ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲೊಂದಾದ ವಾಟ್ಸಾಪ್ ಇದೀಗ ನೂತನ ಫೀಚರ್ ಒಂದನ್ನು ಪರಿಚಯಿಸಿದೆ. ವರದಿಗಳ ಪ್ರಕಾರ ಕಳೆದ ಎರಡು ವರುಷಗಳಿಂದ ಈ ಫೀಚರ್ ನ ಡೆವಲಪ್ ನಡೆಯುತ್ತಿದ್ದು ಇದೀಗ ಅಧಿಕೃತವಾಗಿ ಬೇಟಾ ವರ್ಷನ್ ನಲ್ಲಿ ಲಭ್ಯವಿದೆ.
ಹೊಸ ಫೀಚರ್ ಅನ್ನು ‘ವೆಕೇಷನ್ ಮೋಡ್‘ ಎಂದು ಕರೆಯಲಾಗಿದ್ದು, ಈಗಾಗಲೇ ಆರ್ಕೈವ್ ಆಗಿರುವ ಚಾಟ್ ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಎಂಬರ್ಥವನ್ನು ನೀಡುತ್ತದೆ.
ಪ್ರಸ್ತುತ ಬಳಕೆದಾರರು ತಮಗಿಷ್ಟವಿಲ್ಲದ ಚಾಟ್ ಗಳನ್ನು ಆರ್ಕೈವ್ ಮಾಡುವ ಅವಕಾಶವಿದೆ. ಅದಾಗ್ಯೂ ಆರ್ಕೈವ್ ಚಾಟ್ ನಿಂದ ಹೊಸ ಮೆಸೇಜ್ ಬಂದಾಕ್ಷಣ ಆ ಚಾಟ್ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಇದರಿಂದ ಹಲವು ಬಳಕೆದಾರರು ಕಿರಿಕಿರಿ ಅನುಭವಿಸುತ್ತಿದ್ದರು.
ಇದನ್ನು ತಡಡೆಗಟ್ಟಲು ವೆಕೇಷನ್ ಮೋಡ್ ಫೀಚರ್ ತರಲಾಗಿದ್ದು, ಬಳಕೆದಾರರು ಈ ಆಯ್ಕೆಯ ಮೂಲಕ ಆರ್ಕೈವ್ ಚಾಟ್ ಗಳನ್ನು ನಿರ್ದಿಷ್ಟ ಕಾಲಮಾನಕ್ಕೆ ಹೈಡ್ ಮಾಡಬಹುದು. ಅಂದರೇ ಯಾವುದೇ ಚಾಟ್ ಗಳನ್ನು ಆರ್ಕೈವ್ ಮಾಡಲು ಮುಂದಾದರೆ ಅಲ್ಲಿ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತದೆ.
- ನೋಟಿಫೈ ನ್ಯೂ ಮೆಸೇಜಸ್: ಈ ಆಯ್ಕೆ ಚಾಟ್ ಗಳನ್ನು ಆರ್ಕೈವ್ ಮಾಡಿದ್ದರೂ ಹೊಸ ಮೆಸೇಜ್ ಬಂದಾಕ್ಷಣ ಚಾಟ್ ಗಳನ್ನು ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ.
- ಆಟೋ ಹೈಡ್ ಇನ್ ಆ್ಯಕ್ಟಿವ್ ಚಾಟ್ಸ್: ಈ ಆಯ್ಕೆಯು 6 ತಿಂಗಳ ಕಾಲ ನಿಮ್ಮ ಆರ್ಕೈವ್ ಚಾಟ್ ಗಳನ್ನು ಮ್ಯೂಟ್ ಮಾಡುತ್ತದೆ. ಯಾವುದೇ ಹೊಸ ಮೆಸೇಜ್ ಬಂದರೂ ಕೂಡ ಗೋಚರಿಸುವುದಿಲ್ಲ.