Advertisement

ಭಾರತದಲ್ಲಿ  ಫಿಫಾ ಕ್ರೇಜ್‌ ಹೇಗಿದೆ?

06:00 AM Jun 12, 2018 | Team Udayavani |

ವಿಶ್ವಕಪ್‌ ಫ‌ುಟ್‌ಬಾಲ್‌ ಕ್ರೇಜ್‌ ಭಾರತದಲ್ಲಿ ಹೇಗಿದೆ ಎಂಬ ಬಗ್ಗೆ ನಡೆದ ರಾಷ್ಟ್ರ ಮಟ್ಟದ ಸಮೀಕ್ಷೆಯೊಂದು ಬಹಳಷ್ಟು ರೋಚಕ ಸಂಗತಿಗಳನ್ನು ಹೊರಗೆಡಹಿದೆ. “ಎಕ್ಸ್‌ಚೇಂಜ್‌ 4 ಮೀಡಿಯಾ.ಕಾಮ್‌’ ಈ ಸಮೀಕ್ಷೆ ನಡೆಸಿದೆ.

Advertisement

ಭಾರತದಲ್ಲಿ ಶೇ. 83ರಷ್ಟು ಮಂದಿ ಫಿಫಾ ವಿಶ್ವಕಪ್‌ ಬಗ್ಗೆ ಅರಿತಿಕೊಂಡಿರುವುದೇ ಹೆಮ್ಮೆಯ ಸಂಗತಿ. ದೇಶದಲ್ಲಿ ಶೇ. 85ರಷ್ಟು ಮಂದಿ ಫ‌ುಟ್‌ಬಾಲ್‌ ಪಂದ್ಯಗಳನ್ನು ವೀಕ್ಷಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದರಲ್ಲಿ ಶೇ. 31ರಷ್ಟು ಮಂದಿ ಅಪ್ಪಟ ಫ‌ುಟ್‌ಬಾಲ್‌ ಅಭಿಮಾನಿಗಳು. ಇವರು ಎಲ್ಲ ಪಂದ್ಯವನ್ನೂ ನೋಡಲು ಬಯಸಿದ್ದಾರೆ. ಉಳಿದಂತೆ ಶೇ. 28ರಷ್ಟು ಮಂದಿ ತಮ್ಮ ನೆಚ್ಚಿನ ತಂಡಗಳ ಆಟವನ್ನಷ್ಟೇ ನೋಡಲು ನಿರ್ಧರಿಸಿದ್ದಾರೆ. ಶೇ. 26 ಮಂದಿ ಸಮಯ ಸಂದರ್ಭ ನೋಡಿಕೊಂಡು ಪಂದ್ಯ ವೀಕ್ಷಿಸಲಿದ್ದಾರೆ. ಕೇವಲ ಶೇ. 15ರಷ್ಟು ಜನರಷ್ಟೇ ಯಾವುದೇ ಪಂದ್ಯ ವೀಕ್ಷಿಸುವುದಿಲ್ಲ ಎಂದಿದ್ದಾರೆ.

ತಮ್ಮ ಗೆಳೆಯರೊಂದಿಗೆ ಅಥವಾ ಕುಟುಂಬದ ವರೊಂದಿಗೆ ಪಂದ್ಯ ವೀಕ್ಷಿಸುವುದು ಶೇ. 85ರಷ್ಟು ಫ‌ುಟ್‌ಬಾಲ್‌ ಪ್ರಿಯರ ಬಯಕೆ. ಶೇ. 69 ಮಂದಿ ಸಹೋದ್ಯೋಗಿಗಳೊಂದಿಗೆ ನೋಡುವುದಾಗಿ ಹೇಳಿದರೆ, ಶೇ. 62 ಮಂದಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಿಗೆ ಹೋಗಿ ಕಾಲ್ಚೆಂಡಿನ ಕಿಕ್‌ ಪಡೆಯಲು ಬಯಸಿದ್ದಾರೆ.

ವಿಶ್ವಕಪ್‌ ಪಂದ್ಯಗಳನ್ನು ಯಾವುದರಲ್ಲಿ ನೋಡು ತ್ತೀರಿ? ಟಿವಿ, ದೈತ್ಯ ಟೆಲಿವಿಷನ್‌ ಪರದೆ ಅಥವಾ ಮೊಬೈಲ್‌ ಇತ್ಯಾದಿಗಳಲ್ಲಿ… ಎಂಬ ಕುರಿತೂ ಈ ಸಮೀಕ್ಷೆ ಸ್ವಾರಸ್ಯಕರ ಅಂಕಿಅಂಶವನ್ನು ಬಿಚ್ಚಿಟ್ಟಿದೆ. 10ರಲ್ಲಿ 6 ಮಂದಿಗೆ (ಶೇ. 62ರಷ್ಟು) ಈಗಲೂ ಟೆಲಿವಿಷನ್ನೇ ಇಷ್ಟ. ಶೇ. 45ರಷ್ಟು ಜನರು ಇಂಟರ್ನೆಟ್‌ನಲ್ಲಿ, ಶೇ. 32ರಷ್ಟು ಜನರು ಮೊಬೈಲ್‌ನಲ್ಲಿ ಹಾಗೂ ಕೇವಲ ಶೇ. 15ರಷ್ಟು ಜನರು ಐಪ್ಯಾಡ್‌ ಹಾಗೂ ಟ್ಯಾಬ್ಲೆಟ್ಸ್‌ಗಳಲ್ಲಿ ನೋಡುವುದಾಗಿ ಹೇಳಿದ್ದಾರೆ. ಶೇ. 86ರಷ್ಟು ಭಾರತೀಯರು ರಶ್ಯ ಆತಿಥ್ಯದ ಬಗ್ಗೆ ಸಹಮತಿ ವ್ಯಕ್ತಪಡಿಸಿದ್ದಾರೆ.

ಗೆಲ್ಲುವವರು ಯಾರು?
ಸಮೀಕ್ಷೆಯ ವೇಳೆ ಈ ಬಾರಿಯ ಚಾಂಪಿಯನ್‌ ತಂಡ ಯಾವುದಾಗಬಹುದೆಂಬ ಬಗ್ಗೆಯೂ ಪ್ರಶ್ನೆಯನ್ನು ಕೇಳಲಾಯಿತು. ಅತ್ಯಧಿಕ ಮಂದಿ ಬ್ರಝಿಲ್‌ ಕಪ್‌ ಎತ್ತುವುದಾಗಿ ಹೇಳಿದರು. (ಶೇ. 22). ಆರ್ಜೆಂಟೀನಾ (ಶೇ. 14) ಮತ್ತು ಜರ್ಮನಿ (ಶೇ. 13) ಅನಂತರದ ಸ್ಥಾನದಲ್ಲಿವೆ.  ಭಾರತೀಯರ ರನ್ನರ್ ಅಪ್‌ ಲೆಕ್ಕಾಚಾರವೂ ಸ್ವಾರಸ್ಯಕರವಾಗಿದೆ. ಇಲ್ಲಿಯೂ ಬ್ರಝಿಲ್‌ ತಂಡವೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ (ಶೇ. 13). ಜರ್ಮನಿ (ಶೇ. 12) ಮತ್ತು ಆರ್ಜೆಂಟೀನಾ (ಶೇ. 12) ಅನಂತರದ ಸ್ಥಾನ ಪಡೆದಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next