ನವದೆಹಲಿ:ಈಗಾಗಲೇ ಜಗತ್ತಿನಾದ್ಯಂತ ಜನಪ್ರಿಯಗೊಂಡಿರುವ ವಾಟ್ಸಪ್ ಇದೀಗ ತನ್ನ ಬಳಕೆದಾರರಿಗೆ ಕೊನೆಗೂ ಗ್ರೂಫ್ ವಿಡಿಯೋ ಹಾಗೂ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಪರಿಚಯಿಸಿದೆ.
ನೂತನ ಮೆಸೇಜಿಂಗ್ ವಾಟ್ಸ್ ಆ್ಯಪ್ ಫೀಚರ್ ಜಗತ್ತಿನಾದ್ಯಂತ ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರು ವಿಡಿಯೋ ಹಾಗೂ ಕಾಲಿಂಗ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ವಾಟ್ಸ್ ಆ್ಯಪ್ ಗ್ರೂಫ್ ಕಾಲಿಂಗ್ ಫೀಚರ್ ಮೂಲಕ ಏಕಕಾಲದಲ್ಲಿ ನಾಲ್ವರಿಗೆ ಕರೆಯನ್ನು ಮಾಡಬಹುದಾಗಿದೆ. ವಾಟ್ಸ್ ಆ್ಯಪ್ 2016ರಿಂದ ವಿಡಿಯೋ ಕಾಲಿಂಗ್ ಅನ್ನು ಪರಿಚಯಿಸಿತ್ತು. ಆದರೆ ಅದು ಕೇವಲ ಇಬ್ಬರಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ವಾಟ್ಸಪ್ ಆ್ಯಪ್ ಗ್ರೂಫ್ ವಿಡಿಯೋ ಕಾಲಿಂಗ್ ಗೆ ಅವಕಾಶ ಕಲ್ಪಿಸಿದೆ. ಅದು ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಆ್ಯಪ್ ಮೂಲಕ. ಇದರ ಮೂಲಕ ನಾಲ್ವರಿಗೆ ಏಕಕಾಲದಲ್ಲಿ ಕರೆ ಮಾಡುವ ಅವಕಾಶ ಇದೆ ಎಂದು ಕಂಪನಿ ತಿಳಿಸಿದೆ.
ಗ್ರೂಪ್ ವಿಡಿಯೋ ಕಾಲಿಂಗ್ ಕರೆ ಮಾಡೋದು ಹೇಗೆ?
ನಿಮ್ಮ ಸಂಪರ್ಕದ ಒಬ್ಬರಿಗೆ ವಿಡಿಯೋ ಅಥವಾ ವಾಯ್ಸ್ ಕರೆ ಮಾಡಿ, ಬಳಿಕ ಸ್ಕ್ರೀನ್ ನ ಬಲ ತುದಿಯಲ್ಲಿ ಮತ್ತೊಂದು ಆ್ಯಡ್ (ಪ್ಲಸ್) ಬಟನ್ ಕಾಣಿಸಿಕೊಳ್ಳಲಿದೆ. ಇದರಿಂದಾಗಿ ಸಂಪರ್ಕದ ಪಟ್ಟಿಯಲ್ಲಿರುವ ಇತರ ಸ್ನೇಹಿತರನ್ನು ವಿಡಿಯೋ ಕರೆಗೆ ಆಹ್ವಾನಿಸಬಹುದಾಗಿದೆ. ಇದರಲ್ಲಿ ಒಂದು ಬಾರಿ ಕರೆ ಸಂಪರ್ಕ ಸಾಧಿಸಿದ ಬಳಿಕ ಸ್ಕ್ರೀನ್ ನಲ್ಲಿ ಆ್ಯಡ್ ಬಟನ್ ಕಾಣಿಸಿಕೊಳ್ಳಲಿದೆ. ಒಂದು ವೇಳೆ ಮೂರನೇ ಬಳಕೆದಾರ ಕರೆಯನ್ನು ಸ್ವೀಕರಿಸಿದರೆ, ಇಬ್ಬರ ಹೆಸರನ್ನು ಪ್ರತ್ಯೇಕವಾಗಿ ತೋರಿಸುತ್ತದೆ. ಹೀಗೆ ನೀವು ನಾಲ್ವರನ್ನು ಏಕಕಾಲದಲ್ಲಿ ವಿಡಿಯೋ ಅಥವಾ ವಾಯ್ಸ್ ಕರೆ ಮಾಡಿ ಮಾತನಾಡಬಹುದಾಗಿದೆ.