ಇನ್ನು ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿಯನ್ನೋ ಅಥವಾ ಆಕ್ಷೇಪಾರ್ಹ ಮೆಸೇಜ್ ಅನ್ನು ಕಳುಹಿಸಿದರೆ ನಿಮ್ಮ ನಂಬರ್ ಬ್ಲಾಕ್ ಆಗಬಹುದು! ಈವರೆಗೆ ಸುಳ್ಳು ಸುದ್ದಿ ಪತ್ತೆಗೆ ಹಲವು ರೀತಿಯ ಕ್ರಮಗಳನ್ನು ವಾಟ್ಸ್ ಆ್ಯಪ್ ತೆಗೆದುಕೊಂಡಿದೆ ಯಾದರೂ, ನಂಬರ್ ಅನ್ನೇ ಬ್ಲಾಕ್ ಮಾಡು ವಂಥ ಕಠಿಣ ಕ್ರಮ ಇದೇ ಮೊದಲು ತೆಗೆದು ಕೊಂಡಿದೆ. ಮೊದಲ ಹಂತದ ಮತದಾನ ಏಪ್ರಿಲ್ 11 ರಂದು ನಡೆದಿದ್ದು, ಅದಕ್ಕೂ ಮೊದಲು 48 ಗಂಟೆಗಳ ಅವಧಿಯಲ್ಲಿ ಒಂದು ನಂಬರ್ ಅನ್ನು ಬ್ಲಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಅವಧಿಯಲ್ಲಿ 500 ಫೇಸ್‌ಬುಕ್ ಪೋಸ್ಟ್‌ಗಳು ಮತ್ತು ಲಿಂಕ್‌ಗಳು ಹಾಗೂ ಟ್ವಿಟರ್‌ನಲ್ಲಿನ ಎರಡು ಪೋಸ್ಟ್‌ಗಳನ್ನು ಡಿಲೀಟ್ ಮಾಡ ಲಾಗಿದೆ. ಚುನಾವಣಾ ಆಯೋಗವು ಆಕ್ಷೇಪಾರ್ಹ ಎಂದು ಗುರುತಿಸಿದ ಸಂದೇಶವನ್ನು ಫಾರ್ವರ್ಡ್ ಮಾಡಿದ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಸಂಸ್ಥೆ ನಿರ್ಬಂಧಿ ಸಲಿದೆ. ಒಮ್ಮೆ ಬ್ಲಾಕ್ ಮಾಡಿದರೆ ಆ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಮೂಲಕ ಮೆಸೇಜ್ ಕಳುಹಿಸಲು ಸಾಧ್ಯವಾಗುವುದಿಲ್ಲ. ಆದರೆ ಎಷ್ಟು ಸಮಯದವರೆಗೆ ಬ್ಲಾಕ್ ಮಾಡಲಾಗುತ್ತದೆ ಮತ್ತು ಯಾವಾಗ ಈ ನಿರ್ಬಂಧವನ್ನು ಹಿಂಪಡೆಯಲಾಗುತ್ತದೆ ಎಂಬುದು ತಿಳಿದುಬಂದಿಲ್ಲ.
ಕೇರಳದಲ್ಲಿ ನಾಮ ಜಪ
ಕೇರಳದಲ್ಲಿ ಚುನಾವಣೆಗೆ 9 ದಿನವಷ್ಟೇ ಬಾಕಿಯಿರುವಾಗ ಶಬರಿಮಲೆ ವಿಚಾರವನ್ನೆತ್ತಿಕೊಂಡು ಹಿಂದೂ ಸಂಘಟನೆಗಳು ನಾಮಜಪ ಆರಂಭಿ ಸಿವೆ. ವಿವಾದ ಮಿತಿಮೀರಿದ್ದ ಸಂದರ್ಭದಲ್ಲಿ ಹಲವರ ಮೇಲೆ ಪ್ರಕರಣ ಗಳು ದಾಖಲಾಗಿದ್ದು, ಇದನ್ನು ಖಂಡಿಸಿ ಶನಿವಾರ ಪ್ರತಿಭಟನೆ ನಡೆದಿದೆ. ಈ ಕುರಿತು ಮಾತನಾಡಿರುವ ಕರ್ಮ ಸಮಿತಿ ಮುಖ್ಯಸ್ಥ ಚಿದಾನಂದ ಪುರಿ, ನಾವು ಶಬರಿಮಲೆ ವಿಚಾರವನ್ನೆತ್ತಿ ಪ್ರತಿಭಟನೆ ಮುಂದುವರಿಸು ತ್ತೇವೆ. ನಮ್ಮದು ರಾಜಕೀಯೇತರ ಸಂಘಟನೆಯಾದ ಕಾರಣ, ನಮ್ಮ ಪ್ರತಿಭಟನೆಯು ನೀತಿ ಸಂಹಿತೆಯ ಉಲ್ಲಂಘನೆ ಆಗುವುದಿಲ್ಲ ಎಂದಿದ್ದಾರೆ.