ಹೊಸದಿಲ್ಲಿ: ವಾಟ್ಸ್‌ಆ್ಯಪ್ ಸ್ಪೈವೇರ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದು ಕೊಳ್ಳು ತ್ತಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರಿಗೂ “ನಿಮ್ಮ ಫೋನ್ ಹ್ಯಾಕ್ ಆಗಿರುವ ಶಂಕೆಯಿದೆ’ ಎಂಬ ಸಂದೇಶವು ವಾಟ್ಸ್‌ಆ್ಯಪ್ ಕಡೆ ಯಿಂದ ಬಂದಿತ್ತು ಎಂಬ ವಿಚಾರವನ್ನು ರವಿವಾರ ಕಾಂಗ್ರೆಸ್ ಬಹಿರಂಗಪಡಿಸಿದೆ.
ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು ತಮ್ಮ ವಾಟ್ಸ್ ಆ್ಯಪ್ ಕೂಡ ಹ್ಯಾಕ್ ಆಗಿತ್ತು ಎಂಬ ವಿಚಾರ ಬಾಯಿಬಿಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ರವಿವಾರ ಮಾತ ನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲ, “ಪ್ರಿಯಾಂಕಾ ವಾದ್ರಾರಿಗೂ ಇಂಥ ದ್ದೊಂದು ಸಂದೇಶ ಬಂದಿತ್ತು’ ಎಂದು ಹೇಳಿದ್ದಾರೆ.
ಇದೇ ವೇಳೆ, ಕೇಂದ್ರ ಸರಕಾರದ ವಿರುದ್ಧ ದಾಳಿ ಮುಂದುವರಿಸಿರುವ ಸುಜೇì ವಾಲ, 2019ರ ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶದ ನಾಗರಿಕರು, ರಾಜಕೀಯ ನಾಯಕರ ಬೇಹುಗಾರಿಕೆ ನಡೆಸುತ್ತಿತ್ತೇ ಎಂದೂ ಪ್ರಶ್ನಿಸಿದ್ದಾರೆ. ಈ ನಡುವೆ, ಕಾಂಗ್ರೆಸ್ ನಾಯಕರ ನೇತೃತ್ವದ ಎರಡು ಸಂಸದೀಯ ಸಮಿತಿಗಳು ಈ ಪ್ರಕರಣದ ಕುರಿತು ಪರಿಶೀಲನೆ ನಡೆ ಸಲಿದ್ದು, ಸರಕಾರದ ಉನ್ನತ ಅಧಿಕಾರಿ ಗಳಿಂದ ವಿವರಣೆ ಕೇಳಲಿದೆ ಎಂದು ಮೂಲಗಳು ತಿಳಿಸಿವೆ.
2 ಬಾರಿ ಎಚ್ಚರಿಸಿದ್ದೆವು: ಈ ನಡುವೆ, ಪೆಗಾಸಸ್ ಸ್ಪೈವೇರ್ ಕುರಿತು ಎರಡು ಬಾರಿ ಕೇಂದ್ರ ಸರಕಾರವನ್ನು ಎಚ್ಚರಿಸಿದ್ದೆವು ಎಂದು ವಾಟ್ಸ್‌ಆ್ಯಪ್ ತಿಳಿಸಿದೆ. ಮೇ ತಿಂಗಳು ಹಾಗೂ ಸೆಪ್ಟrಂಬರ್‌ನಲ್ಲಿ ತಾನು ಕಳುಹಿಸಿದ್ದ ಸಂದೇಶದ ಪ್ರತಿಯನ್ನೂ ಸಂಸ್ಥೆ ಲಗತ್ತಿಸಿದೆ. ಅಲ್ಲದೆ, 121 ಮಂದಿಯ ಮೇಲೆ ಬೇಹುಗಾರಿಕೆ ನಡೆದಿತ್ತು ಎಂದೂ ಹೇಳಿದೆ. ನಮಗೆ ವಾಟ್ಸ್‌ಆ್ಯಪ್‌ನಿಂದ ಮಾಹಿತಿಯೇ ಬಂದಿಲ್ಲ ಎಂದು ಸರಕಾರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ವಾಟ್ಸ್‌ಆ್ಯಪ್ ಸಂಸ್ಥೆಯೇ ದಾಖಲೆಯನ್ನು ಸರಕಾರಕ್ಕೆ ಒದಗಿಸಿದೆ.