Advertisement

ವಾಟ್ಸಾಪ್‌ನಲ್ಲಿ ಹೋದ ಮಾನ, ಪೋಸ್ಟ್‌ ಮಾಡಿದರೂ ಬಾರದು…

11:24 AM May 28, 2019 | keerthan |

“ನಮ್ಮ ಶಾಲೆ’ ಎನ್ನುವ ಸದಭಿರುಚಿಯ ಗ್ರೂಪು ನಮು. “ನಾವಾಯ್ತು, ನಮ್‌ ಶಾಲೆ ಆಯ್ತು, ನಮ್ಮ ಶಿಕ್ಷಣವಾಯ್ತು’ ಎನ್ನುವ ಅಪರೂಪದ ಶಿಸ್ತೊಂದು ಇಲ್ಲಿದೆ.

Advertisement

ಶಾಲೆಯ ಒಂದೊಂದು ವಿಚಾರವನ್ನೂ ಪಾಠದಂತೆ ಕೇಳುವ ಸದಸ್ಯರೂ ಇಲ್ಲಿದ್ದಾರೆ. ಹೀಗೆ ತಣ್ಣಗಿದ್ದ ಗ್ರೂಪ್‌ನಲ್ಲಿ ಒಂದು ಪುಟ್ಟ ಸುನಾಮಿ ಎದ್ದಿದ್ದು, ಗೊತ್ತೇ ಆಗಿರಲಿಲ್ಲ. ಒಮ್ಮೆ ನನ್ನ ಸ್ನೇಹಿತನೊಬ್ಬ ಯಾವುದೋ ಕೆಟ್ಟ ವಿಷಯವನ್ನು ಗ್ರೂಪ್‌ಗೆ ಹಾಕಿಬಿಟ್ಟ.

ಎಲ್ಲರ ಮನದಲ್ಲೂ ಕಿಡಿ ಹೊತ್ತಿತು. ಹಾಗೆ ಪೋಸ್ಟ್‌ ಮಾಡಿದ ವ್ಯಕ್ತಿಯನ್ನು ತಕ್ಷಣವೇಗ್ರೂಪ್‌ನಿಂದ ಹೊರ ಹಾಕುವಂತೆ ಒತ್ತಡವೂ ಹೆಚ್ಚಾಯಿತು. ಆದರೆ,  ದುಡುಕಿದರೆ ಫ‌ಲವೇನು? ಅವನು ಒಳ್ಳೆಯ ಸ್ನೇಹಿತ, ಅವನು ಅಂಥ ತಪ್ಪು ಮಾಡಲಾರ ಎನ್ನುವ ನಂಬಿಕೆ ನನ್ನೊಳಗೆ ಇತ್ತಾದರೂ, ಅದನ್ನು ತಕ್ಷಣವೇ ಪ್ರಕಟಿಸಲು ಹೋಗಲಿಲ್ಲ. ಕೊನೆಗೆ ನಾನೇ ಆ ಗೆಳೆಯನಿಗೆ ಫೋನು ಮಾಡಿದೆ. “ಏನಪ್ಪಾ? ಯಾಕೆ ಹೀಗೆ ಮಾಡಿºಟ್ಟೆ?’ ಅಂತ ಕೇಳಿದೆ. “ಇಲ್ಲ ಸರ್‌, ಅದು ನಾನು ಮಾಡಿದ ತಪ್ಪಲ್ಲ. ನಮ್ಮ ನೆಂಟರ ಹುಡುಗನಿಗೆ ಮೊಬೈಲ್‌ ಸಿಕ್ಕಿ, ಹಾಗೆಲ್ಲ ಆಗಿ ಹೋಯ್ತು’ ಎಂದ. ಅವನ ದನಿಯಲ್ಲಿ ಮುಗ್ಧ ಅಸಹಾಯಕತೆ ಇತ್ತು. ಆಗಲೇ ನನಗೆ ಸಮಾಧಾನ.

ಗೆಳೆಯ, ಕ್ಷಮೆ ಕೋರಿ ಪೋಸ್ಟ್‌ ಹಾಕಿದ. ಆಗ ಎಲ್ಲರೂ ಸುಮ್ಮನಾದರು. ಒಂದು ಸಣ್ಣ ತಪ್ಪು, ಎಷ್ಟೆಲ್ಲ ಮನೋಘರ್ಷಣೆಗೆ ಕಾರಣ ಆಗುತ್ತೆ ಅನ್ನೋದಕ್ಕೆ ಇದು ನಿದರ್ಶನ. ಇದರಿಂದ ಎಲ್ಲರೂ ಪಾಠ ಕಲಿತೆವು!

ವೆಂಕಟೇಶ ಚಾಗಿ, ಲಿಂಗಸಗೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next