Advertisement

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

09:42 PM May 01, 2024 | Team Udayavani |

ನವದೆಹಲಿ: ಶೀಘ್ರದಲ್ಲಿಯೇ ಚಾಟ್‌ ನಿಯಮ ಉಲ್ಲಂಘಿಸಿದ ವಾಟ್ಸ್‌ಆ್ಯಪ್‌ ಬಳಕೆದಾರರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಇಂಥ ಹೊಸ ನಿಯಮವನ್ನು ಶೀಘ್ರವೇ ಜಾರಿಗೊಳಿಸಲಾಗುತ್ತದೆ.

Advertisement

ಜಾರಿಯಾಗಲಿರುವ ಹೊಸ ನಿಯಮದ ಅನ್ವಯ ನಿಯಮ ಉಲ್ಲಂಘಿಸಿದ ಬಳಕೆದಾರರಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗುತ್ತದೆ. ಈ ಅವಧಿಯಲ್ಲಿ ಬಳಕೆದಾರರು ನಿರ್ದಿಷ್ಟ ಅವಧಿಯವರೆಗೆ ಹೊಸ ಚಾಟ್‌ಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ, ಅಸ್ತಿತ್ವದಲ್ಲಿರುವ ಚಾಟ್‌ಗಳು ಮತ್ತು ಗ್ರೂಪ್‌ಗ್ಳಲ್ಲಿ ಸಂದೇಶಗಳನ್ನು ಸ್ವೀಕರಿಸುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಸೇವೆ ಮುಂದುವರಿಯಲಿದೆ. ಈ ಮೂಲಕ ಅಗತ್ಯ ಸಂವಹನವು ಮುಂದುವರಿಯಲಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಈ ಹೊಸ ನಿರ್ಬಂಧ ವೈಶಿಷ್ಟವು ಜಾರಿಗೆ ಬರಲಿದೆ.

ಇದನ್ನೂ ಓದಿ: LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Advertisement

Udayavani is now on Telegram. Click here to join our channel and stay updated with the latest news.

Next