Advertisement

ವಾಟ್ಸ್‌ಆ್ಯಪ್‌ ಗ್ರೂಪ್‌ ರಿಕ್ವೆಸ್ಟ್‌ ನಿಯಂತ್ರಣ

08:09 PM Mar 01, 2020 | Sriram |

ವಾಟ್ಸ್‌ ಆ್ಯಪ್‌ ತಂದೊಡ್ಡುವ ಕಿರಿಕಿರಿಗಳಲ್ಲಿ ಮುಖ್ಯವಾದುದೆಂದರೆ ಪರಿಚಯಸ್ಥರು, ನೆಂಟರಿಷ್ಟರು ಸಂಬಂಧವೇ ಇಲ್ಲದ ಗ್ರೂಪುಗಳಿಗೆ ಬಳಕೆದಾರರನ್ನು ಸೇರಿಸುವುದು. ಅದರಲ್ಲಿ ಬರುವ ಅಸಂಬಂದ್ಧ ಸಂದೇಶಗಳ ನೋಟಿಫಿಕೇಷನ್ನುಗಳನ್ನು ಎದುರಿಸುವುದು. ಈ ಕಿರಿಕಿರಿಗೆ ತಡೆ ಹಾಕಲು ವಾಟ್ಸ್‌ ಆ್ಯಪ್‌ನಲ್ಲಿಯೇ ಒಂದು ಸವಲತ್ತಿದೆ. ಅದಕ್ಕಾಗಿ ಪ್ರೈವೆಸಿ ಸೆಟ್ಟಿಂಗ್ಸ್‌ಗೆ ಬಳಕೆದಾರ ಹೋಗಬೇಕು. ಅದನ್ನು ಬಳಸಿ ಯಾರು ಯಾರು ತಮ್ಮನ್ನು ವಾಟ್ಸ್‌ ಆ್ಯಪ್‌ ಗ್ರೂಪುಗಳಿಗೆ ಆ್ಯಡ್‌ ಮಾಡಬಹುದು, ಯಾರು ಮಾಡಬಾರದು ಎಂಬುದನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ, ಈ ಆಯ್ಕೆಯನ್ನು ಆನ್‌ ಮಾಡುವುದರಿಂದ ಯಾರೇ ಆದರೂ ನಿಮ್ಮನ್ನು ವಾಟ್ಸ್‌ಆ್ಯಪ್‌ ಗ್ರೂಪಿಗೆ ಆ್ಯಡ್‌ ಮಾಡಿದರೆ, ನಿಮ್ಮ ಅನುಮತಿ ಕೋರಿ ಒಂದು ಸಂದೇಶ ಬರುತ್ತದೆ. ನಿಮಗೆ ಆ ವಾಟ್ಸ್‌ ಆ್ಯಪ್‌ ಗ್ರೂಪಿಗೆ ಸೇರುವ ಇಚ್ಛೆಯಿದ್ದರೆ “ಎಸ್‌’ ಎಂಬ ಆಯ್ಕೆ ಆರಿಸಿಕೊಳ್ಳಬಹುದು. ಇಷ್ಟವಿಲ್ಲದಿದ್ದರೆ “ಡಿನೈ’ ಅಥವಾ “ನೋ’ ಎಂಬರ್ಥದ ಬಟನ್‌ ಒತ್ತಬಹುದು. ಈ ಸವಲತ್ತು ಆಂಡ್ರಾಯ್ಡ ಹಾಗೂ ಐಪೋನು ಬಳಕೆದಾರರಿಬ್ಬರಿಗೂ ಲಭ್ಯವಿದೆ. ನಿಮಗೆ ಬೇಡವಾದವರು ನಿಮಗೆ ಗ್ರೂಪ್‌ ರಿಕ್ವೆಸ್ಟ್‌ ಕಳಿಸುವುದನ್ನು ತಡೆ ಹಿಡಿಯುವ ವಿಧಾನ ಇಲ್ಲಿದೆ-

Advertisement

– ವಾಟ್ಸ್‌ ಆ್ಯಪ್‌ ತೆರೆಯಿರಿ
– ಸೆಟ್ಟಿಂಗ್ಸ್‌ ಮೆನು ಕ್ಲಿಕ್‌ ಮಾಡಿ
– ಅಕೌಂಟ್‌ ಆಯ್ಕೆಯನ್ನು ಸೆಲೆಕ್ಟ್ ಮಾಡಿ
– ಪ್ರೈವೆಸಿ ಟ್ಯಾಬನ್ನು ಕ್ಲಿಕ್‌ ಮಾಡಿ
– ಈಗ ಕೆಳಗೆ ಸಾðಲ್‌ ಮಾಡಿ. ಗ್ರೂಪ್ಸ್‌ ಎಂಬ ಆಯ್ಕೆ ಕಾಣಿಸುತ್ತದೆ.
– ಅಲ್ಲಿ ನೀಡಲಾಗಿರುವ ಮೂರು ಆಯ್ಕೆಗಳಲ್ಲಿ “my contacts except’ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
– ಈಗ ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವ ವ್ಯಕ್ತಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಯಾರೆಲ್ಲಾ ನಿಮಗೆ ವಾಟ್ಸ್‌ ಆ್ಯಪ್‌ ಗ್ರೂಪ್‌ ರಿಕ್ವೆಸ್ಟ್‌ ಕಳಿಸುವುದು ಬೇಡ ಎಂದಿರುತ್ತದೆಯೋ ಅವರ ಹೆಸರ ಮೇಲೆ ಕ್ಲಿಕ್‌ ಮಾಡಿ ಸೆಲೆಕ್ಟ್ ಮಾಡುತ್ತಾ ಹೋದರಾಯಿತು.
– ಹೆಸರುಗಳನ್ನು ಆಯ್ಕೆ ಮಾಡಿದ ನಂತರ ಕೆಳಗೆ “ಡನ್‌’ ಬಟನ್‌ ಒತ್ತಿದರೆ ಈ ಪ್ರಕ್ರಿಯೆ ಮುಗಿಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next