Advertisement

ಏನಿದು ಅನ್ ವಾಂಟೆಡ್ ಇನ್ಸಿಡೆಂಟ್? ಸಂಚಲನ ಮೂಡಿಸಿದ ಸಚಿವ ಸಿ.ಟಿ.ರವಿ ಹೇಳಿಕೆ

08:17 AM Nov 02, 2019 | Nagendra Trasi |

ಚಿಕ್ಕಮಗಳೂರು: ಒಂದು ವೇಳೆ ಯಾವುದೇ ರೀತಿಯಲ್ಲೂ ನಡೆಯಬಾರದ ಘಟನೆ(ಅನ್ ವಾಂಟೆಡ್ ಇನ್ಸಿಡೆಂಟ್)ಗಳು ನಡೆಯದೇ ಇದ್ದರೆ ಜನವರಿ ವೇಳೆಗೆ ಪ್ರವಾಸಿ ನೀತಿ ಬದಲಿಸುತ್ತೇವೆ ಎಂದು ಸಚಿವ ಸಿ.ಟಿ.ರವಿ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅನ್ ವಾಂಟೆಡ್ ಇನ್ಸಿಡೆಂಟ್ ಗಳು ನಡೆಯದೇ ಇದ್ದರೆ ಪ್ರವಾಸಿ ನೀತಿ ಹಾಗೂ ಬಜೆಟ್ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಯಾವುದು ಅನ್ ವಾಂಟೆಡ್ ಘಟನೆಗಳು?

ಡಿಸೆಂಬರ್ 5ರಂದು ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕನಿಷ್ಠ ಎಂಟು ಸ್ಥಾನಗಳಲ್ಲಿ ಗೆಲುವು ಸಾಧಿಸಲೇಬೇಕಾಗಿದೆ. ಒಂದು ವೇಳೆ ಎಂಟು ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸದೇ ಇದ್ದರೆ ಬಿಜೆಪಿ ಸರ್ಕಾರಕ್ಕೆ ಬಹುಮತ ಕಡಿಮೆಯಾಗುವ ಮೂಲಕ ಸರ್ಕಾರ ಪತನವಾಗುವ ನಿಟ್ಟಿನಲ್ಲಿ ಸಿ.ಟಿ.ರವಿ ಈ ರೀತಿ ಹೇಳಿಕೆ ನೀಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೆಯೇ ಘೋಷಿಣೆಯಾಗಿಲ್ಲ ಎಂದ ಸಿ.ಟಿ ರವಿ!

Advertisement

ರಾಜ್ಯದಲ್ಲಿ ನಡೆಯಬೇಕಾಗಿದ್ದ 15 ಕ್ಷೇತ್ರಗಳ ಬಗ್ಗೆ ಇನ್ನೂ ದಿನಾಂಕವೇ ಘೋಷಣೆಯಾಗಿಲ್ಲ ಎಂದು ಸಚಿವ ಸಿಟಿ ರವಿ ತಿಳಿಸಿದ್ದರು. ಆದರೆ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದೆ ಎಂದು ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next