Advertisement

ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ಬ್ಲಾಕ್ ? ಸಂಸ್ಥೆಗಳು ಹೇಳುವುದೇನು ?

09:21 AM May 26, 2021 | Team Udayavani |

ನವದೆಹಲಿ: ಗುರುವಾರದಿಂದ ನಿಮ್ಮ ಟ್ವಿಟರ್‌, ಫೇಸ್‌ ಬುಕ್‌ ಬ್ಲಾಕ್‌ ಆಗಲಿವೆಯೇ? ಕೇಂದ್ರ ಸರ್ಕಾರದ ನೂತನ ಐಟಿ ನಿಯಮಗಳನ್ನು ಜಾರಿ ಮಾಡಲು ಸಾಮಾಜಿಕ ಜಾಲತಾಣಗಳಿಗೆ ನೀಡಿರುವ ಗಡುವು ಬುಧವಾರ ಮುಗಿಯಲಿದ್ದು, ಗುರುವಾರದಿಂದ ಈ ಜಾಲತಾಣಗಳ ಕಥೆ ಏನಾಗಲಿದೆ ಎಂಬ ಕುತೂಹಲ ಮೂಡಿದೆ.

Advertisement

ಹೊಸ ನಿಯಮಗಳ ಜಾರಿಗೆ ಕಳೆದ ಫೆಬ್ರವರಿಯಲ್ಲೇ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೇ 25ರ ಗಡುವು ನೀಡಿತ್ತು. ಆದರೆ, ವಾಟ್ಸ್‌ಆ್ಯಪ್‌, ಫೇಸ್‌ ಬುಕ್‌, ಟ್ವಿಟರ್‌ ಸೇರಿದಂತೆ ಬಹುತೇಕ ತಾಣಗಳು ಈ ನಿಯಮಗಳನ್ನು ಅನುಷ್ಠಾನ ಮಾಡಿಲ್ಲ. ಟ್ವಿಟರ್‌ ಮಾದರಿಯ ಭಾರತದ ಆವೃತ್ತಿ “ಕೂ’ ಮಾತ್ರವೇ ಹೊಸ ಮಾರ್ಗಸೂಚಿಗಳನ್ನು ಪಾಲಿಸಿದೆ.

ಇದೇ ವೇಳೆ, ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್ ನಂಥ ಒಟಿಟಿ ಪ್ಲಾಟ್‌ಫಾರಂಗಳಿಗೂ “ದೂರು ಪರಿಹಾರ ಅಧಿಕಾರಿ” ಗಳನ್ನು ನೇಮಕ ಮಾಡುವಂತೆ ಸರ್ಕಾರ ಸೂಚಿಸಿದೆ. ವಿವಿಧ ಸಚಿವಾಲಯಗಳ ಪ್ರತಿ ನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ, ಒಟಿಟಿ ಕಂಟೆಂಟ್‌ಗಳ ಮೇಲೆ ನಿಯಂತ್ರಣ ಹೇರಬೇಕು ಎಂದೂ ಹೇಳಿದೆ.

ಆದರೆ,ಈ ಯಾವ ತಾಣಗಳೂ ಸರ್ಕಾರದ ನಿಯಮವನ್ನು ಪಾಲಿಸಿಲ್ಲ. ದೇಶದ ಕಾನೂನಿನ ಪ್ರಕಾರ, ಸರ್ಕಾರದ ಮಾರ್ಗಸೂಚಿ ಪಾಲಿಸದ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಅಂಥ ಜಾಲತಾಣಗಳನ್ನು ಬ್ಲಾಕ್‌ ಮಾಡಲು ಅವಕಾಶವಿದೆ.

ಪ್ರಕ್ರಿಯೆ ನಡೆಯುತ್ತಿದೆ: ಫೇಸ್ ಬುಕ್

Advertisement

ಭಾರತ ಸರ್ಕಾರದ ನಿಯಮಗಳನ್ನು ಮೇ 26ರ ಒಳಗಾಗಿ ಅನುಷ್ಠಾನಗೊಳಿಸಲು ಪ್ರಕ್ರಿಯೆಗಳು ನಡೆದಿವೆ ಎಂದು ಫೇಸ್‌ಬುಕ್‌ ಮಂಗಳವಾರ ತಿಳಿಸಿದೆ. ಕೆಲ ವಿಚಾರದ ಬಗ್ಗೆ ಸರ್ಕಾರದ ಜತೆಗೆ ಮಾತುಕತೆ ನಡೆಯುತ್ತಿವೆ ಎಂದೂ ಹೇಳಿದೆ.

ವಾಟ್ಸ್ ಆ್ಯಪ್ ಸ್ಪಷ್ಟನೆ:

ಖಾಸಗಿತನ ನೀತಿ ಒಪ್ಪದೇ ಇರುವ ಗ್ರಾಹಕರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂದು ವಾಟ್ಸ್‌ ಆ್ಯಪ್‌ ಸ್ಪಷ್ಟನೆ ನೀಡಿದೆ. ಅಂಥ ಗ್ರಾಹಕರ ವಾಟ್ಸ್‌ ಆ್ಯಪ್‌ ನ ಒಂದೊಂದೇ ಫೀಚರ್‌ಗಳನ್ನು ಹಿಂಪಡೆಯಲಾಗುತ್ತದೆ ಎಂಬ ಸುದ್ದಿ ಸುಳ್ಳು.ಅಂಥ ಯಾವುದೇ ಯೋಚನೆ ನಮಗಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next