ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಹೊಸತನಗಳು ಕಂಡುಬರುತ್ತದೆ. ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಹಲವು ಸಂಸ್ಥೆಗಳು ನೂತನ ಪ್ರಯೋಗಕ್ಕೆ ಮುಂದಾಗುತ್ತವೆ. ಇದರಲ್ಲಿ ಕೆಲವು ಯಶಸ್ಸು ಕಂಡರೇ, ಮತ್ತೆ ಕೆಲವು ಬಳಕೆದಾರರನ್ನು ಸೆಳೆಯಲು ವಿಫಲವಾಗುತ್ತದೆ. ಅದರಂತೆ ವಾಟ್ಸಾಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ, ಯೂಟ್ಯೂಬ್ ಮುಂತಾದವು ಕೆಲವು ಹೊಸ ಫೀಚರ್ ಗಳನ್ನು ಹೊರತಂದಿದೆ. ಅದರ ಒಂದು ಮುನ್ನೋಟ ಇಲ್ಲಿದೆ.
ವಾಟ್ಸಾಪ್ ಪ್ರತಿನಿತ್ಯ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿದೆ. ಈ ಹೊಸ ಫೀಚರ್ ಗಳು ಮೊದಲ ಬಾರಿಗೆ ಪರೀಕ್ಷಾರ್ಥವಾಗಿ ಬೇಟಾ ಆವೃತ್ತಿಗಳಲ್ಲಿ ಕಾಣಸಿಗುತ್ತದೆ. ನಂತರವಷ್ಟೇ ಸಾಮಾನ್ಯ ಬಳಕೆದಾರರಿಗೆ ಲಭ್ಯವಾಗುತ್ತದೆ. ವಾಟ್ಸಾಪ್ ಸಂಸ್ಥೆ ಬಗ್ಸ್ ಅಥವಾ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಮೊದಲ ಬಾರಿಗೆ ಬೀಟಾ/ಬೇಟಾ ಆವೃತ್ತಿಯಲ್ಲಿ ಸರಿಪಡಿಸುತ್ತದೆ. ಇಲ್ಲಿನ ಫಲಿತಾಂಶದ ಆಧಾರದ ಮೇಲೆ ಬಿಲಿಯನ್ ಗಟ್ಟಲೇ ಸಕ್ರೀಯ ಬಳಕೆದಾರರಿಗೆ ತನ್ನ ಸೇವೆಯನ್ನು ವಿಸ್ತರಿಸುತ್ತದೆ.
ಹಾಗಾದರೇ ವಾಟ್ಸಾಪ್ ಬೇಟಾ ಆವೃತ್ತಿಯನ್ನು ಬಳಸುವುದು ಹೇಗೆ?
ಸಾಮಾನ್ಯವಾಗಿ ಎರಡು ಮಾದರಿಯಲ್ಲಿ ಸೈನ್ ಅಪ್ ಆಗಬಹುದು. ಮೊದಲನೆಯದು ಸ್ಮಾರ್ಟ್ ಫೋನ್ ಗಳ ಮೂಲಕ, ಮತ್ತೊಂದು ಕಂಪ್ಯೂಟರ್ ವೆಬ್ ಬ್ರೌಸರ್ ಮೂಲಕ, ಎರಡು ಡಿವೈಸ್ ಗಳಲ್ಲೂ ಒಂದೇ ಜಿಮೇಲ್ ಅಕೌಂಟ್ ಲಾಗಿನ್ ಆಗಿರುವುದು ಅವಶ್ಯ.
ನಂತರ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ವಾಟ್ಸಾಪ್ ಆಯ್ಕೆಯಲ್ಲಿ ‘Become A beta tester’ ವಿಭಾಗವನ್ನು ಕ್ಲಿಕ್ ಮಾಡಿದಾಕ್ಷಣ ‘Im in’ ಮತ್ತು ‘join’ ಕಾಣಸಿಗುತ್ತದೆ. ಇದನ್ನು ಒತ್ತಿದಾಕ್ಷಣ ವಾಟ್ಸಾಪ್ ಬೇಟಾ ಆವೃತ್ತಿಗೆ ಜಾಯಿನ್ ಆಗಬಹುದು.
