Advertisement

ಬೇರೆಯವರ ಕಿಟ್‌ಗೆ ನಿಮ್ಮ ಹೆಸರೇಕೆ?

05:13 AM May 15, 2020 | Suhan S |

ಕಲಬುರಗಿ: ರವಿಶಂಕರ ಗುರೂಜೀ ಜ್ಞಾನ ಕ್ಷೇತ್ರದವರು ಜಿಲ್ಲಾಡಳಿತಕ್ಕೆ ಒಪ್ಪಿಸಿದ ಆಹಾರದ ಕಿಟ್‌ಗಳನ್ನು ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಹಂಚಿರುವುದನ್ನು ಖಂಡಿಸುತ್ತೇವೆ ಎಂದು ಮಹಾನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸೂರಜಪ್ರಸಾದ ತಿವಾರಿ, ಮಹಾದೇವ ಬೆಳಮಗಿ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌-19ರ ಆಹಾರ ಕಿಟ್‌ಗಳನ್ನು ಸಂತ್ರಸ್ತರಿಗೆ ಹಂಚುವುದರಲ್ಲಿಯೂ ಯಾರದೋ ದುಡ್ಡು ಯಲ್ಲಮ್ಮ ಜಾತ್ರೆ ಎನ್ನುವಂತೆ ತೋರಿರುವುದು ಆತ್ಮಾವಕೋನ ಮಾಡಿಕೊಳ್ಳುವಂತಿದೆ ಎಂದು ಟೀಕಿಸಿದರು. ರವಿಶಂಕರ ಗುರೂಜಿ ಆಶ್ರಮದ ವತಿಯಿಂದ ಜಿಲ್ಲಾಡಳಿತಕ್ಕೆ ನೀಡಲಾದ ಆಹಾರದ ಕಿಟ್‌ಗಳು ಮಾಜಿ ಶಾಸಕರ ಕೈಗೆ ಹೇಗೆ ಸೇರಿತು ಎಂಬುವುದಕ್ಕೆ ತನಿಖೆ ಆಗಬೇಕು. ಬಹು ಮುಖ್ಯವಾಗಿ ವ್ಯಾಟ್ಸ್‌ ಆಪ್‌ ಗ್ರೂಪ್‌ನಲ್ಲಿ ಆಹಾರ ಕಿಟ್‌ ವಿತರಿಸುವ ಚಿತ್ರದ ಕೆಳಗೆ, ಬಡವರ ಬಂಧು ಅಲ್ಲಮಪ್ರಭು ಪಾಟೀಲ ವೈಯಕ್ತಿವಾಗಿ ಕಿಟ್‌ಗಳನ್ನು ಹಂಚುತ್ತಿದ್ದಾರೆ ಎಂದು ಹೇಳಿಕೊಂಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next