Advertisement

ವಾಟ್ಸ್‌ಆ್ಯಪ್‌ಗೆ ಬದಲಿ ಆ್ಯಪ್‌ ಗಳು

07:41 PM Jul 21, 2019 | Sriram |

ಇತ್ತೀಚಿನ ದಿನಗಳಲ್ಲಿ ವಾಟ್ಸ್‌ ಆ್ಯಪ್‌ ಅನೇಕ ಕಾರಣಗಳಿಗೆ ಸುದ್ದಿ ಮಾಡುತ್ತಿದೆ. ಫೇಕ್‌ ನ್ಯೂಸ್‌, ಸುರಕ್ಷತೆ ಮುಂತಾದ ಕಾರಣಗಳಿಗೆ. ಅಲ್ಲದೆ ಸ್ಮಾರ್ಟ್‌ಫೋನಿನ ಅಡಿಕ್ಷನ್‌ಗೆ ವಾಟ್ಸ್‌ಆ್ಯಪ್‌ ಕೂಡಾ ಕಾಣ್ಕೆಸಲ್ಲಿಸುತ್ತಿದೆ. ಈ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನಿಂದ ಹೊರಬರುವ ಚಿಂತನೆ ನಡೆಸುತ್ತಿರುವವರಿಗಾಗಿ 5 ಇತರೆ ಮೆಸೆಂಜರ್‌ ಆ್ಯಪ್‌ಗ್ಳನ್ನು ಇಲ್ಲಿ ನೀಡಿದ್ದೇವೆ.


Advertisement

ಟೆಲಿಗ್ರಾಂ
ವಾಟ್ಸ್‌ಆ್ಯಪ್‌ಗೆ ಪ್ರತಿಸ್ಪರ್ಧಿ ಎಂಬುದಿದ್ದರೆ ಅದು ಟೆಲಿಗ್ರಾಂ ಆ್ಯಪ್‌. ವಾಟ್ಸ್‌ಆ್ಯಪ್‌ನಲ್ಲಿರುವ ಬಹುತೇಕ ಸವಲತ್ತುಗಳು ಇದರಲ್ಲೂ ಇವೆ. ಇದಲ್ಲದೆ ಪಾಸ್‌ ಕೋಡ್‌ ಲಾಕ್‌, ತನ್ನಿಂದ ತಾನೇ ಡಿಲೀಟ್‌ ಆಗುವ ಸಂದೇಶ ಸವಲತ್ತನ್ನು ಒದಗಿಸಲಾಗಿದೆ. ಇದರಿಂದಾಗಿ ಈ ಆ್ಯಪ್‌ ಸುರಕ್ಷಿತವಾಗಿದೆ ಎಂಬುದು ಬಳಕೆದಾರರ ಅಭಿಪ್ರಾಯ.

ವಯರ್‌
ವಿಡಿಯೋ ಮತ್ತು ಆಡಿಯೋ ಚಾಟಿಂಗ್‌ ವ್ಯವಸ್ಥೆ ಒದಗಿಸುವ ಸ್ಕೈಪ್‌ ಸಾಫ್ಟ್ವೇರ್‌ ಉದ್ಯೋಗ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿದೆ. ಅದರ ಸ್ಥಾಪಕ ಸದಸ್ಯ ಜಾನಸ್‌ ಅಭಿವೃದ್ಧಿ ಪಡಿಸಿದ ಮೆಸೇಜಿಂಗ್‌ ಆ್ಯಪ್‌ ವಯರ್‌. ತುಂಬಾ ಸರಳವಾದ ಸ್ಕ್ರೀನ್‌, ಇಂಟರ್‌ಫೇಸ್‌ ಇದರ ಹೆಗ್ಗಳಿಕೆ. ಸಂದೇಶ ಕಳಿಸಿದ ಬಳಕೆದಾರ ನಿರ್ದಿಷ್ಟ ಅವಧಿಯ ನಂತರ ಸಂದೇಶ ಡಿಲೀಟ್‌ ಆಗುವಂತೆ ಮಾಡುವ ಸವಲತ್ತು ಇದರಲ್ಲಿದೆ.

