Advertisement

ಪ್ರವಾಹ ಸಂತ್ರಸ್ತರಿಗೆ ವಾಟ್ಸ್ ಪ್ ಗ್ರೂಪ್ ನೆರವು

03:12 PM Aug 26, 2019 | Suhan S |

ಮಂಡ್ಯ: ನೆರೆ ಸಂತ್ರಸ್ತರಿಗೆ ವಾಟ್ಸ್‌ಆ್ಯಪ್‌ ಗ್ರೂಪ್‌ನ ‘ನೆರವಿಗಾಗಿ ನಾವು ನೀವು’ ಎಂಬ ಉದ್ದೇಶದಂತೆಯೇ ನೆರವು ನೀಡುವ ಮೂಲಕ, ಗ್ರೂಪ್‌ನ ಸದಸ್ಯರು ಮಾದರಿಯಾಗಿ ದ್ದಾರೆಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ‘ನೆರವಿಗಾಗಿ ನಾವು-ನೀವು’ ವಾಟ್ಸ್‌ ಆ್ಯಪ್‌ ಗ್ರೂಪ್‌ನಿಂದ ಸಂಗ್ರಹಿಸಿ ದಿನ±‌ಯೋಗಿ ವಸ್ತುಗಳನ್ನು ಕೊಂಡೂಯ್ಯಲು ಸಿದ್ಧತೆ ನಡೆಸಿದ್ದ ಸದಸ್ಯರ ಸರಕು ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಮಾರು 2 ಲಕ್ಷ ರೂ.ಗೂ ಹೆಚ್ಚು ದಿನ ಬಳಕೆಯ ವಸ್ತುಗಳನ್ನು ಗ್ರೂಪ್‌ ಸದಸ್ಯರು ಸಂಗ್ರಹಿಸಿ ಅದನ್ನು, ಸ್ವತಃ ಸದಸ್ಯರೇ ನೆರೆಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಿಂದ ನೆರೆ ಬಂದು ಹಾನಿಯಾಗಿದೆ. ಅಂತಹ ಪ್ರದೇಶಗಳನ್ನು ಗುರುತಿಸಿ ನೆರವು ನೀಡುವ ಮೂಲಕ ಸಂತ್ರಸ್ತರ ಪರವಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ರೈತರು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಉದಾರವಾಗಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಿಪಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಒಂದು ತಿಂಗಳ ವೇತನ ನೀಡುವ ಮೂಲಕ ಸಹಕರಿಸಿದ್ದಾರೆ. ನೆರೆ ಸಂತ್ರಸ್ತರ ಸಹಾಯಕ್ಕೆ ಇನ್ನಷ್ಟು ಸಹಾಯ ಮಾಡುವ ಮನಗಳು ಬೇಕಿವೆ. ಆ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ಭಾರಿ ಪ್ರಮಾಣದಿಂದ ಪ್ರಕೃತಿ ವಿಕೋಪಕ್ಕೆ ಜನರು ಸಿಲುಕಿದ್ದಾರೆ. ರಾಜ್ಯದಲ್ಲಿ ಇದಕ್ಕೆ ಬಲಿಯಾದ ಜಿಲ್ಲೆಗಳು 17ಆಗಿವೆ. ಇದರಲ್ಲಿ ವಿಶೇಷವಾಗಿ ಕೊಡಗು ಹಾಗೂ ಮಂಡ್ಯ ಜಿಲ್ಲೆಗೆ ಅವಿನಾಭಾವ ಸಂಬಂಧ ಇದೆ.

Advertisement

ಈ ದಿಸೆಯಲ್ಲಿ ನೆರವಿಗಾಗಿ ನಾವು ನೀವು ವಾಟ್ಸ್‌ ಆ್ಯಪ್‌ ಗ್ರೂಪ್‌ ಸದಸ್ಯರು ನೆರೆಸಂತ್ರಸ್ತರಿಗೆ ದಿನ ನಿತ್ಯದ ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿರುವ ಕೊಡುಗು ಪ್ರದೇಶಕ್ಕೆ ಖುದ್ಧಾಗಿ ತೆಗೆದುಕೊಂಡು ಹೋಗುತ್ತಿರುವುದು ಮೆಚ್ಚುಗೆ ವಿಷಯವಾಗಿದೆ. ನೆರವು ನೀಡುವುದರಲ್ಲಿಯೂ ಜಿಲ್ಲೆಯಿಂದ ಜನರು ಯೆಥೇಚ್ಚವಾಗಿ ಸಹಾಯ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ಶ್ಲಾಘಿಸಿದರು. ಸೆಸ್ಕ್ ಅಧೀಕ್ಷಕ ಎಂಜಿನಿಯರ್‌ ಎನ್‌.ಶ್ರೀನಿವಾಸಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್‌.ರಾಜು, ಉದ್ಯಮಿ ಎಂ.ಆರ್‌. ಮಂಜುನಾಥ್‌, ಮನ್‌ಮುಲ್ ಮಾಜಿ ನಿರ್ದೇಶಕಿ ನೀನಾ ಪಟೇಲ್, ಸ್ವರ್ಣಸಂದ್ರ ಸೋಮು, ಹಿರಿಯ ಪತ್ರಕರ್ತ ಚಿಕ್ಕಮಂಡ್ಯ ನವೀನ್‌, ಪ್ರವೀಣ್‌ಕುಮಾರ್‌, ಗೋಪಾಲಪುರ ಶ್ರೀನಿವಾಸ್‌ ಇತರರು ಸ್ಥಳದಲ್ಲಿ ಹಾಜರಿದ್ದರು.

ಅಗತ್ಯ ಆಹಾರ ಸಾಮಗ್ರಿ ರವಾನೆ:

ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಹಾಗೂ ಕೊಡಗು ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಯಿತು.

ಅಲೆಮಾರಿ ಬಾಯ್ಸ ಸಂಸ್ಥೆ ವತಿಯಿಂದ ಪಟ್ಟಣದ ವಿವಿಧೆಡೆ ಆಹಾರ ಪದಾರ್ಥ ಸೇರಿದಂತೆ ಇನ್ನಿತರೆ ಅಗತ್ಯ ಸಾಮಗ್ರಿಗಳನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿ ಭಾನುವಾರ ವಾಹನದ ಮೂಲಕ ರವಾನಿಸಿದರು.

ಸಂತ್ರಸ್ತರಿಗೆ ಅಗತ್ಯವಿರುವ ಬಟ್ಟೆ, ಹೊದಿಕೆ, ಅಕ್ಕಿ, ಗೋಧಿ, ಸಕ್ಕರೆ, ಹಾಲು ಸೇರಿದಂತೆ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಸಾರ್ವಜನಿಕರಿಂದ ಹಾಗೂ ಮನೆ ಮನೆ ತೆರಳಿ ಸಂಗ್ರಹಿಸಿದರು.

ಸಂಸ್ಥೆಯ ಅಧ್ಯಕ್ಷ ಪ್ರಶಾಂತ್‌ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಅನೇಕ ಮಂದಿ ತಮ್ಮ ಮನೆ, ಮಠಗಳನ್ನು ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿದ್ದು ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆ ವತಿಯಿಂದ ಧೇಣಿಗೆ ಹಾಗೂ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಕಳುಹಿಸಿ ಕೊಡುತ್ತಿರುವುದಾಗಿ ಹೇಳಿದರು.

ಮನು, ಜ್ಯೋತಿ, ಕುಶಾಲ್, ಚಂದ್ರು, ರಾಜು ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next