Advertisement

ಸಿದ್ದು ಸಿಎಂ ಆಗಲಿ ಎಂದರೆ ತಪ್ಪೇನು?

12:57 AM May 10, 2019 | Team Udayavani |

ಮಂಡ್ಯ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್‌ನ ಹಲವು ಶಾಸಕರು, ಮುಖಂಡರು ಬಯಸಿರುವುದು ನಿಜ. ಆದರೆ, ನಾಳೆ ಬೆಳಗ್ಗೆಯೇ ಕುಮಾರಸ್ವಾಮಿ ಅವರನ್ನು ಬದಲಾಯಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂದು ಅವರ್ಯಾರೂ ಹೇಳಿಲ್ಲ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Advertisement

ಆ ಮೂಲಕ ಮತ್ತೆ ಸಿದ್ದರಾಮಯ್ಯ ಸಿಎಂ ಆಗಬೇಕೆನ್ನುವವರ ಪರ ಬ್ಯಾಟ್ ಬೀಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಬೇಕು ಎಂದು ಜಾತ್ಯತೀತವಾಗಿ, ಪಕ್ಷಾತೀತವಾಗಿ ನಾಯಕರು ಬಯಸಿದ್ದಾರೆ. ಅದನ್ನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ನಮಗೆ ಮುಂದಿನ ದಿನಗಳಲ್ಲಿ ಒಬ್ಬ ಒಳ್ಳೆಯ ನಾಯಕ ಮುಖ್ಯಮಂತ್ರಿ ಹುದ್ದೆಗೇರಬೇಕು, ಎಲ್ಲಾ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಬೇಕು ಅಂತ ಹೇಳಿದ್ದಾರೆ.

ಅದರಲ್ಲೇನು ತಪ್ಪು ಎಂದು ಪ್ರಶ್ನಿಸಿದರು. ನಾಲ್ಕು ವರ್ಷಕ್ಕೆ ಚುನಾವಣೆ ಯಾಗಲಿ ಅಥವಾ ಒಂದು ವರ್ಷಕ್ಕೇ ಚುನಾವಣೆಯಾಗಲಿ. ಸಿದ್ದರಾಮಯ್ಯ ಮುಂದೆ ಸಿಎಂ ಆಗಲಿ ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯನವರ ಬಗ್ಗೆ ಕೆಲವು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಅಸಮಾಧಾನವಿತ್ತು. ಅವರಿಗೂ ಈಗ ಅದು ಅರ್ಥವಾಗಿದೆ. ಸಿದ್ದರಾಮಯ್ಯ ಅವರು ಯಾವುದೇ ಜಾತಿ ವಿರೋಧಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next