ಇಂದು ನಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ವಾಟ್ಸಪ್ ಪ್ರಮುಖ ಸ್ಥಾನ ಪಡೆದಿದೆ. ಗೆಳೆಯರು, ಬಂಧುಗಳು ಅನೇಕ ಮೆಸೇಜ್ ಗಳನ್ನು, ಫೋಟೋ, ವಿಡಿಯೋಗಳನ್ನು ವಾಟ್ಸಪ್ ಮೂಲಕ ಶೇರ್ ಮಾಡುತ್ತಿರುತ್ತಾರೆ. ಇವುಗಳಲ್ಲಿ ಹೆಚ್ಚಿನವು ಜಂಕ್ ಮೆಸೇಜ್‌ಗಳಾದರೂ,ಕೆಲವೊಂದು ಅಗತ್ಯವಾದವು ಗಳಾಗಿರುತ್ತವೆ. ನೀವು ಕಳುಹಿಸಿದ ಮಾಹಿತಿಗಳಿರುತ್ತವೆ. ಅದರಲ್ಲಿ ಹಣ ಕಳುಹಿಸಿದ ಸ್ಕ್ರೀನ್ ಶಾಟ್ ಇರಬಹುದುಅಥವಾ ಅಮೂಲ್ಯವಾದ ಫೋಟೋ ಇರಬಹುದು. ನಿಮಗೆ ಯಾವತ್ತೋ ಅದು ಬೇಕಾಗುತ್ತದೆ. ಆಗ ಆ ವ್ಯಕ್ತಿಯಚಾಟ್‌ಗೆ ಹೋಗಿ ಹುಡುಕಿದಾಗ ಆ ಮೆಸೇಜ್ ನಿಮಗೆ ದೊರಕುತ್ತದೆ.
ನೀವು ಹೊಸದೊಂದು ಫೋನ್ ಕೊಂಡಾಗ, ಅಲ್ಲಿಗೆ ವಾಟ್ಸಪ್ ಇನ್ ಸ್ಟಾಲ್ ಮಾಡಿಕೊಂಡಾಗ, ನಿಮ್ಮ ಹಳೆಯ ಫೋನ್‌ನಲ್ಲಿದ್ದ ವಾಟ್ಸಪ್ ಮೆಸೇಜ್ ಫೋಟೋ ಇರುವುದಿಲ್ಲ.ಹೊಸದಾಗಿ ಅಂದಿನಿಂದ ವಾಟ್ಸಪ್ ಚಾಟ್ ಶುರುವಾಗುತ್ತವೆ.ಆದರೆ, ನೀವು ಒಂದು ಸೆಟಿಂಗ್ ಮಾಡಿಕೊಂಡರೆ ನಿಮ್ಮಹೊಸ ಮೊಬೈಲಿನಲ್ಲೂ ಹಿಂದಿನ ಫೋನಿನಲ್ಲಿದ್ದ ವಾಟ್ಸಪ್‌ನ ಎಲ್ಲ ಚಾಟ್‌ಗಳನ್ನೂ ಹೊಸ ಫೋನಿನಲ್ಲೂ ಉಳಿಸಿಕೊಳ್ಳಬಹುದು.
