Advertisement

ನಾಳೆಯಿಂದ ಏನೇನು ನಿಯಮ ಬದಲು?

02:08 AM Mar 31, 2022 | Team Udayavani |

ಇದೇ ಎ. 1ರಿಂದ 2022-23ನೇ ಆರ್ಥಿಕ ವರ್ಷ ಆರಂಭವಾಗಲಿದೆ. ಹಲವಾರು ಯೋಜನೆಗಳಲ್ಲಿನ ನಿಯಮಗಳು ಬದಲಾವಣೆಯಾಗಲಿವೆ. ಆಧಾರ್‌-ಪ್ಯಾನ್‌ ಲಿಂಕ್‌ ಮಾಡದವರಿಗೆ ದಂಡ ಪ್ರಯೋಗವಾಗಲಿದೆ. ಬದಲಾಗಲಿರುವ 5 ಪ್ರಮುಖ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಇಪಿಎಫ್ ಬಡ್ಡಿ ಮೇಲೆ ತೆರಿಗೆ
ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ (ಇಪಿಎಫ್) ವಾರ್ಷಿ ಕವಾಗಿ ಜಮೆಯಾಗುವ ಹಣದ ಮೇಲೆ ತೆರಿಗೆ ವಿನಾಯಿತಿ ಮಿತಿ ವಿಧಿಸಿರುವ ಕೇಂದ್ರ ಸರಕಾರ. ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ.ಗಳಿಗೆ ನಿಗದಿ. ಈ ಮಿತಿ ದಾಟಿದಲ್ಲಿ ಆ ಜಮೆಯಾಗುವ ಮೊತ್ತದ ಮೇಲೆ ಬರುವ ಬಡ್ಡಿಯ ಮೇಲೆ ತೆರಿಗೆ.

ತೆರಿಗೆ ವಿನಾಯಿತಿಗೆ ಕೊಕ್‌
ಮೊದಲ ಬಾರಿಗೆ ಗೃಹ ಸಾಲ ಪಡೆದು ಮನೆ ಕೊಳ್ಳುವವರಿಗೆ ನೀಡಲಾಗುತ್ತಿದ್ದ ತೆರಿಗೆ ವಿನಾಯಿತಿ ಸೌಲಭ್ಯಕ್ಕೆ ಕೊಕ್‌. 2019-20ರ ಬಜೆಟ್‌ನಲ್ಲಿ ಈ ಸೌಲಭ್ಯ ಘೋಷಿಸಲಾಗಿತ್ತು. ಅದರಂತೆ, ಮೊದಲ ಬಾರಿ ಗೃಹ ಸಾಲ ಪಡೆದು ಮನೆ ಕೊಳ್ಳು ವವರಿಗೆ 1.50 ಲಕ್ಷದ ಆದಾಯ ತೆರಿಗೆ ವಿನಾಯ್ತಿ ನೀಡುವುದಾಗಿ ಕೇಂದ್ರ ಹೇಳಿತ್ತು. ಎ. 1ರಿಂದ ಆರಂಭವಾ ಗುವ 2022-23ರ ವಿತ್ತೀಯ ವರ್ಷದಲ್ಲಿ ಈ ಸೌಲಭ್ಯ ರದ್ದಾಗಲಿದೆ.

ಬಡ್ಡಿ ಬೇಕಾದರೆ ಖಾತೆ ತೆರೆಯಬೇಕು!
ಎ. 1ರಿಂದ ಅಂಚೆ ಕಚೇರಿಗಳಲ್ಲಿರುವ ಮಾಸಿಕ ಆದಾಯ ಯೋಜನೆ (ಎಂಐಎಸ್‌), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌), ಅಂಚೆ ಕಚೇರಿ ಟರ್ಮ್ ಠೇವಣಿ (ಟಿಡಿ) ಮೇಲಿನ ಬಡ್ಡಿಯನ್ನು ನಗದು ರೂಪದಲ್ಲಿ ನೀಡುವ ಸೌಲಭ್ಯ ನಿಲ್ಲಲಿದೆ. ಈ ಸೌಲಭ್ಯ ಪಡೆಯಲು ಈ ಯೋಜನೆಗಳ ಫ‌ಲಾನುಭವಿಗಳು ಅಂಚೆ ಕಚೇರಿ ಯಲ್ಲಿ ಅಥವಾ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯುವುದು ಕಡ್ಡಾಯವಾಗಲಿದ್ದು, ಆ ಖಾತೆಗಳಿಗೆ ಬಡ್ಡಿ ಹಣ ಜಮೆಯಾಗುತ್ತದೆ. ಉಳಿತಾಯ ಖಾತೆಗಳನ್ನು ತೆರೆಯದೇ ಅದರ ವಿವರಗಳನ್ನು ಸಂಬಂಧಿಸಿದ ಅಂಚೆ ಕಚೇರಿಗೆ ನೀಡದೇ ಇದ್ದಲ್ಲಿ ಬಡ್ಡಿ ಜಮೆಯನ್ನು ತಡೆ ಹಿಡಿಯಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.

ಅನಿಲ ಬೆಲೆ ಹೆಚ್ಚಳ
ಪ್ರತಿ ತಿಂಗಳಿನಂತೆ ಈ ತಿಂಗಳೂ ಅಡುಗೆ ಅನಿಲ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಎಪ್ರಿಲ್‌ನ ಮೊದಲ ವಾರದಲ್ಲೇ ಪರಿಷ್ಕರಣೆ ಯಾಗುವ ಸಾಧ್ಯತೆಗಳಿವೆ.

Advertisement

ಜಿಎಸ್‌ಟಿ ನಿಯಮ ಬದಲು
ಸರಕು ಮತ್ತು ಸೇವಾ ತೆರಿಗೆಗಳಡಿ (ಜಿಎಸ್‌ಟಿ) ನೀಡಲಾಗುತ್ತಿರುವ 50 ಕೋಟಿ ರೂ.ವರೆಗಿನ ಇ- ಚಲನ್‌ಗಳ ಮಿತಿಯನ್ನು 20 ಕೋಟಿ ರೂ.ಗಳಿಗೆ ಇಳಿಸಲಾಗಿದೆ.

ಮತ್ತೇನಿದೆ?
-10 ಲಕ್ಷ ರೂ. ಮೇಲ್ಪಟ್ಟ ವ್ಯವಹಾರದ ಚೆಕ್‌ಗಳ ಪರಿಶೀಲನೆ ಕಡ್ಡಾಯಗೊಳಿಸಿದ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ (ಪಿಎನ್‌ಬಿ).

-ಕ್ರಿಪ್ಟೋ ಕರೆನ್ಸಿಗಳಿಂದ ಬರುವ ಆದಾಯದ ಮೇಲೆ ಶೇ. 3ರಷ್ಟು ತೆರಿಗೆ.

-ನೋವು ನಿವಾರಕ, ಆ್ಯಂಟಿ ಬಯೋಟಿಕ್ಸ್‌, ಫಿನೋಬಾರ್ಬಿಟೋನ್‌, ಫಿನಿಟೋಯಿನ್‌ ಸೋಡಿಯಂ, ಅರಿತ್ರೋಮೈಸಿನ್‌, ಸಿಪ್ರೋಫ್ಲೋಕ್ಸಾಸಿನ್‌, ಆ್ಯಂಟಿ ವೈರಲ್‌ ಔಷಧಗಳ ಬೆಲೆ ಹೆಚ್ಚಳ.

Advertisement

Udayavani is now on Telegram. Click here to join our channel and stay updated with the latest news.

Next