Advertisement

ಸದ್ಯದಲ್ಲೇ ವಾಟ್ಸ್‌ಆ್ಯಪ್‌ಗೆ ಕಮ್ಯುನಿಟಿ ಫೀಚರ್‌; ಹಲವು ಗ್ರೂಪ್‌ ಗಳಿಗೆ ಒಂದೇ ವೇದಿಕೆ

07:30 PM Dec 28, 2021 | Team Udayavani |

ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್‌ ಗಳನ್ನು ಮಾಡಿಕೊಳ್ಳುವ ಸೌಲಭ್ಯ ನಿಮಗೆಲ್ಲ ಗೊತ್ತೇ ಇದೆ. ಆದರೆ ಇನ್ನು ಕೆಲವು ದಿನಗಳಲ್ಲಿ ಗ್ರೂಪ್‌ ಗೂ ಮೇಲ್ಪಟ್ಟು “ಕಮ್ಯುನಿಟಿ’ ತಯಾರಿಸಿಕೊಳ್ಳುವ ಸೌಲಭ್ಯ ಆರಂಭವಾಗಲಿದೆ.

Advertisement

ಈಗ ಗ್ರೂಪ್‌ ಗಳಿಗೆ ಮೆಂಬರ್‌ಗಳನ್ನು ಸೇರಿಸುವಂತೆ, ವಿವಿಧ ಗ್ರೂಪ್‌ ಗಳನ್ನು ಸೇರಿಸಿ ಒಂದು ಕಮ್ಯುನಿಟಿ ಮಾಡಬಹುದು.

ಒಂದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವು ಗುಂಪುಗಳಿದ್ದರೆ, ಅವುಗಳನ್ನು ಒಂದೇ ವೇದಿಕೆಗೆ ತಂದು, ಚರ್ಚೆಗೆ ಅವಕಾಶ ಮಾಡಿಕೊಡಬಹುದು.

ಗ್ರೂಪಿನ ಅಡ್ಮಿನ್‌ಗೆ ಹೆಚ್ಚಿನ ನಿಯಂತ್ರಣ ಸಾಮರ್ಥ್ಯವಿರುವಂತೆ, ಕಮ್ಯುನಿಟಿ ಅಡ್ಮಿನ್‌ಗೆ ಗ್ರೂಪ್‌ ಅಡ್ಮಿನ್‌ಗಿಂತ ಹೆಚ್ಚಿನ ನಿಯಂತ್ರಣ ಸಾಮರ್ಥ್ಯ ಕೊಡಲಾಗುವುದು.

ಇದನ್ನೂ ಓದಿ:ಗ್ರಾಹಕರನ್ನು ಆಕರ್ಷಿಸುತ್ತಿವೆ ಗಾಜಿನ ಭರಣಿಯ ಕಲರ್ ಕಲರ್ ಮೀನುಗಳು

Advertisement

ಈ ಫೀಚರ್‌ ಅನ್ನು ಐಒಎಸ್‌ನ ಬೆಟಾ ವರ್ಷನ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವುದಾಗಿ WABetaInfo ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next