Advertisement

ಸ್ವಯಂ ನಾಶ ಸಂದೇಶ ಸೌಲಭ್ಯ ; ಹೊಸ ವರ್ಷದಲ್ಲಿ ವಾಟ್ಸ್‌ ಆ್ಯಪ್‌ನಲ್ಲಿ ಭರಪೂರ ಫೀಚರ್

10:10 AM Jan 07, 2020 | Hari Prasad |

ಹೊಸದಿಲ್ಲಿ: 2020ರ ಹೊಸ ವರ್ಷಕ್ಕೆ ಹತ್ತು ಹಲವು ವಿಶೇಷತೆಗಳನ್ನು ತನ್ನ ಗ್ರಾಹಕರಿಗೆ ನೀಡಲು ವಾಟ್ಸ್‌ಆ್ಯಪ್‌ ಸಜ್ಜಾಗಿದೆ. ಅವುಗಳಲ್ಲಿ ಬಹು ನಿರೀಕ್ಷೆಯ ಡಾರ್ಕ್‌ ಥೀಮ್‌, ಸೆಲ್ಫ್ – ಡಿಸ್ಟ್ರಕ್ಟಿಂಗ್‌ ಮೆಸೇಜಿಂಗ್‌ ಸೌಲಭ್ಯ ಮುಂತಾದವು ಪ್ರಮುಖವಾದವು.
ಸೆಲ್ಫ್ – ಡಿಸ್ಟ್ರಕ್ಟಿಂಗ್‌ ಮೆಸೇಜಿಂಗ್‌ ಸೌಲಭ್ಯವು ಗ್ರೂಪ್‌ ಚಾಟ್‌ಗಳಲ್ಲಿ ಮಾತ್ರವಲ್ಲದೆ, ಒನ್‌-ಟು-ಒನ್‌ ಚಾಟಿಂಗ್‌ಗಳಲ್ಲೂ ಲಭ್ಯವಿರಲಿದೆ. ಗ್ರೂಪ್‌ ಚಾಟ್‌ಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಆಯಾ ಗ್ರೂಪ್‌ ಅಡ್ಮಿನ್‌ಗಳು ಚಾಲನೆ ಅಥವಾ ನಿಷ್ಕ್ರಿಯಗೊಳಿಸಬಹುದು.

Advertisement

ಈ ವ್ಯವಸ್ಥೆಯಡಿ ಕಳುಹಿಸಲಾದ ಸಂದೇಶ, ಚಿತ್ರ ಅಥವಾ ವೀಡಿಯೋವು ಆ ಗ್ರೂಪ್‌ನ ಸದಸ್ಯರ ಮೊಬೈಲ್‌ಗ‌ಳಲ್ಲಿ ಎಷ್ಟು ಕಾಲಾವಧಿವರೆಗೆ ಇರಬೇಕು ಎಂಬುದನ್ನು ಮೊದಲೇ ನಿರ್ಧರಿಸಬಹುದು. ಇದರಡಿ 1 ಗಂಟೆ, 1 ದಿನ, 1 ವಾರ, 1 ತಿಂಗಳು ಅಥವಾ 1 ವರ್ಷ ಎಂಬ ಆಯ್ಕೆಗಳಿರುತ್ತವೆ. ಇದರಿಂದ, ಮೊಬೈಲ್‌ಗ‌ಳಲ್ಲಿನ ಮೆಮೊರಿಯಲ್ಲಿ ಹಳೆಯ ವಾಟ್ಸ್‌ಆ್ಯಪ್‌ನ ಅನವಶ್ಯಕ ಸಂಗ್ರಹಕ್ಕೆ ತಾನೇತಾನಾಗಿ ಕಡಿವಾಣ ಬೀಳಲಿದೆ.

ಹೀಗೆ, ಸೆಲ್ಫ್ ಡಿಸ್ಟ್ರಕ್ಟಿಂಗ್‌, ಡಾರ್ಕ್‌ ಥೀಮ್‌ ಜತೆಯಲ್ಲೇ ಯುಪಿಐ ಆಧಾರಿತ ವಾಟ್ಸ್‌ಆ್ಯಪ್‌ ಪೇಮೆಂಟ್‌, ಡೀಪರ್‌ ಮೆಸೆಂಜರ್‌, ಇನ್ ಸ್ಟ್ರಾಗ್ರಾಂ ಇಂಟೆಗ್ರೇಷನ್‌ ಮುಂತಾದ ಸೌಲಭ್ಯಗಳು ಇದೇ ವರ್ಷ ಜಾರಿಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next