Advertisement

ಕೆಟ್ಟಿರುವುದು ಏನು?

07:36 PM Oct 21, 2019 | Lakshmi GovindaRaju |

ಹಂಗೆರಿಯಿಂದ ಬಂದ ಇಬ್ಬರು ಒಳ್ಳೆಯ ಗಣಿತಜ್ಞರೆಂದರೆ ಆಂಡ್ರ್ಯೂ ವಸೋನಿ ಮತ್ತು ಪಾಲ್‌ ಏರ್ಡಿಶ್‌. ಇಬ್ಬರಿಗೂ ಬಾಲ್ಯದಿಂದಲೂ ಸಲುಗೆಯ ಗೆಳೆತನ. ಹಂಗೆರಿಯಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಡಾಕ್ಟರೇಟ್‌ ಮುಗಿಸಿದ ಕೀರ್ತಿ ಏರ್ಡಿಶ್‌ರದ್ದಾದರೆ, ಎರಡನೆಯವರಾಗಿ ಬಂದವರು ವಸೋನಿ. ಜಗತ್ತನ್ನು ನಿರಂತರವಾಗಿ ಸುತ್ತುತ್ತಿದ್ದ ಏರ್ಡಿಶ್‌ ಆಗಾಗ ವಸೋನಿಯ ಮನೆಗೆ ಬಂದು ಠಿಕಾಣಿ ಹೂಡುವುದಿತ್ತು. ವಸೋನಿಗಿಂತ ಏರ್ಡಿಶ್‌ ಐದಾರು ವರ್ಷ ದೊಡ್ಡವರು.

Advertisement

ವಸೋನಿಯ ಮನೆಯಲ್ಲಿದ್ದಾಗ ಒಮ್ಮೆ ತನ್ನ ಇನ್ನೊಬ್ಬ ಗೆಳೆಯನೊಡನೆ ಫೋನ್‌ನಲ್ಲಿ ಮಾತಾಡುತ್ತಿದ್ದರು ಏರ್ಡಿಶ್‌. ಮಾತಿನ ಮಧ್ಯೆ ವಸೋನಿಯ ವಿಚಾರ ಬಂತು. “ಏನು? ವಸೋನಿಯಾ? ಇದ್ದಾನೆ, ಹೇಗೋ ದಿನ ನೂಕುತ್ತಿದ್ದಾನೆ. ಹಳಬ ಅಲ್ವೇ, ಕಿವಿ ಬೇರೆ ಕೇಳ್ಸೊಲ್ಲ! ‘ ಎಂದು ವಸೋನಿಯ ಎದುರು ಕೂತಿದ್ದೇ ಗುಟ್ಟೆನ್ನುವಂತೆ, ಆದರೂ ಸಾಕಷ್ಟು ಗಟ್ಟಿಯಾಗಿಯೇ ಹೇಳಿದರು. ಮಾತು ಮುಗಿದ ಮೇಲೆ ಅವರಿಗೆ ತನ್ನ ಸಂಭಾಷಣೆಯನ್ನು ವಸೋನಿ ಚೆನ್ನಾಗೇ ಕೇಳಿದ್ದಾರೆ ಅಂತ ಖಾತ್ರಿಯಾಯಿತು. ತೆಪ್ಪಗೆ ಒಳ ಹೋಗಿ, ವಸೋನಿಯ ಪತ್ನಿಯ ಬಳಿ, ನಿನ್ನ ಗಂಡನಿಗೆ ಕಿವಿ ಕೆಟ್ಟಿದೆ ಅಂದುಕೊಂಡಿದ್ದೆ. ಹಾಗೇನಿಲ್ಲ. ಕೆಟ್ಟಿರುವುದು ಕಿವಿಗಳ ನಡುವಿನದ್ದು!’ ಎಂದರು.

* ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next