Advertisement

ಬಂತು ನೋಡಿ ವಾಟ್ಸ್ ಆ್ಯಪ್ ಬ್ಯಾಂಕಿಂಗ್‌

05:31 PM Apr 06, 2020 | Suhan S |

ಲಾಕ್‌ಡೌನ್‌ ಸಮಯದಲ್ಲಿ ಬ್ಯಾಂಕಿಂಗ್‌ ಸೇವೆಯನ್ನು ಸುಲಭವಾಗಿಸಲು, ಐಸಿಐಸಿಐ ಬ್ಯಾಂಕ್‌, “ವಾಟ್ಸ್ಯಾಪ್‌ ಬ್ಯಾಂಕಿಂಗ್‌’ ಸೇವೆಯನ್ನು ಶುರುಮಾಡಿದೆ…

Advertisement

ಇವತ್ತು ಬ್ಯಾಂಕ್‌ ಬ್ಯಾಲೆನ್ಸ್ ಕ್ರೆಡಿಟ್‌ ಲಿಮಿಟ್‌, ಸಾಲ, ಇತ್ಯಾದಿಗಳಿಗೆ ವೆಬ್‌ಸೈಟ್‌ ಬಳಸುತ್ತೇವೆ. ಕೆಲವರದ್ದು ಬ್ಯಾಂಕ್‌ ಆ್ಯಪ್‌ ಕೂಡ ಆಯ್ಕೆ. ಈಗ ಸಾಮಾನ್ಯವಾಗಿ ಎಲ್ಲರೂ ವಾಟ್ಸಾಪ್‌ ಬಳಸುತ್ತಾರೆ. ಆ ಆ್ಯಪ್‌ನಲ್ಲಿ, ನಿಮಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಬ್ಯಾಂಕ್‌ ಒದಗಿಸುತ್ತದೆ, ಇದೇ ವಾಟ್ಸಾಪ್‌ ಬ್ಯಾಂಕಿಂಗ್‌.

ವಾಟ್ಸ್ ಆ್ಯಪ್ ಬ್ಯಾಂಕಿಂಗ್‌ ಸೇವೆಯಲ್ಲಿ:

  • ತಮ್ಮ ಖಾತೆಯ ಬಗ್ಗೆ ಮಾಹಿತಿ ಪಡೆಯಬಹುದು.
  • ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ನೋಡಬಹುದು.
  • ಕಳೆದ ಮೂರು ಚಲಾವಣೆಯ ಬಗ್ಗೆ ಮಾಹಿತಿ.
  • ಕ್ರೆಡಿಟ್‌ ಕಾರ್ಡ್‌ ಲಿಮಿಟ್‌.
  • ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಬ್ಲಾಕಿಂಗ್‌ ಅಥವಾ ಅನ್‌ ಬ್ಲಾಕಿಂಗ್‌.
  • ನಮ್ಮ ಸಮೀಪ ಇರುವ ಮೂರು ಎಟಿಎಮ್‌ ಕೇಂದ್ರಗಳ ಬಗ್ಗೆ ಮಾಹಿತಿ ಪಡೆಯಬಹುದು.

 

ಯಾರು ಈ ಸೇವೆಗೆ ಅರ್ಹರು? :  ಐಸಿಐಸಿಐ ಬ್ಯಾಂಕ್‌ ಗ್ರಾಹಕರು. ಕೇವಲ ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ ಇರುವವರೂ ಬಳಸಬಹುದು. ಐಸಿಐಸಿಐ ಗ್ರಾಹಕರಲ್ಲದೇ ಹೋದವರು, ಕೇವಲ ಎಟಿಎಮ್‌ ಕೇಂದ್ರದ ಬಗ್ಗೆ ಮಾಹಿತಿ ಪಡೆಯಲು ಬಳಸಬಹುದು.

Advertisement

ಹೇಗೆ ಈ ಸೇವೆ ಪಡೆಯಬೇಕು? :  ಮೊದಲು ಐಸಿಐಸಿಐ ಬ್ಯಾಂಕ್‌ ವಾಟ್ಸಾಪ್‌ ನಂಬರ್‌ 9324953001 ಅನ್ನು ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಳ್ಳಿ. ಆ ಅಂಕೆಗೆ, ನೀವು ಬ್ಯಾಂಕಿನಲ್ಲಿ ನೋಂದಣಿ ಮಾಡಿಕೊಂಡ ಅಂಕೆಯಿಂದ “Hi’ ಎಂದು ಸಂದೇಶ ಕಳುಹಿಸಿ. ಆಗ ನೀವು ಬ್ಯಾಂಕ್‌ ವಾಟ್ಸಾಪ್‌ನಲ್ಲಿ ರಿಜಿಸ್ಟರ್‌ ಆಗುತ್ತೀರ. ಅದಾದ  ನಂತರ, ನೀವು ಒಂದಿಷ್ಟು ಮುಖ್ಯವಾದ ಶಬ್ಧ (ಕೀ ವರ್ಡ್ಸ್) ಬಳಸಿ ಸೇವೆಯನ್ನು ಪಡೆಯ ಬಹುದು. ಉದಾ ಹರಣೆಗೆ- ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ನೋಡಲು Balance ಟೈಪ್‌ ಮಾಡಿ. ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತೋರಿಸುತ್ತದೆ. Card Limit ಎಂದು ಬರೆದು ಕಳುಹಿಸಿದರೆ, ಕಾರ್ಡ್‌ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ATM ಟೈಪ್‌ ಮಾಡಿದರೆ ನಿಮ್ಮ ಜಾಗವನ್ನು ಕೇಳುತ್ತದೆ. ವಾಟ್ಸಾéಪ್‌ನಲ್ಲಿ “ಲೊಕೇಷನ್‌’ ಕಳಿಸಿದರೆ, ಅಕ್ಕಪಕ್ಕದಲ್ಲಿ ಇರುವ ಎಟಿಎಮ್‌ ಕೇಂದ್ರಗಳನ್ನು ತೋರಿಸುತ್ತದೆ.

 

-ವಿಕ್ರಮ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next