಾಂ ಸಹಿತ ಇದೇ ಗುಂಪಿನ ಇತರ ಸಾಮಾಜಿಕ ವೇದಿಕೆಗಳಲ್ಲಿ ಜಾಹೀರಾತುದಾರರು ವ್ಯಕ್ತಿ ನಿರ್ದಿಷ್ಟ ಮತ್ತು ಹೆಚ್ಚು ಪ್ರಸ್ತುತ ಜಾಹೀರಾತುದಾರರ ಮೂಲಕ ಆಯಾ ಬಳಕೆದಾರರನ್ನು ತಲುಪಲು ಸಾಧ್ಯ ಮಾಡಿಕೊಡಲಿದೆ ಎಂದು ತಂತ್ರಜ್ಞಾನ ವಿಶ್ಲೇಷಕರು ಹೇಳಿದ್ದಾರೆ.

Advertisement

ಸದ್ಯ ವಾಟ್ಸ್‌ಆ್ಯಪ್‌ನಲ್ಲಿ ಜಾಹೀರಾತುಗಳಿಗೆ ಅವಕಾಶ ಇಲ್ಲ. ಆದರೆ ವಾಟ್ಸ್‌ಆ್ಯಪ್‌ ಬಳಕೆದಾರರ ಯೂಸರ್‌ ಚ್ಯಾಟ್‌ಗಳನ್ನು ಪಡೆಯುವುದಿಲ್ಲ, ಬದಲಾಗಿ ಲೊಕೇಶನ್‌, ಇಂಟರ್‌ಪರ್ಸನಲ್‌ ಸಂಪರ್ಕಗಳು, ಬಳಕೆದಾರ ಕ್ಲಿಕ್ಕಿಸುವ ಸೇವೆಗಳು ಮತ್ತು ಉತ್ಪನ್ನಗಳ ಥರ್ಡ್‌ ಪಾರ್ಟಿ ಲಿಂಕ್‌ಗಳ ಮಾಹಿತಿ ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next