Advertisement

ಸಾಂವಿಧಾನಿಕ ಪೀಠಕ್ಕೆ ವಾಟ್ಸ್‌ಆ್ಯಪ್‌ ಪ್ರಕರಣ

03:45 AM Apr 06, 2017 | Team Udayavani |

ನವದೆಹಲಿ: ವಾಟ್ಸ್‌ಆ್ಯಪ್‌ನ ಗೋಪ್ಯತಾ ನೀತಿ ಕುರಿತ ಪ್ರಕರಣವನ್ನು ಸುಪ್ರೀಂಕೋರ್ಟ್‌ ಬುಧವಾರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ವಾಟ್ಸ್‌ಆ್ಯಪ್‌ನ ಗೋಪ್ಯತಾ ನೀತಿ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರಕ್ಕೆ, ಜೊತೆಗೆ ಸಾರ್ವಜನಿಕ ವಿಚಾರವಾದ್ದರಿಂದ ಸಂವಿಧಾನಕ್ಕೆ ಸಂಬಂಧ ಪಟ್ಟಿದೆ. ಆದ್ದರಿಂದ ಅದನ್ನು ಐವರು ನ್ಯಾಯಾಧೀಶರಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್‌ ಮತ್ತು ನ್ಯಾ.ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಹೇಳಿದೆ.  

Advertisement

ವಾಟ್ಸ್‌ಆ್ಯಪ್‌ ತನ್ನಲ್ಲಿನ ಗ್ರಾಹಕರ ವಿವರಗಳನ್ನು ಫೇಸ್‌ಬುಕ್‌ಗೆ ಹಂಚಿಕೊಂಡಿದ್ದರಲ್ಲಿ ವ್ಯಕ್ತಿಯ ಖಾಸಗಿತ್ವ ಉಲ್ಲಂಘನೆಯಾಗಿದೆ. ಜೊತೆಗೆ ಇದು ಸಂವಿಧಾನದಲ್ಲಿ ನೀಡಿದ ವಾಕ್‌ಸ್ವಾತಂತ್ರ್ಯದ ಉಲ್ಲಂಘಟ ನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ವಾಟ್ಸ್‌ಆ್ಯಪ್‌ ಗ್ರಾಹಕರ ವಿವರಗಳನ್ನು ವಾಣಿಜ್ಯಿಕ ಉದ್ದೇಶಕ್ಕಾಗಿ ಫೇಸ್‌ಬುಕ್‌ನೊಂದಿಗೆ ಹಂಚಿಕೊಂಡ ಪ್ರಕರಣ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next