Advertisement
ದಲಿತ ಸಂಘರ್ಷ ಸಮಿತಿಯಿಂದ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ “ಎತ್ತ ಸಾಗುತ್ತಿದೆ ಭಾರತ?’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಂಪೂರ್ಣ ಗೋ ಹತ್ಯೆ ನಿಷೇಧಕ್ಕೆ ಮುಂದಾಗಿತ್ತು. ವಿರೋಧ ಪಕ್ಷದಲ್ಲಿದ್ದ ನಾವು ಅದನ್ನು ವಿರೋಧಿಸಿದ್ದೆವು.
Related Articles
Advertisement
ಜಾತ್ಯತೀತತೆ ಪ್ರತಿಪಾದನೆ ಮಾಡುವ ಅವಕಾಶವಾದಿಗಳ ಬಗ್ಗೆಯೂ ಎಚ್ಚರ ಇರಬೇಕು. ಕರ್ನಾಟಕದ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಬೇಕು. ಸಾಮಾಜಿಕ ನ್ಯಾಯದ ಪರ ಇರುವವರನ್ನು ಮತ್ತು ಸಂವಿಧಾನವನ್ನು ಗೌರವಿಸಿ ಪ್ರಜಾಪ್ರಭುತ್ವ ಉಳಿಸುವವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಬಿಜೆಪಿಯವರು ದೇಶದ ಬಹುತ್ವವನ್ನು ನಾಶಮಾಡಿ ಸಂವಿಧಾನದ ಮೇಲೆ ಗದಪ್ರಹಾರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕೋಮುವಾದಿ ಶಕ್ತಿಗಳಿಗೆ ಮತ್ತೇ ತಲೆ ಎತ್ತುಲು ಬಿಡ ಬಾರದು. ರಾಜ್ಯ ವಿಧಾನಸಭೆ ಚುನಾವಣೆ ದೇಶದ ರಾಜಕೀಯ ಮತ್ತು ಪ್ರಜಾಭುತ್ವ ವ್ಯವಸ್ಥೆಯ ಭವಿಷ್ಯ ನಿರ್ಧರಿಸಲಿದೆ ಎಂದರು.
ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯ ರೈತ ಸಂಘದ ಪ್ರಧಾನ ಕಾಯರದರ್ಶಿ ಬಡಗಲಪುರ ನಾಗೇಂದ್ರ, ದಲಿತ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್ ಮತ್ತು ಲಕ್ಷ್ಮೀನಾರಾಯಣ ನಾಗವಾರ ಮೊದಲಾದವರು ಇದ್ದರು.
ನಿರ್ಣಯಗಳು: 2018ರ ರಾಜ್ಯ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕರ್ನಾಟಕದಲ್ಲಿ ಜಾತ್ಯಾತೀತೆ, ಪ್ರಜಾಸತಾತ್ಮಕತೆ ಮತ್ತು ರಾಜಕೀಯ ಜಾಗೃತಿ ಮೂಡಿಸುವುದು. ಪ್ರಜಾಪ್ರಭುತ್ವ ಉಳಿವಿಗೆ ಮತ್ತು ಜಾತಿ ರಾಜಕೀಯದ ವಿರುದ್ಧ ಅರಿವು ಮೂಡಿಸುವ ನಿರ್ಣಯವನ್ನು ವಿಚಾರ ಸಂಕಿರಣದಲ್ಲಿ ಕೈಗೊಳ್ಳಲಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರೋದು ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ. ಕೋಮುವಾದಿಗಳು ಇಡೀ ದೇಶವನ್ನೇ ಆಕ್ರಮಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಅವರ ಮುಂದಿನ ಗುರಿ. ಕೊಳಕು ಮನಸ್ಸಿನ ಆ ಕೋಮುವಾದಿಗಳು ಅಧಿಕಾರಕ್ಕೆ ಏರದಂತೆ ನೋಡಿಕೊಳ್ಳಬೇಕು.-ಸಿದ್ದರಾಮಯ್ಯ, ಮುಖ್ಯಮಂತ್ರಿ