Advertisement
ನಾಗರಿಕರ ಖಾಸಗಿತನ ರಕ್ಷಿಸುವ ನಿಟ್ಟಿನಲ್ಲಿ ವಾಟ್ಸ್‌ಆ್ಯಪ್ ಜತೆಗೆ ಜೂನ್‌ನಿಂದ ಚರ್ಚಿಸಲಾಗುತ್ತಿದ್ದರೂ ಸಂಸ್ಥೆ ಮಾಹಿತಿ ನೀಡಿಯೇ ಇರಲಿಲ್ಲ ಎಂದು ಹಿರಿಯ ಅಧಿಕಾರಿ ಶುಕ್ರವಾರ ಹೇಳಿದ್ದಾರೆ. ಕನ್ನ ಹಾಕಲಾಗಿರುವ ಮಾಹಿತಿ ಬಹಿರಂಗದ ಸಮಯವನ್ನೂ ಕೇಂದ್ರ ಪ್ರಶ್ನೆ ಮಾಡಿದೆ. ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಸೂಕ್ತ ಕಾನೂನು ರಚಿಸಲು ಸುಪ್ರೀಂಕೋರ್ಟ್‌ನಿಂದ 3 ತಿಂಗಳ ಸಮಯ ಕೋರಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಆ್ಯಂಡ್ರಾಯ್ಡ ವ್ಯವಸ್ಥೆ ಇರುವ ಮೊಬೈಲ್‌ಗಳಲ್ಲಿ ವಾಟ್ಸ್‌ಆ್ಯಪ್ ಅನ್ನು ಬಳಸುವವರು ಫಿಂಗರ್ ಪ್ರಿಂಟ್ ಲಾಕ್ ಅನ್ನು ಅಳವಡಿಸಲಾಗಿದೆ. ಗ್ರಾಹಕರ ಖಾಸಗಿತನ ರಕ್ಷಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಭಾರತದಲ್ಲಿ ಶೀಘ್ರವೇ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ಹೇಳಲಾಗಿದೆ. ಚಾಟ್ ಮಾಡಿರುವುದು, ಸಂದೇಶ ರವಾನೆಯನ್ನು ಹ್ಯಾಕ್ ಆಗುವುದರಿಂದ ರಕ್ಷಿಸಲು ಈ ವ್ಯವಸ್ಥೆ ನೆರವಾಗಲಿದೆ. ಈ ವ್ಯವಸ್ಥೆಯನ್ನು ಹೊಂದಲು ಗ್ರಾಹಕರು ಮೊದಲು ವಾಟ್ಸ್ ಆ್ಯಪ್ ಅಪ್‌ಡೇಟ್ ಮಾಡಬೇಕು. ಅನಂತರ ಸೆಟ್ಟಿಂಗ್ಸ್‌ಗೆ ಹೋಗಿ ಪ್ರೈವೆಸಿನಲ್ಲಿ ಫಿಂಗರ್ ಪ್ರಿಂಟ್‌ನಲ್ಲಿ ಲಾಕ್‌ನಲ್ಲಿ ಗ್ರಾಹಕರು ತಮ್ಮ ಬೆರಳನ್ನು ಇರಿಸಿ ತಮಗೆ ಬೇಕಾದ ಸಮಯಕ್ಕೆ ಅನುಗುಣವಾಗಿ ಆ್ಯಪ್ ಅನ್ನು ಅಲ್‌ಲಾಕ್ ಮಾಡಿಕೊಳ್ಳುವ ವ್ಯವಸ್ಥೆ ಪರಿಚಯಿಸಲಾಗಿದೆ.