Advertisement
ಚೆಕ್ ಪುಸ್ತಕದಲ್ಲಿ ಬದಲಾವಣೆಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್‌ಗಳ ಗ್ರಾಹಕರು ಗಮನಿಸಿ. ನಿಮ್ಮಲ್ಲಿರುವ ಚೆಕ್ ಪುಸ್ತಕ ಮತ್ತು ಎಂಐಸಿಆರ್ ಮತ್ತು ಐಎಫ್ಎಸ್‌ಸಿ ಕೋಡ್‌ಗಳು ಬದಲಾವಣೆಯಾಗಬೇಕಾಗಿದೆ. ಏಕೆಂದರೆ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗಳು ವಿಲೀನಗೊಂಡಿವೆ. ಹೀಗಾಗಿ, ಈ ಬ್ಯಾಂಕ್‌ಗಳ ಖಾತೆದಾರರು ಅ.1ರಿಂದ ಪಿಎನ್‌ಬಿಯ ಚೆಕ್ ಪುಸ್ತಕ ಬಳಕೆ ಮಾಡಬೇಕಾಗುತ್ತದೆ. ಇಂಟರ್‌ನೆಟ್ ಬ್ಯಾಂಕ್, ಎಟಿ ಎಂಗೆ ತೆರಳಿ, ಬ್ಯಾಂಕ್ ಶಾಖೆಗೆ ತೆರಳಿ ಈ ಬದಲಾವಣೆ ಮಾಡಿಕೊಳ್ಳಬಹುದು. ಇಂಡಿಯನ್ ಬ್ಯಾಂಕ್ ಜತೆಗೆ ವಿಲೀನವಾಗಿರುವ ಅಲಹಾಬಾದ್ ಬ್ಯಾಂಕ್ ಗ್ರಾಹಕರೂ ಹೊಸ ಚೆಕ್ ಪುಸ್ತಕ ಪಡೆದುಕೊಳ್ಳಬೇಕು. ಇದರ ಜತೆಗೆ ಎಂಐಸಿಆರ್ ಕೋಡ್ ಕೂಡ ಬದಲಾವಣೆಯಾಗಲಿದೆ.
ಪಿಂಚಣಿ ಪಡೆಯುತ್ತಿರುವ ಎಂಬತ್ತು ವರ್ಷ ವಯಸ್ಸಿಗಿಂತ ಮೇಲ್ಪಟ್ಟ ವರು ಜೀವನ ಪ್ರಮಾಣ ಕೇಂದ್ರಗಳಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಸಲ್ಲಿಸಬಹುದು. ದೇಶದಲ್ಲಿರುವ ಪ್ರಧಾನ ಅಂಚೆ ಕಚೇರಿಗಳಲ್ಲಿ ಅವು ಗಳನ್ನು ತೆರೆಯಲಾಗಿದೆ. ನ.31ರ ವರೆಗೆ ಅದನ್ನು ಸಲ್ಲಿಸಲು ಅವಕಾಶ ಉಂಟು. ಇದನ್ನೂ ಓದಿ:ಸರಕಾರಕ್ಕೆ 48 ಗಂಟೆಗಳ ಗಡುವು ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ
Related Articles
ಡೆಬಿಟ್ ಕಾರ್ಡ್ ಬದಲಾವಣೆ- 300 ರೂ. ಮತ್ತು ಜಿಎಸ್‌ಟಿ, ಡ್ಯುಪ್ಲಿಕೇಟ್ ಪಿನ್ ಬದಲು- 50 ರೂ. ಮತ್ತು ಜಿಎಸ್‌ಟಿ, ಅಂಚೆ ಬ್ಯಾಂಕ್‌ನ ಎಟಿಎಂನಲ್ಲಿ 5 ಉಚಿತ ವಹಿವಾಟು ಬಳಿಕ ಪ್ರತೀ ವಹಿವಾಟಿಗೆ 10 ರೂ. ಮತ್ತು ಜಿಎಸ್‌ಟಿ.
Advertisement
ಅಟೋ ಡೆಬಿಟ್ ಸೌಲಭ್ಯದಲ್ಲಿ ಬದಲು
ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಸೇರಿದಂತೆ ಹಲವು ಸಬ್‌ಸ್ಕ್ರಿಪ್ಶನ್ ಮಾಡಿಸಿಕೊಂಡವರ ಖಾತೆಯಿಂದ ಹಣ ಕಡಿತ ಮಾಡುವ 24 ಗಂಟೆಗಳ ಮೊದಲು ಗ್ರಾಹಕರಿಗೆ ಎಸ್‌ಎಂಎಸ್, ಇ-ಮೇಲ್ ಮೂಲಕ ದೃಢೀಕರಣ ಬರುತ್ತದೆ. ಗ್ರಾಹಕರು ಅದಕ್ಕೆ ಸಮ್ಮತಿ ಸೂಚಿಸದ ಹೊರತಾಗಿ ಖಾತೆಯಿಂದ ಹಣ ಪಾವತಿಯಾಗುವುದಿಲ್ಲ. ಹೂಡಿಕೆ ನಿಯಮ ಬದಲು
ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆ ನಿಗಳಲ್ಲಿ ಕೆಲಸ ಮಾಡುವ ಕಿರಿಯ ಉದ್ಯೋಗಿಗಳು ತಮ್ಮ ವೇತನದಲ್ಲಿ ಶೇ.10ರಷ್ಟನ್ನು ಅವರು ನಿರ್ವಹಿಸುತ್ತಿರುವ ಮ್ಯೂಚ್ಯುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಈ ನಿಯಮ ಜಾರಿಗೆ ತಂದಿದೆ. 2023ರ ಅಕ್ಟೋಬರ್‌ನಿಂದ ಉದ್ಯೋಗಿಗಳ ವೇತನದಲ್ಲಿ ಶೇ.20ರಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು. ಅದನ್ನು ನಿಗದಿತ ಅವಧಿಯ ವರೆಗೆ ವಿಥ್‌ಡ್ರಾ ಮಾಡುವಂತೆ ಇಲ್ಲ.