Advertisement

New Parliament ಅಗತ್ಯವೇನು?: ಕುಸ್ತಿಪಟುಗಳ ವಿಚಾರದಲ್ಲಿ ಸಿದ್ದರಾಮಯ್ಯ ಆಕ್ರೋಶ

06:52 PM May 28, 2023 | Team Udayavani |

ಬೆಂಗಳೂರು: ”ಧರಣಿ ನಡೆಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗದಿದ್ದರೆ ಹೊಸ ಸಂಸತ್ ಭವನದ ಅಗತ್ಯವೇನು” ಎಂದು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಉದ್ಘಾಟನಾ ದಿನದಂದೇ ನೂತನ ಸಂಸದ್ ಭವನದತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಖ್ಯಾತ ಕುಸ್ತಿ ಪಟುಗಳನ್ನು ಪೊಲೀಸರು ಎಳೆದಾಡಿ ವಶಕ್ಕೆ ಪಡೆದ ಬಳಿಕ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ”ಧರಣಿ ನಡೆಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗದಿದ್ದರೆ ಹೊಸ ಸಂಸತ್ ಭವನದ ಅಗತ್ಯವೇನು? ನ್ಯಾಯಕ್ಕಾಗಿ ಒತ್ತಾಯಿಸಿ ಕೆಲವು ಕುಸ್ತಿಪಟುಗಳನ್ನು ಬಂಧಿಸಲಾಗಿದೆ ಎಂದು ತಿಳಿಯುವುದು ದುರದೃಷ್ಟಕರ. ನಾವು ಮನುಷ್ಯರು ಮತ್ತು ಭಾರತೀಯರು ಅವರೊಂದಿಗೆ ನಿಲ್ಲಬೇಕು ಮತ್ತು ಅವರ ಕಳವಳಗಳನ್ನು ವ್ಯಕ್ತಪಡಿಸಬೇಕು.ಅವರು ನಮಗಾಗಿ ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದ್ದರು ಮತ್ತು ನಾವು ಅವರನ್ನು ಭಾರತೀಯರು ಎಂದು ಹೆಮ್ಮೆ ಪಡಬೇಕು!!” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ : Protest ; ಖ್ಯಾತ ಕುಸ್ತಿಪಟುಗಳನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next