Advertisement

ಸದ್ದಿಲ್ಲದೆ ಮಾಯವಾಗುವ ವಾಟ್ಸ್‌ ಆ್ಯಪ್‌ ಸಂದೇಶ!

10:53 AM Oct 09, 2019 | sudhir |

ವಾಟ್ಸ್‌ ಆ್ಯಪ್‌ ತನ್ನ ಬಳಕೆದಾರರಿಗೆ ಹೊಸ ಸವಲತ್ತನ್ನು ನೀಡುವ ಯೋಚನೆಯಲ್ಲಿದೆ. ಅದನ್ನು ಬಳಸಿ ಬಳಕೆದಾರರು ತಮ್ಮ ಸಂದೇಶಗಳನ್ನು ಡಿಲೀಟ್‌ ಮಾಡಬಹುದು. ಆ ಆಯ್ಕೆ ಈಗಾಗಲೇ ಇದೆಯಲ್ಲ ಎಂದು ನೀವು ಯೋಚಿಸಬಹುದು. ಹೌದು, “ಡಿಲೀಟ್‌ ಫಾರ್‌ ಎವರಿಒನ್‌’ ಎಂಬ ವಾಟ್ಸ್‌ಆ್ಯಪ್‌ನ ಸವಲತ್ತು ಈಗಾಗಲೇ ಲಭ್ಯವಿದೆ. ಆದರೆ ಆ ಆಯ್ಕೆಯನ್ನು ಬಳಸಿ ಸಂದೇಶವನ್ನು ಡಿಲೀಟ್‌ ಮಾಡಿದಾಗ “ಈ ಸಂದೇಶವನ್ನು ಡಿಲೀಟ್‌ ಮಾಡಲಾಗಿದೆ’ ಎಂಬ ಸೂಚನೆ, ಸಂದೇಶ ಇದ್ದ ಜಾಗದಲ್ಲಿ ಬರುತ್ತದೆ. ಅಂದರೆ, ಎದುರಿನ ಬಳಕೆದಾರರಿಗೆ ಅದು ಗೋಚರಿಸುತ್ತದೆ. ಹಾಗಾಗಿ ಡಿಲೀಟ್‌ ಮಾಡಿದ್ದು ಗೊತ್ತಾಗಿಬಿಡುತ್ತದೆ. ಸಂದೇಶದ ಯಾವ ಜಾಡನ್ನೂ ಉಳಿಸದೆ ಡಿಲೀಟ್‌ ಮಾಡುವ ಸವಲತ್ತನ್ನು ಇದೀಗ ಪರಿಚಯಿಸಲು ಹೊರಟಿದೆ.

Advertisement

ಅದುದರಿಂದ ಬಳಕೆದಾರ ಟೈಪಿಸುವ ಸಂದೇಶ ಸ್ವಲ್ಪ ಹೊತ್ತು ಮಾತ್ರ ಮೆಸೆಂಜರಿನಲ್ಲಿ ಕಾಣಿಸುತ್ತದೆ, ನಂತರ ತನ್ನಷ್ಟಕ್ಕೆ ತಾನೇ ಮಾಯವಾಗಿಬಿಡುತ್ತದೆ. ಆ ಸಂದೇಶ ಎಲ್ಲಿಯೂ ತನ್ನ ಜಾಡನ್ನು ಉಳಿಸುವುದಿಲ್ಲ. ಇಲ್ಲಿ ಎರಡು ಆಯ್ಕೆಗಳನ್ನು ವಾಟ್ಸ್‌ಆ್ಯಪ್‌ ನೀಡಲಿದೆ ಎಂಬ ಮಾಹಿತಿಯಿದೆ. ಮೊದಲನೆಯ ಆಯ್ಕೆಯಲ್ಲಿ, 5 ಸೆಕೆಂಡುಗಳ ನಂತರ ಸಂದೇಶ ಡಿಲೀಟ್‌ ಆಗುತ್ತದೆ, ಎರಡನೆಯ ಆಯ್ಕೆಯಲ್ಲಿ ಒಂದು ಗಂಟೆಯ ನಂತರ ಸಂದೇಶ ಅಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗುತ್ತದೆ.

ಸದ್ಯಕ್ಕೆ ತಂತ್ರಜ್ಞರು ಈ “ಆಟೋಮ್ಯಾಟಿಕ್‌ ಡಿಲೀಟ್‌’ ಸವಲತ್ತನ್ನು ಗ್ರೂಪ್‌ ಚಾಟ್‌ಗಳಿಗೆ ಮಾತ್ರವೇ ಅಳವಡಿಸುವ ಯೋಚನೆಯಲ್ಲಿದ್ದಾರೆ. ಅಲ್ಲಿ ಅದರ ಕಾರ್ಯಕ್ಷಮತೆ ಮತ್ತು ಅನುಕೂಲಗಳನ್ನು ಪರಿಶೀಲಿಸಿ, ನಂತರದ ದಿನಗಳಲ್ಲಿ ವೈಯಕ್ತಿಕ (ಒನ್‌ ಆನ್‌ ಒನ್‌) ಚಾಟ್‌ ವಿಂಡೋಗಳಿಗೂ ವಿಸ್ತರಿಸುವ ಯೋಚನೆಯನ್ನು ವಾಟ್ಸ್‌ ಆ್ಯಪ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next