ಹೇಗೆಂದರೆ- ನಿಮ್ಮ ವಾಟ್ಸಪ್‌ಗೆ ಹೋಗಿ ಬಲಮೂಲೆಯ ಮೂರು ಚುಕ್ಕಿಗಳನ್ನು ಒತ್ತಿ.ನಂತರ ಕೆಳಗೆ ಸೆಟಿಂಗ್ಸ್ ಇದೆ. ಅದನ್ನು ತೆರೆದಾಗ ಚಾಟ್ಸ್‌ಎಂಬ ಆಯ್ಕೆ ಕಾಣುತ್ತದೆ. ಅದನ್ನು ಒತ್ತಿ, ನಂತರ ಚಾಟ್‌ಬ್ಯಾಕಪ್ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಒತ್ತಿ. ನಂತರ ಅಲ್ಲಿ ಮೂರು ನಾಲ್ಕು ಆಯ್ಕೆಗಳನ್ನು ಸೆಟ್ ಮಾಡಬೇಕು. ಅಲ್ಲಿ ಗೂಗಲ್ ಡ್ರೈವ್ ಸೆಟಿಂಗ್ಸ್ ಇದೆ. ಅದರ ಕೆಳಗೆ, ಬ್ಯಾಕಪ್‌ಟು ಗೂಗಲ್ ಡ್ರೈವ್ ಅಂತಿದೆ. ಅದನ್ನು ಒತ್ತಿ, ಬಳಿಕ ನೆವರ್,ಓನ್ ಲಿ ವೆನ್ ಐ ಟ್ಯಾಪ್ ಬಾಕಪ್, ಡೈಲಿ, ವೀಕ್ಲಿ, ಮಂತ್ಲಿ ಎಂಬ ಆಯ್ಕೆಗಳಿವೆ. ಡೈಲಿ ಎಂಬುದನ್ನು ಆರಿಸಿಕೊಳ್ಳಿ. ಬಳಿಕ ಗೂಗಲ್ ಅಕೌಂಟ್ ಎಂದು ನಿಮ್ಮಜಿ ಮೇಲ್ ಐಡಿ ಇರುತ್ತದೆ. ಅದನ್ನೇನೂ ಮಾಡುವಂತಿಲ್ಲ. ಅದರ ಕೆಳಗೆ ಬ್ಯಾಕಪ್ ಓವರ್ ಆಯ್ಕೆ ಇದೆ. ಅದನ್ನು ಟಚ್‌ಮಾಡಿದಾಗ ವೈಫೈ, ವೈಫೈ ಆರ್ ಸೆಲ್ಯುಲರ್ ಎಂಬ ಆಯ್ಕೆಗಳಿವೆ. ಇದರಲ್ಲಿ ವೈಫೈ ಆರ್ ಸೆಲ್ಯುಲರ್ ಆರಿಸಿಕೊಳ್ಳಿ. ಬಳಿಕಅದರ ಕೆಳಗೆ, ಇನ್‌ಕ್ಲೂಡ್ ವಿಡಿಯೋಸ್‌ಇರುತ್ತದೆ. ಅಂದರೆ ನಿಮ್ಮ ವಾಟ್ಸಪ್‌ಚಾಟ್‌ನ ಬ್ಯಾಕಪ್‌ನಲ್ಲಿ ವಿಡಿಯೋಗಳನ್ನೂ ಸೇರಿಸಬೇಕಾ? ಅಂತ. ಈ ವಿಡಿಯೋಗಳನ್ನೆಲ್ಲ ಉಳಿಸಿಕೊಳ್ಳುವ ಅಗತ್ಯವಿಲ್ಲ. ಹಾಗಾಗಿ ಇನ್‌ಕ್ಲೂಡ್‌ವಿಡಿಯೋಸ್ ಡಿಸೇಬಲ್ ಮಾಡಿಕೊಳ್ಳಿ.