ವೆಬ್ ಬ್ರೌಸರ್ ಮೂಲಕ ಜಾಯಿನ್ ಆಗುವುದಾದರೇ,
https://play.google.com/apps/testing/com.whatsapp ಈ ಲಿಂಕ್ ಬಳಸಿ. ಆ ಮೂಲಕ ‘Become A beta tester’ ಕ್ಲಿಕ್ ಮಾಡಿ ವಾಟ್ಸಾಪ್ ಬೇಟಾ ಆವೃತ್ತಿಗೆ ಲಾಗಿನ್ ಆಗಬಹುದು.
ಕೆಲವೊಮ್ಮೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬೀಟಾ ಆವೃತ್ತಿ ಕಾಣಸಿಗುವುದಿಲ್ಲ. ಕಾರಣವೆಂದರೇ ಬೀಟಾ ಆವೃತ್ತಿ ಬಳಸಲು ಇಂತಿಷ್ಟೇ ಜನರು ಎಂದು ನಿಗದಿಪಡಿಸಲಾಗಿದ್ದು, ಈ ಸದಸ್ಯರು ಬೀಟಾ ಆವೃತ್ತಿಯಿಂದ ಹೊರಬಂದಾಕ್ಷಣ ಹೊಸ ಸದಸ್ಯರು ಜಾಯಿನ್ ಆಗಬಹುದು.
ಇನ್ ಸ್ಟಾಗ್ರಾಂ- ಫೇಸ್ ಬುಕ್ ಮೆಸೆಂಜರ್ ಕ್ರಾಸ್ ಫ್ಲ್ಯಾಟ್ ಫಾರ್ಮ್ ಚಾಟ್ ಫೀಚರ್ ಬಳಸುವುದು ಹೇಗೆ ?
ಕೆಲದಿನಗಳ ಹಿಂದಷ್ಟೇ ಫೇಸ್ ಬುಕ್ ತನ್ನ ಇನ್ ಸ್ಟಾಗ್ರಾಂ ಮತ್ತು ಮೆಸೆಂಜರ್ ನಲ್ಲಿ ಕ್ರಾಸ್ ಮೆಸೆಂಜಿಂಗ್ ಫೀಚರ್ ಪರಿಚಯಿಸಿತ್ತು. ಇದು ಐಓಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಆದಾಗ್ಯೂ ಹಲವರು ಈ ಹೊಸ ಫೀಚರ್ ನತ್ತ ಹೆಚ್ಚಿನ ಗಮನಹರಿಸಿಲ್ಲ. ಹೀಗಾಗಿ ಈ ಫೀಚರ್ ಅನ್ನು ಹೇಗೆ ಆ್ಯಕ್ಟಿವೇಟ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
ಇನ್ ಸ್ಟಾಗ್ರಾಂ ಆ್ಯಪ್: ಸೆಟ್ಟಿಂಗ್ಸ್ ನಲ್ಲಿ ಪ್ರೈವೆಸಿ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ‘ಮೆಸೇಜ್’ ಆಯ್ಕೆಯನ್ನು ಒತ್ತಿ, ಇಲ್ಲಿ ಮತ್ತೆ ಮೂರು ಆಯ್ಕೆಗಳನ್ನು ನೀಡಲಾಗಿದ್ದು, ನಿಮ್ಮ ಅಗತ್ಯಗಳಿಗನುಗುಣವಾಗಿ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಮೆಸೆಂಜರ್ ಆ್ಯಪ್ ನಲ್ಲೂ ಇದೇ ಮಾದರಿಯ ಕ್ರಮವನ್ನು ಅನುಸರಿಸಿ ಸೆಟ್ಟಿಂಗ್ಸ್ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು.
ವಾಟ್ಸಾಪ್ ಸ್ಟೋರೇಜ್ ಸಮಸ್ಯೆಯನ್ನು ಸರಿಪಡಿಸುವುದು ಹೇಗೆ ?
