Advertisement

ವಾಟ್ಸ್‌ ಆ್ಯಪ್‌ನಿಂದ ಶೀಘ್ರ ಗ್ರೂಪ್‌ ಕಾಲ್‌ ಸೌಲಭ್ಯ?

07:33 PM Apr 18, 2020 | Hari Prasad |

ಹೊಸದಿಲ್ಲಿ: ಲಾಕ್‌ ಡೌನ್‌ ಅವಧಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಕಾಲ್‌ ಬಳಕೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಇದೀಗ ವಾಟ್ಸ್‌ ಆ್ಯಪ್‌ ಕೂಡ ವಿಡಿಯೋ ಕಾಲ್‌ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ.

Advertisement

ಜಗತ್ತಿನಲ್ಲಿ ವಿಡಿಯೋ ಕಾನ್ಫರೆನ್ಸ್‌ ಕಾಲ್‌ಗೆ ಜನಪ್ರಿಯವಾಗಿರುವ ಝೂಮ್‌ ಆ್ಯಪ್‌ ವಿರುದ್ಧ ಕೇಂದ್ರ ಸರಕಾರ ಆಕ್ಷೇಪವೆತ್ತಿರುವ ಹಿನ್ನೆಲೆಯಲ್ಲಿ ವಾಟ್ಸ್‌ ಆ್ಯಪ್‌ನ ಈ ನಿರ್ಧಾರ ಕುತೂಹಲಕಾರಿಯಾಗಿದೆ.

ಪ್ರಸ್ತುತ ವಾಟ್ಸ್‌ ಆ್ಯಪ್‌ ನಲ್ಲಿ ನಾಲ್ವರು ಮಾತ್ರ ವಿಡಿಯೋ ಕಾಲ್ ನಲ್ಲಿ ಏಕಕಾಲದಲ್ಲಿ ಭಾಗವಹಿಸಲು ಅವಕಾಶವಿದೆ. ಮುಂದಿನ ಆವೃತ್ತಿಯಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದ್ದು, ಆದರೆ, ಎಷ್ಟು ಸಂಖ್ಯೆ ಎಂಬುದನ್ನು ಹೇಳಿಲ್ಲ.

ಗ್ರೂಪ್‌ ವಿಡಿಯೋ ಕಾಲ್‌ ಬಳಸಬೇಕಾದರೆ ಪ್ರತಿಯೊಬ್ಬರೂ ತಮ್ಮ ಆ್ಯಪ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕಾಗಿದೆ. ಶೀಘ್ರವೇ ಈ ಸೇವೆ ಸಿಗಲಿದೆ ಉಚಿತವಾಗಿ ಈ ಸೇವೆ ಸಿಗುವುದೋ ಅಥವಾ ಶುಲ್ಕ ವಿಧಿಸಲಾಗುತ್ತದಯೇ ಎಂಬುದು ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next