ಇಷ್ಟು ಮಾಡಿದರೆ ಪ್ರತಿದಿನ ನಿಮ್ಮ ವಾಟ್ಸಪ್ ಚಾಟ್‌ಗಳೆಲ್ಲ ಗೂಗಲ್ ಡ್ರೈವ್ ನಲ್ಲಿ ಬ್ಯಾಕಪ್ ಆಗುತ್ತಿರುತ್ತವೆ. ಇಷ್ಟಲ್ಲದೇ ನಿಮಗೆ ಬೇಕೆನಿಸಿದಾಗ ಸೆಟಿಂಗ್‌ಗೆಹೋಗಿ ಚಾಟ್ ಬ್ಯಾಕಪ್‌ಗೆ ಹೋಗಿಅಲ್ಲಿ ಹಸಿರು ಬಣ್ಣದಲ್ಲಿರುವ ಬ್ಯಾಕಪ್‌ಎಂಬ ಆಯ್ಕೆ ಒತ್ತಿ ಆ ಕ್ಷಣವೇ ಬ್ಯಾಕಪ್ ಮಾಡಿಕೊಳ್ಳಬಹುದು. ಒಂದು ನೆನಪಿಡಿ, ನೀವು ಡೈಲಿ ಬ್ಯಾಕಪ್ ಆಯ್ಕೆ ಮಾಡಿಕೊಂಡಾಗಪ್ರತಿದಿನ ಬ್ಯಾಕಪ್ ಆಗಿ ಚಾಟ್‌ಗಳು ಸಂಗ್ರಹವಾಗಿರುತ್ತವೆ. ಹೊಸದಾಗಿ ತಕ್ಷಣ ಬ್ಯಾಕಪ್ ಕೊಟ್ಟಾಗನಿಮ್ಮ ವಾಟ್ಸಪ್‌ನಲ್ಲಿ ಅನೇಕ ದಿನಗಳಿಂದ ಇರುವ ಚಾಟ್‌ಗಳು ಬ್ಯಾಕಪ್ ಆಗಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ!
ಪ್ರಮುಖ ಹಂತ: ನೀವು ಹೊಸ ಫೋನ್ ಕೊಂಡಾಗ,ಅದರಲ್ಲಿ ವಾಟ್ಸಪ್ ಇನ್‌ಸ್ಟಾಲ್ ಮಾಡಿದಾಗ ಮೊದಲಿನಿಂದನಿಮ್ಮ ನಂಬರ್, ಹೆಸರು ಎಲ್ಲವನ್ನೂ ಕೇಳುತ್ತದೆ. ಅದನ್ನುನಮೂದಿಸಿದ ಬಳಿಕ ಹಳೆಯ ಬ್ಯಾಕಪ್ ರಿಸ್ಟೋರ್‌ಮಾಡಬೇಕಾ? ಎಂಬ ಆಯ್ಕೆ ಬರುತ್ತದೆ. ರಿಸ್ಟೋರ್ ಆಯ್ಕೆಆರಿಸಿಕೊಳ್ಳಿ. ನೀವು ಅದನ್ನು ಆಯ್ಕೆ ಮಾಡಿಕೊಳ್ಳದಿದ್ದರೆಗೂಗಲ್ ಡ್ರೈವ್‌ನಲ್ಲಿದ್ದ ನಿಮ್ಮ ಚಾಟ್‌ಗಳು ಹೊಸ ಫೋನಿಗೆ ಹೋಗುವುದಿಲ್ಲ. ಆದ್ದರಿಂದ ಹೊಸ ಫೋನಿನಲ್ಲಿ ರಿಸ್ಟೋರ್‌ಬ್ಯಾಕಪ್ ಎಂಬ ಆಯ್ಕೆ ಒತ್ತುವುದನ್ನುಮರೆಯಬೇಡಿ.ಇಷ್ಟು ಮಾಡಿದರೆ, ನಿಮ್ಮ ಹಳೆಯ ಫೋನಿನಲ್ಲಿದ್ದಂತೆ,ಯಾವ ವ್ಯತ್ಯಾಸವೂ ಆಗದಂತೆ, ಒಂದು ಮೆಸೇಜ್ ಸಹಅಳಿಸದಂತೆ, ನಿಮ್ಮ ಹೊಸ ಫೋನಿನಲ್ಲಿ ವಾಟ್ಸಪ್ ಚಾಟ್ ಗಳು ಬಂದು ಸೇರುತ್ತವೆ.
-ಕೆ.ಎಸ್. ಬನಶಂಕರ ಆರಾಧ್ಯ