ವಾಟ್ಸಾಪ್ ನಲ್ಲಿ ಪ್ರತನಿತ್ಯ ಪೋಟೋ, ವಿಡಿಯೋ ಸೇರಿದಂತೆ ಅನೇಕ ಸಂದೇಶಗಳು ಹರಿದುಬರುತ್ತದೆ. ಇದರಿಂದ ಸ್ಮಾರ್ಟ್ ಫೋನ್ ಸ್ಟೋರೇಜ್ ಕೂಡ ಭರ್ತಿಯಾಗುವುದು ಖಚಿತ. ಕೆಲವೊಮ್ಮೆ ಅವಶ್ಯಕವಲ್ಲದ ಫಾರ್ವರ್ಡ್ ಪೋಟೋಸ್ ಹಾಗೂ ವಿಡಿಯೋಗಳು ಒಮ್ಮೆಲೇ ಬಂದಾಗ, ಒಂದೊಂದಾಗಿ ಡಿಲೀಟ್ ಮಾಡಿಕೊಂಡಿರಲು ಸಾಧ್ಯವಿಲ್ಲ.
ಹೀಗಾಗಿ ವಾಟ್ಸಾಪ್ ನಲ್ಲಿ ಸ್ಟೋರೇಜ್ ಸಮಸ್ಯೆ ಕಂಡುಬರುತ್ತಿದ್ದರೇ ಆ್ಯಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ಈ ಕ್ರಮ ಅನುಸರಿಸಿ.
ವಾಟ್ಸಾಪ್ ಸೆಟ್ಟಿಂಗ್ಸ್ ಗೆ ತೆರಳಿ ಅಲ್ಲಿ ಕಾಣುವ ‘ಡೇಟಾ ಅಂಡ್ ಸ್ಟೋರೇಜ್ ಯೂಸೇಜ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ‘ಸ್ಟೋರೇಜ್ ಯೂಸೇಜ್’ ಎಂಬ ಫೀಚರ್ ಕಾಣಸಿಗುತ್ತದೆ. ಇದನ್ನು ಒತ್ತಿದಾಕ್ಷಣ ನಿಮ್ಮ ವಾಟ್ಸಾಪ್ ನಲ್ಲಿ ಅತೀ ಹೆಚ್ಚು ಸ್ಟೋರೇಜ್ ಬಳಸುತ್ತಿರುವ, ಗ್ರೂಪ್ ಅಥವಾ ಕಾಂಟ್ಯಾಕ್ಟ್ ಯಾವುದು ಎಂಬುದನ್ನು ತೋರ್ಪಡಿಸುತ್ತದೆ.
ಇಲ್ಲಿ ಫೋಟೋ, ವಿಡಿಯೋ, ಜಿಫ್ ಫೈಲ್ ಸೇರಿದಂತೆ ಹಲವು ಆಯ್ಕೆಗಳಿದ್ದು ‘ಮ್ಯಾನೇಜ್ ಸ್ಪೇಸ್’ ಮೂಲಕ ಡೇಟಾ ಕ್ಲಿಯರ್ ಮಾಡಬಹುದಾಗಿದೆ.
ಏರ್ ಟೆಲ್ ಬಳಕೆದಾರರಿಗೆ ಯೂಟ್ಯೂಬ್ ಪ್ರೀಮಿಯಂ 3 ತಿಂಗಳು ಉಚಿತ:
ನೀವು ಯೂಟ್ಯೂಬ್ ನ ಆ್ಯಡ್ ಫ್ರೀ ಸ್ಟ್ರೀಮಿಂಗ್ ಅನ್ನು ಆನಂದಿಸದಿದ್ದರೇ ಏರ್ ಟೆಲ್ ನಿಮಗೊಂದು ಸುವರ್ಣಾವಕಾಶ ನೀಡುತ್ತಿದೆ. ಆ ಮೂಲಕ 3 ತಿಂಗಳು ಉಚಿವಾಗಿ ಜಾಹೀರಾತುಗಳಿಲ್ಲದೆ ಯೂಟ್ಯೂಬ್ ಸೇವೆ ಪಡೆಯಬಹುದು.
‘ಏರ್ ಟೆಲ್ ಥ್ಯಾಂಕ್ಸ್ ರಿವಾರ್ಡ್ಸ್’ ಮೂಲಕ ಈ ಆಫರ್ ನೀಡಲಾಗುತ್ತಿದ್ದು, ಏರ್ ಟೆಲ್ ಬಳಕೆದಾರರು ಥ್ಯಾಂಕ್ಸ್ ಅಪ್ಲಿಕೇಶನ್ ಗೆ ತೆರಳಿ ರಿವಾರ್ಡ್ ಅನ್ನು ಸಕ್ರಿಯಗೊಳಿಸಬಹುದಾಗಿದೆ.