ಲೈನ್‌
ಜಪಾನೀಸ್‌ ತಂತ್ರಜ್ಞರು ಅಬಿವೃದ್ದಿ ಪಡಿಸಿರುವ ಈ ಆ್ಯಪ್‌ ವಾಟ್ಸ್‌ಆ್ಯಪ್‌ಗೆ ತೀವ್ರ ಸ್ಪರ್ಧೆಯನ್ನು ಒಡ್ಡುತ್ತಿದೆ. ಕಾನ್ಫರೆನ್ಸ್‌ ಕಾಲ್‌, ಸಾವಿರಾರು ಸ್ಟಿಕ್ಕರ್‌ಗಳು, ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಈ ಆ್ಯಪ್‌ ನೀಡಿದೆ. ಅಲ್ಲದೆ ಬಳಕೆದಾರರ ಸಂದೇಶಗಳು ಲೈನ್‌ನ ಸರ್ವರ್‌ಗಳಲ್ಲಿ ಸಂಗ್ರಹಗೊಳ್ಳುತ್ತವೆ ಎಂಬುದು ನಿಜ. ಸರ್ವರ್‌ನಿಂದಲೇ ಬಳಕೆದಾರರು ತಮ್ಮ ಸಂದೇಶಗಳನ್ನು ಅಳಿಸುವ ಆಯ್ಕೆಯನ್ನು ಸಂಸ್ಥೆ ಬಳಕೆದಾರರಿಗೆ ನೀಡಿದೆ. ಹೀಗಾಗಿ ಮೂರನೇ ಪಾರ್ಟಿಗಳು ಅಥವಾ ಹ್ಯಾಕರ್‌ಗಳು ದತ್ತಾಂಶವನ್ನು ಬಳಸಿಕೊಳ್ಳುವ ಅಪಾಯವೂ ಇರುವುದಿಲ್ಲ.

ವಿಕರ್‌ ಮಿ
ಸುರಕ್ಷತೆ ಮತ್ತು ಖಾಸಗಿತನವನ್ನು ಬಯಸುವವರ ಅಚ್ಚುಮೆಚ್ಚಿನ ಆ್ಯಪ್‌ ಇದು. ಈ ಮೆಸೇಜಿಂಗ್‌ ಆ್ಯಪನ್ನು ಬಳಸುತ್ತಿರುವವರಲ್ಲಿ ಪತ್ರಕರ್ತರು, ಜಾಗತಿಕ ನಾಯಕರು, ಉದ್ಯಮಿಗಳು ಮತ್ತು ಸೆಲಬ್ರಿಟಿಗಳೂ ಇದ್ದಾರೆ. ಈ ಆ್ಯಪ್‌ ಬಳಕೆದಾರರ ಮೊಬೈಲಿನಲ್ಲಿರುವ ಕಾಂಟ್ಯಾಕ್ಟ್ಅನ್ನು ತನ್ನ ಸರ್ವರ್‌ನಲ್ಲಿ ಸಂಗ್ರಹಿಸಿಡುವುದಿಲ್ಲ. ಮಿಕ್ಕ ಆ್ಯಪ್‌ಗ್ಳಲ್ಲಿರುವ ಥರಹೇವಾಗಿ ಸವಲತ್ತುಗಳು ಇದರಲ್ಲಿಲ್ಲ. ಅದೇ ಇದರ ಹೆಗ್ಗಳಿಕೆ.

Advertisement

ಸಿಗ್ನಲ್‌
ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮೆಸೆಂಜರ್‌ಗಳಲ್ಲಿ ಸಂದೇಶಗಳು ಹ್ಯಾಕ್‌ ಆಗದಂತೆ ತಡೆಯುವ ತಂತ್ರಜ್ಞಾನ ಮತ್ತು ಜವಾಬ್ದಾರಿ ಹೊತ್ತಿರುವ ಸಂಸ್ಥೆ “ಓಪನ್‌ ಸೋರ್ಸ್‌ ಸಿಸ್ಟಮ್ಸ್‌’. ಈ ಸಂಸ್ಥೆ, ಜಗಾತಿಕ ಮಟ್ಟದಲ್ಲಿ ಹೆಸರು ಮಾಡಿರುವ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ಗೆ ಸೇವೆ ಒದಗಿಸುವುದರ ಜೊತೆಗೆ ತನ್ನದೇ ಸ್ವಂತ ಮೆಸೇಜಿಂಗ್‌ ಆ್ಯಪನ್ನೂ ಹೊಂದಿದೆ. ವಾಟ್ಸ್‌ಆ್ಯಪ್‌ನಲ್ಲಿ ಇಲ್ಲದ ಸವಲತ್ತುಗಳನ್ನು ಸಂಸ್ಥೆ ತನ್ನ ಆ್ಯಪ್‌ನಲ್ಲಿ ಸಂಸ್ಥೆ ನೀಡಿದೆ. ಅದರಲ್ಲೊಂದು ಸ್ಕ್ರೀನ್‌ಶಾಟ್‌ ತೆಗೆಯಲಾಗದಂತೆ ಮಾಡುವ ಆಯ್ಕೆ. ಕಾಲ್‌, ಸಂದೇಶ, ಬ್ಯಾಕ್‌ಅಪ್‌ ಇವೆಲ್ಲಾ ಚಟುವಟಿಕೆಗಳಿಗೂ ಸುರಕ್ಷತೆ ಒದಗಿಸಲಾಗಿದೆ ಎನ್ನುವುದು ಸಂಸ್ಥೆಯ ವಿಶ್ವಾಸ.

Advertisement

Udayavani is now on Telegram. Click here to join our channel and stay updated with the latest news.

Next